• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ನನ್ನ ಅವಧಿಯೊಳಗೆ ದಾವಣಗೆರೆಯನ್ನು ಕ್ಲೀನ್, ಗ್ರೀನ್ ಸಿಟಿ ಮಾಡುತ್ತೇನೆ"

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ನವೆಂಬರ್ 23; ಮಹಾನಗರ ಪಾಲಿಕೆ ವ್ಯಾಪ್ತಿಯ 45 ವಾರ್ಡ್ ‍ಗಳಲ್ಲಿಯೂ ನಾಗರಿಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ವಿನೂತನ ಯೋಜನೆಯನ್ನು ನ.25ರಿಂದ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮೇಯರ್ ಬಿ.ಜಿ. ಅಜಯ ಕುಮಾರ್ ತಿಳಿಸಿದರು.

ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾಗರಿಕರ ಅಹವಾಲುಗಳ ಸ್ವೀಕಾರ ಮತ್ತು ಸಾರ್ವಜನಿಕ ಯೋಜನೆಗಳ ಸೌಲಭ್ಯವನ್ನು ಪ್ರತಿ ವಾರ್ಡ್ ಗಳಲ್ಲಿಯೂ ಸ್ಥಳದಲ್ಲೇ ಕಲ್ಪಿಸಿಕೊಡಲಾಗುವುದು. ಜನನ-ಮರಣ, ಖಾತೆ ನೋಂದಣಿ, ದೃಢೀಕರಣ, ಕಟ್ಟಡ ಪರವಾನಗಿ, ಉದ್ದಿಮೆ ಪರವಾನಗಿ, ಮನೆ ಕಂದಾಯ, ನೀರಿನ ಕಂದಾಯ, ಹೊಸ ನಲ್ಲಿ ಸಂಪರ್ಕ, ಹಕ್ಕುಪತ್ರ ಸೇರಿದಂತೆ ಸಕಾಲದಡಿ ಬರುವ ಯೋಜನೆಗಳನ್ನು ಮನೆ ಬಾಗಿಲಿಗೆ ಅಧಿಕಾರಿಗಳು ಬಂದು ಮಾಡಿಕೊಡಲಿದ್ದಾರೆ ಎಂದು ವಿವರಿಸಿದರು.

ದಿನೇಶ್‌ ಶೆಟ್ಟಿಯ ಭ್ರಷ್ಟಾಚಾರ ಶೀಘ್ರದಲ್ಲಿ ಬಹಿರಂಗಪಡಿಸುತ್ತೇನೆ: ದಾವಣಗೆರೆ ಮೇಯರ್

ರಾಜ್ಯದ 10 ಮಹಾನಗರ ಪಾಲಿಕೆಯಲ್ಲಿ ಈ ರೀತಿ ಯಾರೂ ಮಾಡಿಲ್ಲ. ದಾವಣಗೆರೆ ಮಹಾನಗರ ಪಾಲಿಕೆ ಮಾತ್ರ ಇಂಥ ಕಾರ್ಯಕ್ರಮ ರೂಪಿಸುವ ಮೂಲಕ ಹೊಸ ಆವಿಷ್ಕಾರಕ್ಕೆ ಮುಂದಾಗಿದೆ ಎಂದರು.

ನ.25ರ ಬೆಳಿಗ್ಗೆ 9 ಗಂಟೆಗೆ ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ಒಂದನೇ ವಾರ್ಡ್ ‍ನ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಗುವುದು. ಪಾಲಿಕೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂದು ಜನರ ಮನೆ ಬಾಗಿಲಿಗೆ ಹೋಗಿ ಅವರ ಕೆಲಸ ಮಾಡಿಕೊಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಜನರು ಬಂದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂಬಂಧ ಈಗಾಗಲೇ ಕಸದ ವಾಹನ, ಆಟೋ ಮೂಲಕ ಕರಪತ್ರ ವಿತರಣೆಯೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

3 ತಿಂಗಳಿನಲ್ಲಿ ದಾವಣಗೆರೆ ಕ್ಲೀನ್ ಸಿಟಿ

ದಾವಣಗೆರೆಯನ್ನು ಸ್ವಚ್ಛ ನಗರವನ್ನಾಗಿಸುವ ಹಿನ್ನೆಲೆಯಲ್ಲಿ ಎಲ್ಲ ಪೌರ ಕಾರ್ಮಿಕರನ್ನು ಒಂದೇ ವಾರ್ಡ್ ಗೆ ನಿಯೋಜಿಸಿ ಸ್ವಚ್ಛಗೊಳಿಸುವ ಕೆಲಸ ಮಾಡಲಾಗುವುದು. ಈ ಕಾರ್ಯಯೋಜನೆ ಮುಂದಿನ ತಿಂಗಳಿನಲ್ಲಿ ಕಾರ್ಯರೂಪಕ್ಕೆ ಬರಲಿದೆ. ಈ ಹಿಂದೆ ಸ್ವಚ್ಛತೆಯಲ್ಲಿ ದಾವಣಗೆರೆ 25ನೇ ಸ್ಥಾನದಲ್ಲಿತ್ತು. ಅದನ್ನು ಐದನೇ ಸ್ಥಾನಕ್ಕೆ ತರುವ ಕನಸು ಹೊಂದಿದ್ದೇನೆ. ಬರುವ ಫೆಬ್ರವರಿ 18ಕ್ಕೆ ನನ್ನ ಅವಧಿ ಪೂರ್ಣಗೊಳ್ಳಲಿದ್ದು, ಅಷ್ಟರಲ್ಲಿ ಎಲ್ಲ ಸದಸ್ಯರ ಸಹಕಾರದೊಂದಿಗೆ ದಾವಣಗೆರೆಯನ್ನು ಕ್ಲೀನ್ ಸಿಟಿ ಮಾಡುತ್ತೇನೆ ಎಂದರು.

1 ಲಕ್ಷ ಸಸಿ ವಿತರಣೆ: ನಗರದಲ್ಲಿ ಒಂದು ಲಕ್ಷ ಸಸಿ ನೆಡಲಾಗುವುದು. ಈ ನಗರವನ್ನು ಗ್ರೀನ್ ಸಿಟಿ ಮಾಡುವುದು ನನ್ನ ಕನಸು. ಅದಕ್ಕಾಗಿ ಈಗಾಗಲೇ 18 ಜಾತಿಯ ವಿವಿಧ ರೀತಿಯ ಆಲಂಕಾರಿಕ ಗಿಡಗಳನ್ನು ಒಳಗೊಂಡಂತೆ ಒಂದು ಲಕ್ಷ ಸಸಿಗಳಿಗೆ ಟೆಂಡರ್ ಪ್ರಕ್ರಿಯೆ ನೀಡಲಾಗಿದೆ., ಈಗ ಒಂದು ವಾರ್ಡ್ ‍ಗೆ 100 ಸಸಿಗಳು ಮತ್ತು ಮುಂದಿನ ಜೂನ್ ತಿಂಗಳಿನಲ್ಲಿ ಪ್ರತಿ ವಾರ್ಡ್ ‍ಗೆ ಎರಡು ಸಾವಿರ ಸಸಿಗಳನ್ನು ಹಾಕಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಪಾಲಿಕೆ ಸದಸ್ಯ ಬಸವರಾಜ್, ಮುಖಂಡರಾದ ನರೇಂದ್ರಕುಮಾರ್, ಗಿರೀಶ್, ಶ್ರೀನಿವಾಸ್ ಇತರರಿದ್ದರು.

English summary
"My term will end on February 18. Within that, With the co-operation of all the members, I will make Davanagere clean city" said Davanagere mayor Ajay Kumar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X