ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೈಹಿಕ, ಮಾನಸಿಕ ಸದೃಡ ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ: ಸಿದ್ದರಾಮಯ್ಯ

|
Google Oneindia Kannada News

ದಾವಣಗೆರೆ, ಆಗಸ್ಟ್‌ 3: ಇತ್ತೀಚೆಗೆ 2023ರ ವಿಧಾನ ಸಭೆ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದು ಹೇಳಿಕೊಂಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ದಾವಣೆಗೆರೆಯಲ್ಲಿ ನಡೆಯುತ್ತಿರುವ ತಮ್ಮ75ನೇ ಜನ್ಮದಿನ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಘೋಷಣೆಯೊಂದು ಮಾಡಿದ್ದು, ತಾವೂ ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರುವವರೆಗೂ ರಾಜಕೀಯದಲ್ಲಿರುತ್ತೇನೆ ಎಂದು ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಸಿದ್ದರಾಮಯ್ಯ ಹಿತೈಷಿಗಳು ಈ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ತಾವೂ ರಾಜಕೀಯದಲ್ಲಿ ಮತ್ತಷ್ಟು ವರ್ಷಗಳ ಕಾಲ ಇರುವುದಾಗಿ ಹಾಗೂ ಮತ್ತೊಮ್ಮೆ ಸಿಎಂ ಆಗುವ ಇಂಗಿತವನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಶಕ್ತಿಯೇ ಬಹಳ ದೊಡ್ಡದು, ಎಲ್ಲರಿಂದಲೂ ಇಷ್ಟು ಸುದೀರ್ಘ ಕಾಲ ರಾಜಕೀಯದಲ್ಲಿ ಇರಲು ಸಾಧ್ಯವಾಗಲ್ಲ. ನನ್ನ ಮೇಲೆ ಜನರ ನಿರಂತರ ಪ್ರೀತಿ , ವಿಶ್ವಾಸ ಇದ್ದಿದ್ದರಿಂದ 44 ವರ್ಷಗಳ ಕಾಲ ರಾಜಕೀಯದಲ್ಲಿದ್ದೇನೆ. ಇಷ್ಟು ವರ್ಷಗಳಲ್ಲಿ ನಾನು ಶಾಸಕ , ಮಂತ್ರಿಯಾಗಿ, ಉಪಮುಖ್ಯ ಮಂತ್ರಿಯಾಗಿ , ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡಲು ಸಾಧ್ಯವಾಗಿದೆ. ಇದಕ್ಕೆಲ್ಲಾ ಸಮಸ್ತ ಕನ್ನಡ ಜನತೆಗೆ ಧನ್ಯವಾದ ಹೇಳುತ್ತೇನ.

I want to be in Politics until I am mentally and physically fit: Siddaramaiah

ಮುಂದುವರಿಸಿ " ನಾನು ಎಲ್ಲಿಯವರೆಗೆ ದೈಹಿಕವಾಗಿ, ಮಾನಸಿಕ ಸದೃಡವಾಗಿರುತ್ತೇನೋ ಅಲ್ಲಿಯವರೆಗೆ ನಾನು ರಾಜಕೀಯದಲ್ಲಿ ಮುಂದುವರಿಯುತ್ತೇನೆ, ಜನರ ಸೇವೆ ಮಾಡುತ್ತೇನೆ ಎಂದು ಹೇಳುವ ಮೂಲಕ ಮುಂದಿನ ವಿಧಾನ ಸಭೆ ಚುನಾವಣೆ ತಮ್ಮ ಕೊನೆಯ ಚುನಾವಣೆಯಲ್ಲ" ಎನ್ನವುದನ್ನು ಖಾತ್ರಿ ಪಡಿಸಿದ್ದಾರೆ.

ಡಿಕೆಶಿ ನಡುವೆ ಮನಸ್ತಾಪವಿಲ್ಲ
ಇನ್ನು ತಮ್ಮ ಜನ್ಮದಿನದ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ವಿರೋಧವಿದೆ ಎಂಬ ಸುದ್ದಿ ವಿರೋಧ ಪಕ್ಷ ಸೃಷ್ಟಿಸಿರುವ ಗೊಂದಲ. ನನ್ನ ಹುಟ್ಟುಹಬ್ಬ ಆಚರಿಸಲು ಡಿಕೆ ಶಿವಕುಮಾರ್‌ ಬೆಂಬಲವಿದೆ. ಇಲ್ಲಿವರೆಗೆ ನಡೆದ ಎಲ್ಲಾ ಗೊಂದಲಗಳಿಗೂ ಕಾರಣ ರಾಜ್ಯದ ಆಡಳಿತ ಪಕ್ಷ. ಕಾಂಗ್ರೆಸ್‌ನಲ್ಲಿ ನಾವೆಲ್ಲಾ ಒಂದಾಗಿದ್ದೇವೆ. ಯಾರ ನಡುವೆ ಬಿನ್ನಾಭಿಪ್ರಾಯವಿಲ್ಲ. ಮುಂದಿನ ಚುನಾವಣೆಯಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸಿ ಕರ್ನಾಟಕದಲ್ಲಿ ಬಿಜೆಪಿ ಸರಕಾರವನ್ನು ತೊಲಗಿಸಿ, ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.

ಸಿಎಂ ಆಗಲು ಸೋನಿಯಾ, ರಾಹುಲ್ ಕಾರಣ
ರಾಹುಲ್‌ ಗಾಂಧಿ ನಾನು ಯಾರು ಕಾರ್ಯಕ್ರಮಕ್ಕೆ ಹೋಗಿಲ್ಲ ಆದರೆ, ಸಿದ್ದರಾಮಯ್ಯನವರ ಮೇಲೆ ವಿಶೇಷ ಪ್ರೀತಿಯಿರುವುದರಿಂದ ಬಂದಿದ್ದೇನೆ ಎಂದಿದ್ದಾರೆ. ನಾನು ರಾಹುಲ್ ಗಾಂಧಿಗೆ ಕೋಟಿ ವಂದನೆಗಳನ್ನು ಅರ್ಪಿಸುತ್ತೇನೆ. ನಾನು ಕಾಂಗ್ರೆಸ್‌ ಸೇರಿದ ದಿನದಿಂದ ಇಲ್ಲಿಯವರೆಗೂ ನನ್ನ ಮೇಲೆ ಅಪಾರ ವಿಶ್ವಾಸವನ್ನು ತೋರಿದ್ದಾರೆ. ಬೇರೆ ಪಕ್ಷದಿಂದ ಬಂದವನಾದರೂ ನನಗೆ ಪಕ್ಷದಲ್ಲಿ ಜವಾಬ್ದಾರಿಗಳನ್ನು ನೀಡಿದ್ದಾರೆ. ನಾನು ಮುಖ್ಯಮಂತ್ರಿಯಾಗಲೂ ಕೂಡ ರಾಹುಲ್‌ ಗಾಂಧಿ ಮತ್ತು ಸೋನಿಯಾ ಕಾರಣಕರ್ತರು. ನಾನು ಮುಖ್ಯಮಂತ್ರಿಯಾದಾಗ 5 ವರ್ಷಗಳ ಕಾಲ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಕೇಂದ್ರ ನಾಯಕರಿಗೆ ಧನ್ಯವಾದ ತಿಳಿಸಿದರು.

ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್‌
ರಾಜ್ಯದಲ್ಲಿ ಈಗಿರುವ ಸರಕಾರ ನಾನು ನನ್ನ ರಾಜಕೀಯ ಜೀವನದಲ್ಲಿ ಕಂಡಂತಹ ಅತೀ ಭ್ರಷ್ಟ ಸರಕಾರ. ಬರೀ ಲೂಟಿ ಮಾಡುವುದು, ಕೋಮುವಾದ, ಸಂವಿಧಾನ ಬದಲಾವಣೆ ಮಾಡುವುದರ ಬಗ್ಗೆ ಚಿಂತಿಸುತ್ತದೆ. ಬಡವರ ಬಗ್ಗೆ , ದಲಿತರ ಬಗ್ಗೆ ಚಿಂತಿಸುವುದಿಲ್ಲ. ಇಂದು ಕರ್ನಾಟಕ ಮಾತ್ರವಲ್ಲ ದೇಶದಲ್ಲಿ ಬಡವರು, ಶ್ರಮಿಕರು, ದಲಿತರು, ಮಹಿಳೆಯರು ಯುವಕರು ಆತಂಕದಿಂದ ಬದುಕುವಂತಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಹಾಗೂ ಕೇಂದ್ರದಲ್ಲಿ ಕೋಮುವಾದಿ ಬಿಜೆಪಿ ಸರಕಾರವನ್ನು ಕಿತ್ತೊಗೆದು ಕಾಂಗ್ರೆಸ್‌ ಸರಕಾರವನ್ನು ತರೋಣ ಎಂದು ಎಲ್ಲರೂ ಇಂದು ಶಪತ ಮಾಡೋಣ ಎಂದು ಸಿದ್ದರಾಮಯ್ಯ ಕಾರ್ಯಕರ್ತರಿಗೆ ಕರೆ ನೀಡಿದರು.

English summary
I want to be in Politics until I am mentally and physically fit, said Opposition leader Siddaramaiah in his 75th birthday Amritamahotsava event at Dahangere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X