• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆ; ನೀರು, ಆಹಾರವಿಲ್ಲದೇ ರಸ್ತೆಯಲ್ಲೇ ಕಾದು ಕುಳಿತಿವೆ ಮಂಗಗಳು

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಏಪ್ರಿಲ್ 23: ಅಂಗಡಿಗಳ ಮುಂದೆ ಇಟ್ಟಿರುವ ಹಣ್ಣುಗಳನ್ನು ಹೊತ್ತೊಯ್ದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕೋತಿಗಳು ಇದೀಗ ನೀರು ಮತ್ತು ಆಹಾರವಿಲ್ಲದೆ ಪರದಾಡುತ್ತಿರುವ ದೃಶ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಕಂಡುಬರುತ್ತಿದೆ. ಲಾಕ್‌ಡೌನ್‌ನಿಂದಾಗಿ ಮನುಷ್ಯನೇ ಆಹಾರ ಗಿಟ್ಟಿಸಿಕೊಳ್ಳುವುದು ಕಷ್ಟವಾಗಿರುವ ಈ ಪರಿಸ್ಥಿತಿಯಲ್ಲಿ, ಕೋತಿಗಳು ಹಸಿವು ತಾಳಲಾರದೆ ರಸ್ತೆಯಲ್ಲಿ ಆಹಾರಕ್ಕೆ ಕಾದು ಕುಳಿತಿರುವ ದೃಶ್ಯ ಮನಕಲುಕುವಂತಿದೆ.

ಜಿಲ್ಲೆಯಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿವೆ. ಇಂದು ಲಾಕ್ ಡೌನ್ ಸಡಿಲಿಸಿದ ಕಾರಣ ಬಡಾವಣೆಗಳ ರಸ್ತೆಗಳಲ್ಲಿ ಆಗೊಂದು ಈಗೊಂದು ಬೈಕ್ ‌ಗಳ ಸಂಚಾರ ಕಂಡುಬಂದಿತ್ತು. ಇದನ್ನು ಕಂಡು ಕೋತಿಗಳು ತಮಗೆ ಯಾರಾದರೂ ಆಹಾರ ನೀಡುತ್ತಾರೆ ಎಂದು ಅತ್ತಿಂದಿತ್ತ ಓಡಾಡುತ್ತಿದ್ದ ದೃಶ್ಯವೂ ಕಂಡುಬಂತು.

ಕೋತಿಗಳು ಆಹಾರಕ್ಕಾಗಿ ಹೋಟೆಲ್ ಮುಂಭಾಗ, ಹಣ್ಣು ಮಾರಾಟ ಮಳಿಗೆ ಮತ್ತು ದೇವಸ್ಥಾನಗಳ ಬಳಿ ವಾಸ ಮಾಡಿಕೊಂಡು ಅಲ್ಲಿ ಬರುವ ಭಕ್ತರಿಂದ ಆಹಾರವನ್ನು ಪಡೆಯುತ್ತಿದ್ದವು. ದೇವಸ್ಥಾನಗಳಿಗೆ ಬರುವ ಭಕ್ತರು ಸಹ ಕೋತಿಗಳನ್ನು ಕಂಡು ಬಾಳೆಹಣ್ಣು, ಕಾಯಿ, ಪ್ರಸಾದವನ್ನು ಕೋತಿಗಳಿಗೆ ನೀಡುತ್ತಿದ್ದರು. ಆದರೆ ಕೊರೊನಾ ಸೋಂಕು ತಡೆಯಲು ರಾಜ್ಯವೇ ಲಾಕ್‌ಡೌನ್ ಆಗಿರುವುದರಿಂದ ಯಾರೂ ಹೊರಗೆ ಬರುವಂತಿಲ್ಲ. ಹೀಗಾಗಿ ಕೋತಿಗಳಿಗೂ ಆಹಾರ ದೊರಕದಂತಾಗಿದೆ.

ಅಂತರಗಂಗೆಯಲ್ಲಿ ಬಸವಳಿದ ಮಂಗಗಳಿಗೆ ಆಹಾರ ನೀಡಿದ ಯುವಕರುಅಂತರಗಂಗೆಯಲ್ಲಿ ಬಸವಳಿದ ಮಂಗಗಳಿಗೆ ಆಹಾರ ನೀಡಿದ ಯುವಕರು

ಈ ಮೂಕ ಪ್ರಾಣಿಗಳಿಗೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ನೀರು ಮತ್ತು ಆಹಾರವನ್ನು ಒದಗಿಸಿ ರಕ್ಷಿಸುವ ಕೆಲಸ ನಡೆಯಬೇಕಿದೆ.

English summary
By lockdown, some animals are starving without food and water on road in davangere city,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X