ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಬ್ಲ್ಯಾಕ್ ಫಂಗಸ್ ಹೇಗೆ ಹರಡುತ್ತೆ, ಪರಿಹಾರವೇನು?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 25; ಕೋವಿಡ್ ಸೋಂಕಿನ ಬಳಿಕ ಬ್ಲ್ಯಾಕ್ ಫಂಗಸ್ ಜನರಲ್ಲಿ ಆತಂಕವನ್ನು ಉಂಟು ಮಾಡಿದೆ. ಈ ಕಾಯಿಲೆ, ಹೇಗೆ ಹರಡುತ್ತೆ?, ಪರಿಹಾರವೇನು? ಎನ್ನುವುದನ್ನು ಡಾ. ಶಿವಕುಮಾರ್ ವಿವರಿಸಿದ್ದಾರೆ.

Recommended Video

ಬ್ಲಾಕ್ ಫಂಗಸ್ ಕಾಯಿಲೆ ಹೇಗೆಲ್ಲಾ ಹರಡುತ್ತೆ ಗೊತ್ತಾ? | Oneindia Kannada

"ಬ್ಲ್ಯಾಕ್ ಫಂಗಸ್ ತುಂಬಾ ಸಿಂಪಲ್‌ ಕಾಯಿಲೆ ಅಲ್ಲ. ಶೇಕಡಾ 80ರಷ್ಟು ರೋಗಿಗಳಿಗೆ ಮೂಗಿನಿಂದ ಶುರುವಾಗಿ ಕಣ್ಣಿಗೆ ಹೋಗಿ ಮೆದುಳಿಗೆ ಹೋಗುತ್ತದೆ. ತುಂಬಾ ದೊಡ್ಡ ಕಾಯಿಲೆ" ಎಂದು ವೈದ್ಯರು ಹೇಳಿದ್ದಾರೆ.

ಬ್ಲ್ಯಾಕ್, ವೈಟ್, ಯೆಲ್ಲೋ ಫಂಗಸ್... ಬಣ್ಣಗಳ ಬಗ್ಗೆ ಏಮ್ಸ್ ಎಚ್ಚರಿಕೆಬ್ಲ್ಯಾಕ್, ವೈಟ್, ಯೆಲ್ಲೋ ಫಂಗಸ್... ಬಣ್ಣಗಳ ಬಗ್ಗೆ ಏಮ್ಸ್ ಎಚ್ಚರಿಕೆ

"ತಿಂಗಳುಗಟ್ಟಲೇ ಕಾಯುವಂತಿಲ್ಲ‌. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಶಸ್ತ್ರಚಿಕಿತ್ಸೆ ನಡೆಸಿದರೂ ರೋಗಿ ಬದುಕುವುದು ಕಷ್ಟವಾಗುತ್ತದೆ" ಎಂದು ಕಿವಿ, ಮೂಗು ಹಾಗೂ ಗಂಟಲು ತಜ್ಞ ಡಾ. ಎ. ಎಂ. ಶಿವಕುಮಾರ್ ತಿಳಿಸಿದ್ದಾರೆ.

ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗುಣಮುಖರಾಗಿ ಮನೆಗೆ ಹೋದ ಸಕ್ಕರೆ ಕಾಯಿಲೆ ಹೊಂದಿದವರು, ಮಧುಮೇಹ ಇಲ್ಲದಿದ್ದರೂ ಯುವಕರಿಗೂ ಬ್ಲ್ಯಾಕ್ ಫಂಗಸ್ ಬಂದಿರುವುದು ಕಂಡು ಬಂದಿದೆ.

ಬ್ಲ್ಯಾಕ್ ಫಂಗಸ್‌ಗೆ ಔಷಧಿ ಪೂರೈಕೆಗೆ ಸೂಕ್ತ ಕ್ರಮ : ಸುಧಾಕರ್ ಬ್ಲ್ಯಾಕ್ ಫಂಗಸ್‌ಗೆ ಔಷಧಿ ಪೂರೈಕೆಗೆ ಸೂಕ್ತ ಕ್ರಮ : ಸುಧಾಕರ್

ಯಾವಾಗ ಕಂಡುಬರಲಿದೆ ಬ್ಲ್ಯಾಕ್ ಫಂಗಸ್?

ಯಾವಾಗ ಕಂಡುಬರಲಿದೆ ಬ್ಲ್ಯಾಕ್ ಫಂಗಸ್?

"ಸೋಂಕಿನಿಂದ ಗುಣಮುಖರಾಗಿ ಮನೆಗೆ ಬಂದ ಬಳಿಕ 10 ದಿನಕ್ಕೆ ಮೂಗು, ಕಣ್ಣು, ಗಂಟಲಿನಲ್ಲಿ ಸಮಸ್ಯೆ ಕಂಡು ಬರುತ್ತಿದೆ. ನಾವು ಪರೀಕ್ಷೆ ಮಾಡಿದಾಗ ಬ್ಲ್ಯಾಕ್ ಫಂಗಸ್ ಅಂದರೆ ಕಪ್ಪು ಬಣ್ಣದ ಒಣಗಿದ ಸಿಂಬಳ ಕಂಡು ಬರುತ್ತಿದೆ" ಎಂದು ಡಾ. ಶಿವಕುಮಾರ್ ವಿವರಿಸಿದ್ದಾರೆ.

ರೋಗದ ಲಕ್ಷಣಗಳು ಏನು?

ರೋಗದ ಲಕ್ಷಣಗಳು ಏನು?

ಮೂಗಿನಲ್ಲಿ ರಕ್ತಸ್ರಾವ ಆಗುವುದು ಮೊದಲ ಹಂತ. ಕಣ್ಣಿನಲ್ಲಿ ಬಾವು ಬರುವುದು ಎರಡನೇ ಹಂತ.‌ ಮೂಗು, ಕಣ್ಣಿನಿಂದ ಮೆದುಳು ಮುಟ್ಟಿದಾಗ ಶಸ್ತ್ರಚಿಕಿತ್ಸೆ ಮಾಡಿದರೂ ರೋಗಿಗಳನ್ನು ಉಳಿಸುವಿದು ಕಷ್ಟ. ಪ್ರಾಥಮಿಕ ಹಂತದಲ್ಲೇ ಆಪರೇಷನ್ ಮಾಡಿದ್ರೆ ಗುಣಮುಖರಾಗಿ ಮನೆ ಸೇರುತ್ತಾರೆ. ಇಲ್ಲದಿದ್ದರೆ ತುಂಬಾ ಕಷ್ಟವಾಗುತ್ತದೆ.

ತಕ್ಷಣ ತಜ್ಞರ ಬಳಿ ಹೋಗಿ

ತಕ್ಷಣ ತಜ್ಞರ ಬಳಿ ಹೋಗಿ

"ಕಿವಿ, ಗಂಟಲು, ಮೂಗು, ಹಲ್ಲು, ನ್ಯೂರೋ ಸರ್ಜನ್ ಆಪರೇಷನ್ ಮಾಡಬೇಕು. ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಮನೆಗೆ ಹೋದವರಿಗೆ ಬ್ಲ್ಯಾಕ್ ಫಂಗಸ್ ರೋಗ ಲಕ್ಷಣಗಳಿದ್ದರೆ ಕಿವಿ, ಗಂಟಲು, ಮೂಗು ತಜ್ಞರ ಬಳಿ ಹೋಗಿ" ಎಂದು ವೈದ್ಯರು ಸಲಹೆಯನ್ನು ನೀಡಿದ್ದಾರೆ.

ಡಯಾಬಿಟಿಸ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ

ಡಯಾಬಿಟಿಸ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ

"ಡಯಾಬಿಟಿಸ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಬ್ಲ್ಯಾಕ್ ಫಂಗಸ್‌ಗೆ ಶಸ್ತ್ರ ಚಿಕಿತ್ಸೆ, ಇಂಜೆಕ್ಷನ್ ಕೊಡುವುದಷ್ಟೇ ಪರಿಹಾರ. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ ಹಣವೂ ಕಡಿಮೆ‌ ಆಗುತ್ತದೆ. ಇಲ್ಲದಿದ್ದರೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ. ಆಂಪೋ ಟೆರೆಸಿಬ್ ಬಿ ಎನ್ನುವ ಲಸಿಕೆ ಇದಕ್ಕೆ ಬೇಕೇ ಬೇಕು. ಇದು ರಾಜ್ಯದಲ್ಲಿ ಸಿಗುತ್ತಿಲ್ಲ. ಎಚ್ಚರಿಕೆ ಹಾಗೂ ಮುನ್ನೆಚ್ಚರಿಕೆ ವಹಿಸಿ" ಎಂದು ವೈದ್ಯರು ಕರೆ ನೀಡಿದ್ದಾರೆ.

English summary
Mucormycosis commonly called as black fungus. How it spreads and what are preventive measures. Here explained.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X