• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮತ್ತೆ ಸುದ್ದಿಯಲ್ಲಿ ರೇಣುಕಾಚಾರ್ಯ, ಚಾಲಕನಾದ ಹೊನ್ನಾಳಿ ಶಾಸಕ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ 05: ಯಾವಾಗಲೂ ಸುದ್ದಿಯಲ್ಲಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಈಗ‌ ಕೆಎಸ್ಆರ್ಟಿಸಿ ಬಸ್ ಚಾಲನೆ ಮಾಡುವ ಮೂಲಕ ಮತ್ತಷ್ಟು ಸುದ್ದಿಯಾಗಿದ್ದಾರೆ.

ಡಿ.ಕೆ.ಶಿವಕುಮಾರ್‌ ಗೆ ಹೊಸ ಹೆಸರು ನಾಮಕರಣ ಮಾಡಿದ ರೇಣುಕಾಚಾರ್ಯಡಿ.ಕೆ.ಶಿವಕುಮಾರ್‌ ಗೆ ಹೊಸ ಹೆಸರು ನಾಮಕರಣ ಮಾಡಿದ ರೇಣುಕಾಚಾರ್ಯ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಬೆನಕನಹಳ್ಳಿ ಗ್ರಾಮದಿಂದ ಉಜನಿಪುರ, ರಾಂಪುರ ಸೇರಿದಂತೆ ಹಲವು ಗ್ರಾಮಗಳಿಗೆ ಹೊಸದಾಗಿ ಕೆಎಸ್ಆರ್ಟಿಸಿ ಬಸ್ ಚಾಲನೆ‌ ನೀಡಿದ ಸಂದರ್ಭದಲ್ಲಿ ಬಸ್ ಚಾಲಕರಾಗಿ ಓಡಿಸಿದರು.

ಶಾಸಕ ರೇಣುಕಾಚಾರ್ಯ ಚಾಲಕನ ಯೂನಿಫಾರಂ ಹಾಕಿ ಕೆಎಸ್ಆರ್ಟಿಸಿ ಬಸ್ ಚಾಲನೆ ನೀಡಿದ್ರು. ಕಳೆದ ಬಾರಿ ಕೂಡ ಇದೇ ರೀತಿಯಾಗಿ ಕೆಎಸ್ಆರ್ಟಿಸಿ ಬಸ್ ಚಾಲನೆ ನೀಡುವ ಮೂಲಕ ವಿವಾದ ಮೇಲೆಳೆದುಕೊಂಡಿದ್ದರು. ಈ ಬಾರಿ‌ ಕೂಡ ಯೂನಿಫಾರಂ ಹಾಕಿಕೊಂಡು ಬಸ್ ಚಾಲನೆ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

English summary
CM political secretary and Honnali MLA, MP Renukaacharya, who is always in the news, is now in the news with the KSRTC bus running.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X