ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; 'ಹೊನ್ನಾಳಿ ಹೊಡ್ತ' ನೆನಪಿಸಿಕೊಂಡ ಗೃಹ ಸಚಿವರು!

|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 02; ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಬಾಲ್ಯದ ನೆನಪು ಮಾಡಿಕೊಂಡಿದ್ದಾರೆ. ಆಗ ಅವರು 'ಹೊನ್ನಾಳಿ ಹೊಡ್ತ'ವನ್ನು ಪ್ರಸ್ತಾಪ ಮಾಡಿದ್ದಾರೆ.

ಶುಕ್ರವಾರ ಗೃಹ ಸಚಿವ ಆರಗ ಜ್ಞಾನೇಂದ್ರ ದಾವಣಗೆರೆ ಜಿಲ್ಲೆಯ ಹೊನ್ನಾಳಿಗೆ ಭೇಟಿ ನೀಡಿದರು. ಆಗ ಶಾಸಕ ಎಂ. ಪಿ. ರೇಣುಕಾಚಾರ್ಯ ಸಚಿವರನ್ನು ಸ್ವಾಗತಿಸಿದರು.

ಅನಾಥಳಾದ ಬಾಲಕಿಗೆ ನೆರವಾದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅನಾಥಳಾದ ಬಾಲಕಿಗೆ ನೆರವಾದ ಹೊನ್ನಾಳಿ ಶಾಸಕ ರೇಣುಕಾಚಾರ್ಯ

ಬಿಜೆಪಿ ಕಾರ್ಯಕರ್ತರ ಸ್ವಾಗತ ಸ್ವೀಕರಿಸಿದ ಬಳಿಕ ಆರಗ ಜ್ಞಾನೇಂದ್ರ ಬಾಲ್ಯದ ದಿನಗಳ ನೆನಪು ಮಾಡಿಕೊಂಡರು. "ನಮ್ಮ ಮೇಸ್ಟ್ರು ಎಲ್ಲಾ ಹೊನ್ನಾಳಿ ಕಡೆಯವರು ಹೊಡೆತ ಹೊಡೆಯುತ್ತಿದ್ದರು ಹೊನ್ನಾಳಿ ಹೊಡ್ತ ಹಂಗಿಂಗಲ್ಲ" ಎಂದು ಬಿಜೆಪಿ ಕಾರ್ಯಕರ್ತರ ಜೊತೆ ಬಾಲ್ಯದ ದಿನಗಳ ನೆನಪು ಮಾಡಿಕೊಂಡರು.

ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಮಹಿಳೆಯರ ಕ್ಷಮೆಯಾಚಿಸಿದ್ದು ಯಾಕೆ? ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಮಹಿಳೆಯರ ಕ್ಷಮೆಯಾಚಿಸಿದ್ದು ಯಾಕೆ?

Home Minister Araga Jnanendra Remembers Honnalli Hodta

ತುಂಗಭದ್ರಾ ನದಿ ಪಾತ್ರದ ಹೊನ್ನಾಳಿ ತಾಲೂಕು ವಿವಿಧ ಕಾರಣಗಳಿಂದಾಗಿ ರಾಜ್ಯದಲ್ಲಿ ಪ್ರಖ್ಯಾತಿ ಪಡೆದಿದೆ. ಹೊನ್ನಾಳಿ ಹೆಸರು ಮಾಡಿರುವುದು 'ಹೊನ್ನಾಳಿ ಹೊಡ್ತ' ಎಂಬ ವಿಶಿಷ್ಟ ಪದಪುಂಜದ ಮೂಲಕ.

ಕರ್ನಾಟಕದ ರಾಜಕೀಯದಲ್ಲಿಯೂ 'ಹೊನ್ನಾಳಿ ಹೊಡ್ತ' ಪದದ ಪ್ರಸ್ತಾಪ ಹಲವು ಬಾರಿ ಬಂದಿದೆ. ಮಾಜಿ ಶಾಸಕ ಎಚ್. ಬಿ. ಕಾಡಸಿದ್ದಪ್ಪ ಅವರು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವ ವಿಷಯವಾಗಿ ಸದನದಲ್ಲಿ ಅಂದಿನ ಮುಖ್ಯಮಂತ್ರಿ ಜೊತೆಗೆ ಚರ್ಚಿಸುವ ಸಂದರ್ಭದಲ್ಲಿ ಈ ಪದವನ್ನು ಬಳಕೆ ಮಾಡಿದ್ದರು.

ಹೊನ್ನಾಳಿ; ಹೋರಿ ಬೆದರಿಸುವ ಸ್ಪರ್ಧೆ; ರಸ್ತೆ ಅಪಘಾತದಲ್ಲಿ ಹೋರಿ ಸಾವು ಹೊನ್ನಾಳಿ; ಹೋರಿ ಬೆದರಿಸುವ ಸ್ಪರ್ಧೆ; ರಸ್ತೆ ಅಪಘಾತದಲ್ಲಿ ಹೋರಿ ಸಾವು

ಕನ್ನಡ ಸಾಹಿತ್ಯದಲ್ಲಿಯೂ 'ಹೊನ್ನಾಳಿ ಹೊಡ್ತ' ಎಂಬ ಶಬ್ಧ ಹೆಚ್ಚು ಚಿರಪರಿಚಿತವಾಗಿದೆ. ಕುವೆಂಪು ಅವರು 'ಮಲೆಗಳಲ್ಲಿ ಮದುಮಗಳು' ಕಾದಂಬರಿಯಲ್ಲಿ ಈ ಪದವನ್ನು ಬಳಕೆ ಮಾಡಿದ್ದಾರೆ.

ಅಮಿತ್ ಶಾ ಕಾರ್ಯಕ್ರಮ; ಗೃಹ ಸಚಿವ ಆರಗ ಜ್ಞಾನೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದಾವಣಗೆರೆಗೆ ಭೇಟಿ ನೀಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಅಮಿತ್ ಶಾ ದಾವಣಗೆರೆಗೆ ಆಗಮಿಸಲಿದ್ದಾರೆ.

ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮಧ್ಯಾಹ್ನ 1.30 ಗಂಟೆಗೆ ಹುಬ್ಬಳ್ಳಿಯಿಂದ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಜೊತೆ ಬಿಎಸ್‍ಎಫ್ ಹೆಲಿಕಾಪ್ಟರ್ ಮೂಲಕ ಹೊರಟು, ಮಧ್ಯಾಹ್ನ 2.15ಕ್ಕೆ ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್‍ಗೆ ಆಗಮಿಸಲಿದ್ದಾರೆ.

ಬಳಿಕ ಜಿಎಂಐಟಿ ಅತಿಥಿ ಗೃಹಕ್ಕೆ ತೆರಳುವರು. ಮಧಾಹ್ನ 3.20ಕ್ಕೆ ಕೇಂದ್ರ ಗೃಹ ಸಚಿವರೊಂದಿಗೆ ಗಾಂಧಿ ಭವನಕ್ಕೆ ಆಗಮಿಸಿ, ಗಾಂಧಿ ಭವನದ ಉದ್ಘಾಟನೆ ನೆರವೇರಿಸುವರು.

ಮಧ್ಯಾಹ್ನ 3.40ಕ್ಕೆ ಹೊರಟು ಹರಿಹರ ತಾಲೂಕಿನ ಕೊಂಡಜ್ಜಿಗೆ ಆಗಮಿಸಿ ಕೊಂಡಜ್ಜಿ ಬಸಪ್ಪ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಮರ್ಪಿಸುವರು. ಸಂಜೆ 4 ಗಂಟೆಗೆ ಕೊಂಡಜ್ಜಿಯಲ್ಲಿ ನಿರ್ಮಿಸಲಾಗಿರುವ ಪೊಲೀಸ್ ಪಬ್ಲಿಕ್ ಸ್ಕೂಲ್‍ ಉದ್ಘಾಟನೆ ಮಾಡಲಿದ್ದಾರೆ.

ಸಂಜೆ 4.30 ಗಂಟೆಗೆ ದಾವಣಗೆರೆಯ ಜಿಎಂಐಟಿಗೆ ಆಗಮಿಸಿ, ಇಲ್ಲಿನ ಕೇಂದ್ರ ಗ್ರಂಥಾಲಯದ ಉದ್ಘಾಟನೆ ನೆರವೇರಿಸುವರು. ಸಂಜೆ 5.05 ಗಂಟೆಗೆ ಜಿಎಂಐಟಿ ಹೆಲಿಪ್ಯಾಡ್‌ನಿಂದ ಕೇಂದ್ರ ಗೃಹ ಸಚಿವರೊಂದಿಗೆ ಬಿಎಸ್‍ಎಫ್ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿಗೆ ತೆರಳುವರು. ಈ ಎಲ್ಲಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಮಿತ್ ಶಾ ಜೊತೆ ಆರಗ ಜ್ಞಾನೇಂದ್ರ ಪಾಲ್ಗೊಳ್ಳಲಿದ್ದಾರೆ.

ಪೊಲೀಸ್ ಭದ್ರತೆ ಹೆಚ್ಚಳ; ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿಲ್ಲಾ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ. ಭದ್ರತಾ ದೃಷ್ಟಿಯಿಂದ ಸೆಪ್ಟೆಂಬರ್ 2ರಂದು ಜಿಲ್ಲಾ ವ್ಯಾಪ್ತಿಯ ವಾಯು ಪ್ರದೇಶದಲ್ಲಿ ಗೃಹ ಸಚಿವರು ಆಗಮಿಸುವ ಹೆಲಿಕಾಪ್ಟರ್ ಹೊರತುಪಡಿಸಿ ಬಾಕಿ ಎಲ್ಲಾ ಹಾರಾಟಗಳು (ಡ್ರೋನ್ ಸೇರಿದಂತೆ) ನಡೆಯದಂತೆ ನಿಷೇಧ ಇದೆ.

ಜಿಲ್ಲೆಯಾದ್ಯಂತ ನೋ ಫ್ಲೈಯಿಂಗ್ ಜೋನ್ ಎಂದು ಘೋಷಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ. ಅಮಿತ್ ಶಾ ಝಡ್ ಪ್ಲಸ್ ಶ್ರೇಣಿ ಭದ್ರತೆ ಹೊಂದಿರುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ಲೋಪರಹಿತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಇತರೆ ಹಾರಾಟಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.

Recommended Video

ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿಯನ್ನ ಮೀರಿಸಿ ದಾಖಲೆ ಬರೆದ ರೋಹಿತ್ | Oneindia Kannada

English summary
Home minister of Karnataka Araga Jnanendra visited Davanagere district Honnali and he remembered school days and teachers Honnalli Hodta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X