ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ದಾವಣಗೆರೆಯಲ್ಲಿ ನೋ ಕೊರೊನಾ ಫಿಯರ್, ಹೋಳಿ ಹಬ್ಬ ಫುಲ್ ಜೋರು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮಾರ್ಚ್ 10: ರಾಜ್ಯದಲ್ಲಿ ಕೊರೊನಾ ಪ್ರಕರಣ ಕಾಣಿಸಿಕೊಂಡ ಬೆನ್ನಲ್ಲೇ ಇಂದು ಆಚರಣೆ ಮಾಡಬೇಕಿದ್ದ ಹೋಳಿ ಹಬ್ಬವನ್ನು ಮಾಡಲು ಕೂಡ ಅನೇಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ‌ಮಾತ್ರ ಕೊರೊನಾದ ಭಯವಿಲ್ಲದೇ ಹೋಳಿ ಆಚರಣೆಯನ್ನು ಮಾಡಿದ್ದಾರೆ.

ವಿಭಿನ್ನವಾದ ಬಣ್ಣಗಳನ್ನು ಒಬ್ಬರಿಗೊಬ್ಬರು ಪರಸ್ಪರ ಹಚ್ಚಿಕೊಂಡು ಹೋಳಿ ಹಬ್ಬವನ್ನು ದಾವಣಗೆರೆ ಯುವಜನತೆ ಆಚರಣೆ ಮಾಡಿದರು, ಯುವಕರು ಹಾಗೂ ಯುವತಿಯರು ಬಣ್ಣವನ್ನು ಹಚ್ಚಿಕೊಂಡು ಫುಲ್ ಏಂಜಾಯ್ ಮಾಡಿದರು. ಅದರಲ್ಲೂ ರಾಮ್ ಅಂಡ್ ಕೋ ಸರ್ಕಲ್ ನಲ್ಲಿ ಡಿಜೆ ಸೌಂಡ್ ಗೆ ಸಕತ್ ಸ್ಟೇಪ್ ಹಾಕಿದ್ದಾರೆ.

ಕೊರೊನಾ ಬರದಂತೆ ಟಿಪ್ಸ್ ನೀಡಿದ ಬಾಬಾ ರಾಮ್ ದೇವ್ಕೊರೊನಾ ಬರದಂತೆ ಟಿಪ್ಸ್ ನೀಡಿದ ಬಾಬಾ ರಾಮ್ ದೇವ್

ಮಹಿಳೆಯರಿಗಾಗೇ ಪ್ರತ್ಯೇಕ ಹೋಳಿ ವ್ಯವಸ್ಥೆ ‌ಮಾಡಿದ್ದು, ಶವರ್ ಜೊತೆ ಡಿಜೆ ಸೌಂಡ್ ಗೆ ಯುವತಿಯರು ಸಖತ್ ಸ್ಟೆಪ್ ಹಾಕಿದರು. ಎಲ್ಲೆಡೆ ಕೊರೊನಾ ಎಫೆಕ್ಟ್ ನಿಂದ ಹೋಳಿ ಹಬ್ಬವನ್ನು ಎಂಜಾಯ್ ಮಾಡೋದನ್ನೇ ಬಿಟ್ಟಿದ್ದಾರೆ ಆದರೆ ದಾವಣಗೆರೆಯಲ್ಲಿ ಮಾತ್ರ ಹೋಳಿ ಹಬ್ಬದ ರಂಗಿಗೆ ಮಾತ್ರ ಯಾವುದೇ ಕೊರತೆ ಇರಲಿಲ್ಲ.

In Between Corona Fear Holi Celebrated Grandly In Ram And Co Circle

ನಗರದ ಎಸ್.ಎಸ್ ಲೇಔಟ್ ನಲ್ಲಿ ಕಳೆದ ನಾಲ್ಕು ವರ್ಷದಿಂದ ಶಾರದ ಮಹಿಳಾ ಸಂಸ್ಥೆ, ಹೋಳಿ ಹಬ್ಬವನ್ನು ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ಆಚರಣೆ ಮಾಡಿಕೊಂಡು ಬರುತ್ತಿದೆ. ಅದರಲ್ಲೂ ಬಣ್ಣದ ಹಬ್ಬದಲ್ಲಿ ಬಣ್ಣವನ್ನು ಹೆಚ್ಚು ಬಳಸಿದರೆ, ಚರ್ಮ ಖಾಯಿಲೆ ಹಾಗೂ

ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ದಾರಿಯಲ್ಲಿ ಕಾದು ನಿಂತಿದ್ದ ಜವರಾಯಶಾಲೆಗೆ ಹೋಗುತ್ತಿದ್ದ ಬಾಲಕಿಗೆ ದಾರಿಯಲ್ಲಿ ಕಾದು ನಿಂತಿದ್ದ ಜವರಾಯ

ಅಲರ್ಜಿ ಆಗಬಹುದು ಎಂಬ ಉದ್ದೇಶದಿಂದ ಕಳೆದ ಆರು ವರ್ಷದಿಂದ ವಿವಿಧ ತರಕಾರಿ ಹಾಗೂ ಹಣ್ಣುಗಳನ್ನು ಬಳಕೆ ಮಾಡಿಕೊಂಡು ಹೋಳಿ ಆಚರಣೆ ಮಾಡಲಾಯಿತು.

ಇದರಲ್ಲಿ ಯಾವುದೇ ಕೆಮಿಕಲ್ ಉಪಯೋಗಿಸದೇ ಇರುವುದರಿಂದ ಮುಖಕ್ಕೆ ಯಾವುದೆ ತೊಂದರೆಯಾಗುವುದಿಲ್ಲ ಕೊರೊನಾ ಬಗ್ಗೆ ಸಾಕಷ್ಟು ಜಾಗೃತಿಯನ್ನು ಮೂಡಿಸಿದರೂ ಕಮಿಕಲ್ ಬಣ್ಣಗಳನ್ನು ಅಚ್ಚುವುದು ಸರಿಯಲ್ಲ. ಈ ರೀತಿ ಹರ್ಬನ್ ಹೋಳಿ ಆಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎನ್ನುತ್ತಿದ್ದಾರೆ.

In Between Corona Fear Holi Celebrated Grandly In Ram And Co Circle

ಈ ಹೋಳಿಯನ್ನು ಆರು ವರ್ಷದಿಂದ ಎಸ್.ಎಸ್ ಲೇಔಟ್ ನಲ್ಲಿ ಮಹಿಳೆಯರೇ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಈ ಸ್ಥಳದಲ್ಲಿ

ಪುರುಷರಿಗೆ ನೋ ಎಂಟ್ರಿ. ಆದ್ದರಿಂದ ಸ್ವಚ್ಛಂದವಾಗಿ ಮಹಿಳೆಯರು, ಮಕ್ಕಳು ಎನ್ನದೇ ಎಲ್ಲರೂ ಹೋಳಿಯಲ್ಲಿ ಪಾಲ್ಗೊಳ್ಳುತ್ತಾರೆ.

ತರಕಾರಿ, ಹಣ್ಣು, ಹೂವುಗಳಿಂದ ಬಣ್ಣ ಮಾಡಿಕೊಂಡಿದ್ದು, ಫ್ರೂಟ್ ಬಣ್ಣ ಹಚ್ಚಿಕೊಳ್ಳುವುದರಿಂದ ದೇಹದ ಕಾಂತಿ ಹೆಚ್ಚುತ್ತದೆ. ಕೆಮಿಕಲ್

In Between Corona Fear Holi Celebrated Grandly In Ram And Co Circle

ಬಳಕೆ ಮಾಡಿಕೊಂಡು ಹೋಳಿ ಆಚರಣೆ ಮಾಡಿ ಹಲವರು ಕಾಯಿಲೆಗೆ ತುತ್ತಾಗುತ್ತಾರೆ. ಈ ಮಹಿಳೆಯರ ರೀತಿ ಮನೆಯಲ್ಲೆ ಹರ್ಬಲ್

ಹೋಳಿ ತಯಾರು ಮಾಡಿ ಆಚರಣೆ ಮಾಡಿದರೆ ಇನ್ನು ಉತ್ತಮ ಎನ್ನುವುದು ಇಲ್ಲಿನ ಜನರ ಅಭಿಪ್ರಾಯ.

English summary
Holi celebration in Davanagere without fear of corona Fear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X