ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿರ್ಲಕ್ಷ್ಯಕ್ಕೆ ಒಳಗಾದ ಐತಿಹಾಸಿಕ ಪುರುಷ ಮತ್ತಿ ತಿಮ್ಮಣ್ಣ ನಾಯಕನ ಸಮಾಧಿ

By ಅಣ್ಣಪ್ಪ ಬಿ.ಕುಂದವಾಡ
|
Google Oneindia Kannada News

ದಾವಣಗೆರೆ, ಜುಲೈ 31: ವಿಜಯನಗರ ಸಾಮ್ರಾಜ್ಯದ ದೊರೆ ನರಸಿಂಗರಾಯನಿಂದ "ಹಗಲು ಕಗ್ಗೊಲೆ ಮಾನ್ಯ' ಎಂಬ ಬಿರುದಾಂಕಿತ ವೀರ ಮತ್ತಿ ತಿಮ್ಮಣ್ಣ ನಾಯಕನ ಸಮಾಧಿ ಅಳವಿನಂಚಿನಲ್ಲಿದೆ.

ದಾವಣಗೆರೆ ತಾಲೂಕಿನ ದಕ್ಷಿಣ ಗಡಿ ಗ್ರಾಮವಾದ ಮತ್ತಿ ಗ್ರಾಮದಲ್ಲಿರುವ ಮತ್ತಿ ತಿಮ್ಮಣ್ಣ ನಾಯಕನ ಸಮಾಧಿ ಅಳಿವಿನಂಚಿನಲ್ಲಿದ್ದು, ಚಿತ್ರದುರ್ಗದ ಪ್ರಥಮ ಪಾಳೆಪಟ್ಟದ ವೀರನಾಯಕನೆಂಬುದಾಗಿ ಇತಿಹಾಸದ ದಾಖಲೆಗಳಿವೆ. ಮತ್ತಿ ತಿಮ್ಮಣ್ಣ ನಾಯಕನ ಬಳಿಕ ಅನೇಕ ಪಾಳೆಗಾರರು ಆಳ್ವಿಕೆ ನಡೆಸಿದ್ದಾರೆ. ಆದರೆ ಪ್ರಥಮ ಪಾಳೇಗಾರನ ಹೆಸರಿನಲ್ಲಿದ್ದ ಸಮಾಧಿ ಇದೀಗ ಅಳಿಸಿ ಹೋಗುತ್ತಿದೆ.

ಸಸಿ ಮಡಿ ರಕ್ಷಣೆಗೆ ಬಾಟಲ್ ಸೌಂಡ್: ಹತ್ತಿರ ಸುಳಿಯದ ಪಕ್ಷಿಗಳುಸಸಿ ಮಡಿ ರಕ್ಷಣೆಗೆ ಬಾಟಲ್ ಸೌಂಡ್: ಹತ್ತಿರ ಸುಳಿಯದ ಪಕ್ಷಿಗಳು

ಮತ್ತಿ ಗ್ರಾಮದ ಮಧ್ಯಭಾಗದಲ್ಲಿರುವ ಸಮಾಧಿ ಪಕ್ಕದ ಖಾಲಿ ಜಾಗವನ್ನು ಅಕ್ಕಪಕ್ಕದ ನಿವಾಸಿಗಳು ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಸಮೀಪದಲ್ಲೆ ಶ್ರೀ ಆಂಜನೇಯಸ್ವಾಮಿ ಹಾಗೂ ಮಾರಮ್ಮದೇವಿ ದೇವಸ್ಥಾನಗಳಿದ್ದು, ಸುತ್ತಲೂ ಮನೆಗಳಿವೆ.

ವೀರ ನಾಯಕನ ಸಮಾಧಿ ಉಳಿವಿಗಾಗಿ ಯಾರೂ ಮುಂದಾಗಿಲ್ಲ

ವೀರ ನಾಯಕನ ಸಮಾಧಿ ಉಳಿವಿಗಾಗಿ ಯಾರೂ ಮುಂದಾಗಿಲ್ಲ

ಸುಮಾರು 5 ಶತಮಾನಕ್ಕೂ ಪುರಾತನವಾದ ಸಮಾಧಿ ಜಾಗದಲ್ಲಿ ವೀರಗಲ್ಲು, ಮಹಾ ಸತಿಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಗ್ರಾಮಸ್ಥರಿಂದ ಆರಾಧನೆಗೊಳಪಟ್ಟಿವೆ. ಈ ಶಿಲಾ ಪ್ರತಿಮೆಗಳಿಗೆ ಬಿಸಿನೀರಿನ ಅಭಿಷೇಕ ಮಾಡಿ, ಜಾನುವಾರುಗಳು ಕರು ಹಾಕಿದ ಮೊದಲಿನ ಗೀಬಿನ ಹಾಲು, ಗಿಣ್ಣ ಹಾಗೂ ಮೊದಲ ಬೆಣ್ಣೆ ನೈವೇದ್ಯ ಅರ್ಪಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆದರೆ ವೀರ ನಾಯಕನ ಸಮಾಧಿ ಉಳಿವಿಗಾಗಿ ಯಾರೂ ಸಹ ಮುಂದಾಗದಿರುವುದು ಶೋಚನೀಯವಾಗಿದೆ.

ಐತಿಹ್ಯ ಮಾಹಿತಿ

ಐತಿಹ್ಯ ಮಾಹಿತಿ

1491 ರಲ್ಲಿ ವಿಜಯನಗರದ ಸಾಳ್ವ ವಂಶದ ದೊರೆ ಇಮ್ಮಡಿ ನರಸಿಂಹನ ಅವಧಿಯಲ್ಲಿ ಮತ್ತಿ ತಿಮ್ಮಣ್ಣ ನಾಯಕ ಈ ಭಾಗದ ವೀರನಾಗಿದ್ದನು. ಆತನ ಪರಾಕ್ರಮ ಹಾಗೂ ಹೋರಾಟದ ಶೈಲಿಗೆ ಪ್ರಭಾವಿತನಾದ ದೊರೆಯು, ಹೊಳಲ್ಕೆರೆ ಪಾಳೆಪಟ್ಟದ (1503) ಮುಖಂಡನನ್ನಾಗಿಸಿ ಅದೇ ರೀತಿ 1514 ರಲ್ಲಿ ಚಿತ್ರದುರ್ಗಕ್ಕೂ, 1518 ರಲ್ಲಿ ಹಿರಿಯೂರು ಪ್ರಾಂತ್ಯಕ್ಕೂ ಅಧಿಪತಿಯನ್ನಾಗಿಸಿ ಕಪ್ಪ ಪಡೆಯಲಾರಂಭಿಸಿದನು. ನಂತರ ವಿಜಯನಗರ ಸಾಮ್ರಾಜ್ಯ ಪತನದಿಂದ ಸ್ವತಂತ್ರ ರಾಜರಾಗಿ ಚಿತ್ರದುರ್ಗ ಸಂಸ್ಥಾನದ ಅರಸನಾಗಿ ಆಳ್ವಿಕೆ ನಡೆಸುತ್ತಾನೆ. ತಿಮ್ಮಣ್ಣ ನಾಯಕನ ಬಳಿಕ ಸಂಸ್ಥಾನವು ವಾಲ್ಮೀಕಿ ವಂಶಸ್ಥರಿಂದಲೇ ಬೆಳೆಯುತ್ತದೆ ಎಂದು ಇತಿಹಾಸದ ಉಲ್ಲೇಖಗಳಿಂದ ತಿಳಿದುಬರುತ್ತದೆ.

ದಾವಣಗೆರೆ; ಜೀವನ ನಡೆಸಲು ಕಾಯಿ, ತರಕಾರಿ ವ್ಯಾಪಾರಕ್ಕಿಳಿದ ಅತಿಥಿ ಉಪನ್ಯಾಸಕರುದಾವಣಗೆರೆ; ಜೀವನ ನಡೆಸಲು ಕಾಯಿ, ತರಕಾರಿ ವ್ಯಾಪಾರಕ್ಕಿಳಿದ ಅತಿಥಿ ಉಪನ್ಯಾಸಕರು

ಜೀರ್ಣೋದ್ಧಾರ ಸಮಿತಿ

ಜೀರ್ಣೋದ್ಧಾರ ಸಮಿತಿ

2015 ರಲ್ಲಿ ಮತ್ತಿ ತಿಮ್ಮಣ್ಣ ನಾಯಕ ಜೀರ್ಣೋದ್ಧಾರ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ನೋಂದಣಿ ಕೂಡ ಆಗಿದೆ. ಅದಾದ ಬಳಿಕ ಸಮಿತಿಯಿಂದಾಗಲೀ, ವಾಲ್ಮೀಕಿ ಸಮಾಜದವರಿಂದಾಗಲೀ, ಸಮಾಜದ ಯುವ ಸೇನೆಯಿಂದಾಗಲೀ ಅಥವಾ ಸಮಾಜದ ಜಗದ್ಗುರುಗಳಿಂದಾಗಲೀ ಸಮಾಧಿ ನೆನಪು ಉಳಿಸಿಕೊಳ್ಳುವ ಕೆಲಸಗಳು ಆಗಿರುವ ಪುರಾವೆಗಳಿಲ್ಲ.

ಈ ಬಗ್ಗೆ ಮಾಹಿತಿ ನೀಡಿದ ಗ್ರಾ.ಪಂ ಮಾಜಿ ಅಧ್ಯಕ್ಷ ಪಿ.ಎಂ ಮಂಜುನಾಥ್, ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಬಿಟ್ಟರೆ ಯಾವ ಚಟುವಟಿಕೆಗಳು ಕೂಡಾ ನಡೆದಿಲ್ಲ. ಗ್ರಾ.ಪಂ ಮೂಲಕ ಸಮಾಧಿ ಸ್ಥಳವನ್ನು ರಕ್ಷಿಸುವ ಕೆಲಸವಾಗುವಂತಾದರೆ ಒಳ್ಳೆಯದು ಎನ್ನುತ್ತಾರೆ.

ಮಾಯಕೊಂಡದಲ್ಲಿ ಮದಕರಿ ವಂಶದ ವೀರನೊಬ್ಬನ ಸಮಾಧಿ ಇದೆ

ಮಾಯಕೊಂಡದಲ್ಲಿ ಮದಕರಿ ವಂಶದ ವೀರನೊಬ್ಬನ ಸಮಾಧಿ ಇದೆ

ಸಾಹಿತಿ ಟಿ.ಎನ್ ಷಣ್ಮುಖ ಮಾತನಾಡಿ, ಬಹಳ ವರ್ಷಗಳಿಂದಲೂ ಮನವಿ ಮಾಡುತ್ತಾ ಬಂದಿದ್ದರೂ, ಅಧಿಕಾರದಲ್ಲಿರುವವರು ಕೂಡಾ ಕೆಲಸ ಮಾಡಲಿಲ್ಲ. ಜಾತಿ ಹಿಡಿದು ಸಮಾಜ ಬೆಳವಣಿಗೆ ನಡೀತಿರುವುದರಿಂದ ಇದೆಲ್ಲ ಸಾಧ್ಯವಾಗುತ್ತಿಲ್ಲ ಎಂದರು.

ಇತಿಹಾಸ ಪ್ರಿಯ ಪುರಂದರ ಲೋಕಿಕೆರೆ ಮಾತನಾಡಿ, ಹೊದಿಗೆರೆಯಲ್ಲಿ ಛತ್ರಪತಿ ಶಿವಾಜಿಯ ತಂದೆ ಪೇಶ್ವೆ ಶಹಾಜಿಯ ಸಮಾಧಿಯನ್ನು ಸ್ಮಾರಕವನ್ನಾಗಿಸಿರುವಂತೆ, ಮಾಯಕೊಂಡದಲ್ಲೂ ಮದಕರಿ ವಂಶದ ವೀರನೊಬ್ಬನ ಸಮಾಧಿ ಇದೆ. ಅದೇ ರೀತಿ ಮತ್ತಿ ತಿಮ್ಮಣ್ಣ ನಾಯಕನ ನೆನಪಿಗೆ ಈ ಸ್ಥಳವನ್ನು ರಕ್ಷಿಸಿಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.

English summary
The tomb of Matti Thimmanna Nayaka, who is in the village of Matti in the southern border of Davanagere taluk, is nearing extinction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X