ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಲಸಿಕೆ ಕೊಟ್ಟ ಪ್ರಕರಣ; ಆರೋಗ್ಯ ಇಲಾಖೆಯಿಂದ ನೋಟೀಸ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮಾರ್ಚ್ 16: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದಾವಣಗೆರೆಯ ಖಾಸಗಿ ಶಾಲೆ ಆವರಣದಲ್ಲಿ ಸತ್ಯಸಾಯಿ ಟ್ರಸ್ಟ್ ಹಾಗೂ ಹೋಮಿಯೋಪಥಿ ಕ್ಲಿನಿಕ್ ನಿಂದ ಕೊರೊನಾ ವೈರಸ್ ಸಮಸ್ಯೆಗೆ ಆರ್ಸೆನಿಕ್ ಅಲ್ಫಾ 30 ಎಂಬ ದ್ರಾವಣದ ಲಸಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಕೋವಿಡ್ 19 ಕಾಯ್ದೆ ಅಡಿಯಲ್ಲಿ ಸತ್ಯಸಾಯಿ ಟ್ರಸ್ಟ್, ಹೋಮಿಯೋಪಥಿ ವೈದ್ಯರು ಹಾಗೂ ಲಸಿಕೆ ಹಾಕಿದ ಸಿಬ್ಬಂದಿಗೆ ನೋಟೀಸ್ ನೀಡಲಾಗಿದೆ. ಕಳೆದ ರಾತ್ರಿ ಪಿಜೆ ಬಡಾವಣೆ ಈಶ್ವರಮ್ಮ ಶಾಲೆ ಆವರಣದಲ್ಲಿ ಲಸಿಕೆ ಹಾಕಲಾಗಿತ್ತು.

ಕೊರೊನಾ ಭಯ ಇದ್ರೂ ಕಾಲೇಜ್‌ಗೆ ಬರ್ಬೇಕು: ವಿರೋಧಿಸಿದ್ರೆ ದಂಡ ಕಟ್ಬೇಕುಕೊರೊನಾ ಭಯ ಇದ್ರೂ ಕಾಲೇಜ್‌ಗೆ ಬರ್ಬೇಕು: ವಿರೋಧಿಸಿದ್ರೆ ದಂಡ ಕಟ್ಬೇಕು

ಆಯುರ್ವೇದ ವೈದ್ಯರೊಬ್ಬರಿಂದ ನೂರಾರು ಜನರಿಗೆ ಲಸಿಕೆ ಹಾಕಿದ್ದು, ಲಸಿಕೆ ಹಾಕಲು ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡದೇ ಹಾಗೂ ಆರೋಗ್ಯ ಅಧಿಕಾರಿಗಳ ಅನುಮತಿ‌ ಇಲ್ಲದೆ ಈ ರೀತಿ ಲಸಿಕೆ ಹಾಕುತ್ತಿರುವುದಕ್ಕೆ ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸತ್ಯಸಾಯಿ ಸೇವಾ ಟ್ರಸ್ಟ್ ಜೊತೆ ವಿವರಣೆ ಪಡೆದ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Health Department Gave Notice To Homeopathi Clinic Which Gave Liquid To Cure Coronavirus

ಅಲ್ಲದೆ ಕ್ಲಿನಿಕ್ ಹಾಗೂ ಔಷಧಿಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದು, ಸೋಂಕಿನ‌ ಹೆಸರಿನಲ್ಲಿ ಜನರ ಅಮಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳದಿರಲು ಸೂಚನೆ ನೀಡಲಾಗಿದೆ.

English summary
Health department of davanagere gave notice to sathyasayi trust and homeopathi clinic for giving arsenic alpha 30 liquid to people without taking any medicine
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X