ಹರಿಹರ ಶಾಸಕ ರಾಮಪ್ಪ, ಪತ್ನಿಗೆ ಕೊರೊನಾ ಸೋಂಕು ದೃಢ
ದಾವಣಗೆರೆ, ಏಪ್ರಿಲ್ 27: ದಾವಣಗೆರೆ ಜಿಲ್ಲೆ ಹರಿಹರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಮತ್ತು ಅವರ ಪತ್ನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕೊರೊನಾ ಟೆಸ್ಟ್ ನಡೆಸಿದಾಗ ಶಾಸಕ ಎಸ್.ರಾಮಪ್ಪ ಅವರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಮನೆಯಲ್ಲಿಯೇ ಕ್ವಾರಂಟೈನ್ ಆಗಿರುವ ಶಾಸಕರು ಹಾಗೂ ಅವರ ಪತ್ನಿಗೆ ಅಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ. ಕಳೆದೆರಡು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ಕೊರೊನಾ ಟೆಸ್ಟ್ ಮಾಡಿಸುವಂತೆ ಅವರು ಮನವಿ ಮಾಡಿದ್ದಾರೆ.
Recommended Video
ಅಗತ್ಯ
ಸಾಮಾಗ್ರಿ
ಖರೀದಿ
ವೇಳೆ
ಜನ
ದಟ್ಟಣೆ..ಕೊರೊನಾ
ನಿಯಮಗಳ
ಉಲ್ಲಂಘನೆ
|
Oneindia
Kannada
ಇನ್ನು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹಾಗೂ ಚನ್ನಗಿರಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೇರಿ ಅವರ ಕುಟುಂಬದ ಎಂಟು ಮಂದಿಗೆ ಕೊರೊನಾ ವೈರಸ್ ವಕ್ಕರಿಸಿತ್ತು. ಈ ಮೂಲಕ ದಾವಣಗೆರೆ ಜಿಲ್ಲೆಯಲ್ಲಿ ಮೂವರು ಶಾಸಕರಿಗೆ ಕೊರೊನಾ ಸೋಂಕು ತಗುಲಿದಂತಾಗಿದೆ.
Comments
davanagere mla coronavirus corona vaccine Guidelines ದಾವಣಗೆರೆ ಹರಿಹರ ಶಾಸಕ ವೈರಸ್ ಕೊರೊನಾ ಲಸಿಕೆ ಮಾರ್ಗಸೂಚಿಗಳು
English summary
Harihar constituency MLA S.Ramappa and his wife tests positive for coronavirus.
Story first published: Tuesday, April 27, 2021, 17:36 [IST]