• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಲ್ ವಿಡಿಯೋ: ಹಳದಮ್ಮ 'ಕಾರ್ಣಿಕ' ನಿಜವಾಯ್ತು; ರೇಣುಕಾಚಾರ್ಯಗೆ ಸಿಗಲಿಲ್ಲ ಸಚಿವ ಸ್ಥಾನ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಆಗಸ್ಟ್ 05: "ತಾಯಿ ಅಪ್ಪಣೆ ಕೊಡು. ಎಡ ಪ್ರಸಾದವಾದರೂ ಸರಿ, ಬಲ ವರ ಆದರೂ ಆಯ್ತು, ಬೇಗ ಕೊಡು. ಕೋವಿಡ್ ಸಂಕಷ್ಟ ವೇಳೆಯಲ್ಲಿ ಹಗಲಿರುಳು ಶ್ರಮಿಸಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯರಿಗೆ ಸಚಿವ ಸ್ಥಾನ ಸಿಗುತ್ತೋ, ಇಲ್ಲವೋ ಅನುಗ್ರಹಿಸು ತಾಯಿ. ಯಾವುದಾದರೂ ಬೇಗನೇ ಕೊಡಮ್ಮಾ,'' ಈ ರೀತಿಯಲ್ಲಿ ಹಳದಮ್ಮ ಬಳಿ ಕೇಳಿಕೊಳ್ಳುತ್ತಿದ್ದಂತೆ ಎಡಗಡೆಯಿಂದ ಹೂವು ಉದುರಿದ್ದವು.
ಇದು ನಡೆದಿದ್ದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾರಿಕೊಪ್ಪ ಗ್ರಾಮದಲ್ಲಿ ನೆಲೆಸಿರುವ ಹಳದಮ್ಮ ದೇವಿಯ ಸನ್ನಿಧಾನದಲ್ಲಿ. ಕಳೆದ ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಆಗಲೇ ಈ ತಾಯಿ ಎಡಗಡೆಯ ಪ್ರಸಾದ ನೀಡಿದ್ದಳು.

ಮಾರಿಕೊಪ್ಪದಲ್ಲಿನ ಹಳದಮ್ಮ ದೇಗುಲ ಲಕ್ಷಾಂತರ ಭಕ್ತರ ಪಾಲಿನ ಆರಾಧ್ಯ ದೇವಿ‌.‌ ಭಕ್ತರ ಇಷ್ಟಾರ್ಥ ಸಿದ್ಧಿಸುವ ದೇವಿ‌ ಅಂತಾನೇ ಪ್ರಖ್ಯಾತಿ. ಕಾಕತಾಳೀಯವೋ ಏನೋ ಎಂಬಂತೆ ಎಷ್ಟೇ 'ಸರ್ಕಸ್' ಮಾಡಿದರೂ ರೇಣುಕಾಚಾರ್ಯರಿಗೆ ಸಚಿವ ಸ್ಥಾನ ಒಲಿಯಲೇ ಇಲ್ಲ.

 ಸಚಿವ ಸ್ಥಾನ ಸಿಗುವ ಭರವಸೆ ಹೊಂದಿದ್ದ ಎಂಪಿಆರ್

ಸಚಿವ ಸ್ಥಾನ ಸಿಗುವ ಭರವಸೆ ಹೊಂದಿದ್ದ ಎಂಪಿಆರ್

ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ಭರವಸೆ ಹೊಂದಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ನಿರಾಸೆಯಲ್ಲಿದ್ದಾರೆ. ಕೊರೊನಾ ಸೋಂಕಿತರಿದ್ದ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಸೆಂಟರ್‌ನಲ್ಲಿ ವಾಸ್ತವ್ಯ ಮಾಡಿದ್ದರು.‌ ರಸಮಂಜರಿ, ಕ್ರೀಡೆ, ವ್ಯಾಯಾಮ ಸೇರಿದಂತೆ ಸೋಂಕಿತರು ಗುಣಮುಖರಾಗಿ ಹೋಗುವವರೆಗೂ ಅಲ್ಲೇ ಇದ್ದರು.

ಹೊನ್ನಾಳಿಗೆ ಬಂದ ತಕ್ಷಣ ಸೋಂಕಿತರ ಆರೈಕೆ, ಲಸಿಕೆ ನೀಡಿಕೆ, ಊಟ, ಉಪಹಾರ ಸೇರಿದಂತೆ ಎಲ್ಲವನ್ನೂ ನೋಡಿಕೊಂಡಿದ್ದರು. ಈ ಕಾರ್ಯ ರಾಜ್ಯ, ರಾಷ್ಟ್ರ ಮಾತ್ರವಲ್ಲ ಬೇರೆ ಬೇರೆ ದೇಶಗಳಲ್ಲಿ‌ ನೆಲೆಸಿದ್ದವರ ಮೆಚ್ಚುಗೆಗೂ ಪಾತ್ರ ಆಗಿತ್ತು. ರಾಷ್ಟ್ರಮಟ್ಟದ ಬಿಜೆಪಿ ನಾಯಕರ ಪ್ರಶಂಸೆಗೂ ಪಾತ್ರವಾಗಿತ್ತು. ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ ಎಂಬ ಅಚಲ ವಿಶ್ವಾಸವೂ ರೇಣುಕಾಚಾರ್ಯ ಅವರಲ್ಲಿತ್ತು. ಆದರೆ ಕೊನೆಗೂ ಮಂತ್ರಿ ಭಾಗ್ಯ ಸಿಗಲೇ ಇಲ್ಲ.

 ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರ ದುಂಬಾಲು

ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರ ದುಂಬಾಲು

ಸಚಿವ ಸ್ಥಾನ ಪಡೆಯಲು ರೇಣುಕಾಚಾರ್ಯ ಕೇಂದ್ರದ ವರಿಷ್ಠರು, ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರ ದುಂಬಾಲು ಬಿದ್ದಿದ್ದರು. ಅಲ್ಲದೆ ಟೆಂಪಲ್ ರನ್ ಸಹ ಮಾಡಿದ್ದರು. ಅವರ ಅಭಿಮಾನಿಗಳು ಹಳದಮ್ಮ ದೇವಿ ಬಳಿ ಅಪ್ಪಣೆ ಕೇಳಿದ್ದರು. ದೇವಿ ಕೊಟ್ಟ ಕಾರ್ಣಿಕ ಕೊನೆಗೂ ನಿಜವಾದಂತಿದೆ.

ಏನೇ ಒಳ್ಳೆಯ ಕೆಲಸ ಇದ್ದರೂ ಈ ದೇವಿಯ ಅಪ್ಪಣೆ ಪಡೆದ ಬಳಿಕವೇ ಭಕ್ತರು ಮುಂದಿನ ಕಾರ್ಯ ಮಾಡುತ್ತಾರೆ. ಇದೇ ರೀತಿಯಲ್ಲಿ ಹೊನ್ನಾಳಿ ಶಾಸಕರಿಗೆ ಸಚಿವ ಸ್ಥಾನ ಸಿಗುತ್ತೋ, ಇಲ್ಲವೋ ಎಂಬ ಬಗ್ಗೆ ದೇವಿಯಲ್ಲಿ ಅಪ್ಪಣೆ ಕೇಳಿದ್ದರು. ಕೇಳಿದ ಎರಡೇ ನಿಮಿಷಕ್ಕೆ ಎಡ ಪ್ರಸಾದವನ್ನು ದೇವಿ ನೀಡಿದ್ದಳು.

 ಸಚಿವ ಸ್ಥಾನ ಸಿಗಲ್ಲ ಎಂಬ ಅಭಿಪ್ರಾಯ

ಸಚಿವ ಸ್ಥಾನ ಸಿಗಲ್ಲ ಎಂಬ ಅಭಿಪ್ರಾಯ

ಕಳೆದ ನಾಲ್ಕು ದಿನಗಳ ಹಿಂದೆ ಬೇಡಿಕೊಂಡಿದ್ದ ಮಾರಿಕೊಪ್ಪ ಗ್ರಾಮಸ್ಥರು ಹಾಗೂ ರೇಣುಕಾಚಾರ್ಯ ಅಭಿಮಾನಿಗಳು ದೇವಿಯೇ ಎಡಗಡೆ ಹೂವು ಉದುರಿಸುವ ಮೂಲಕ ಸಚಿವ ಸ್ಥಾನ ಸಿಗಲ್ಲ ಎಂದು ಹೇಳಿರುವಾಗ ಸಚಿವ ಸ್ಥಾನ ಸಿಗಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಅದು ಈಗ ನಿಜವಾಗಿದೆ. ಯಾಕೆಂದರೆ ಇಷ್ಟಾರ್ಥ ಸಿದ್ಧಿಸುವುದಕ್ಕೆ ಈ ತಾಯಿ ಪ್ರಖ್ಯಾತಿ ಹೊಂದಿರುವ ಕಾರಣಕ್ಕೆ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಈ ತಾಯಿ ಸನ್ನಿಧಿಗೆ ಬರುತ್ತಾರೆ. ಬಲಗಡೆ ಪ್ರಸಾದ ಕೊಟ್ಟರೆ ಮಾತ್ರ ಮುಂದುವರಿಯುತ್ತಾರೆ. ಎಡ ಪ್ರಸಾದ ಕೊಟ್ಟರೆ ಯಾವುದೇ ಕಾರಣಕ್ಕೂ ಆ ಕೆಲಸಕ್ಕೆ ಕೈ ಹಾಕುವುದಿಲ್ಲ. ಅಷ್ಟು ಪವರ್ ಫುಲ್ ದೇವಿ ಈಕೆ.

 ಶಕ್ತಿದೇವತೆ ಬಳಿ ಅಪ್ಪಣೆ ಕೇಳಿದ್ದರು

ಶಕ್ತಿದೇವತೆ ಬಳಿ ಅಪ್ಪಣೆ ಕೇಳಿದ್ದರು

ಮಾರಿಕೊಪ್ಪ ಗ್ರಾಮಸ್ಥರು ಕಳೆದ ನಾಲ್ಕು ದಿನಗಳ ಹಿಂದೆ ದೇವಿಯ ಸನ್ನಿಧಿಗೆ ಬಂದಿದ್ದರು. "ರೇಣುಕಾಚಾರ್ಯ ಸಚಿವರಾಗುತ್ತಾರೋ, ಇಲ್ಲವೋ ಎಂಬ ಬಗ್ಗೆ ಶಕ್ತಿದೇವತೆ ಬಳಿ ಅಪ್ಪಣೆ ಕೇಳಿದ್ದರು. ನೀನು ಸುಖಾಸುಮ್ಮನೆ ಕಾಯಿಸಬೇಡ. ಆದಷ್ಟು ಬೇಗ ವರ ಕರುಣಿಸು ತಾಯಿ ಎಂದು ಬೇಡಿಕೊಂಡಿದ್ದರು. ಮಂತ್ರಿ ಸ್ಥಾನ ಸಿಗುತ್ತದೆ ಎಂದಾದರೆ ಬಲಗಡೆ ವರ ಕೊಡು. ಇಲ್ಲದಿದ್ದರೆ ಎಡ ಪ್ರಸಾದ ನೀಡು ತಾಯಿ ಎಂದು ಕೇಳಿಕೊಂಡಾಕ್ಷಣವೇ ಧರಧರನೇ ಎಡಭಾಗದಲ್ಲಿದ್ದ ಹೂವು ಉದುರಿತು. ಈ ದೃಶ್ಯ ಸೆರೆಯಾಗಿದ್ದು, ಇದು ತಾಯಿಯ ಶಕ್ತಿಗೆ ಸಾಕ್ಷಿಯಾಗಿದೆ,'' ಎನ್ನುತ್ತಾರೆ ಗ್ರಾಮಸ್ಥರು.

  ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣವರ್ ರಾಜಕೀಯ ಪ್ರವೇಶ | Oneindia Kannada

  ತಾಲೂಕಿನ ಜನರ ಸೇವಕನಾಗಿ ಕೆಲಸ ಮಾಡುತ್ತೇ

  ಇನ್ನು ಎಂ.ಪಿ. ರೇಣುಕಾಚಾರ್ಯರೂ ಸಹ ಕಳೆದ ನಾಲ್ಕು ದಿನಗಳ ಹಿಂದೆ ಬಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಹರಕೆ ಹೊತ್ತುಕೊಂಡು ಹೋಗಿದ್ದರು. ಆದರೆ, ವರ ಕೇಳಿರಲಿಲ್ಲ. ಅಭಿಮಾನಿಗಳು ಹಾಗೂ ಗ್ರಾಮಸ್ಥರು ದೇವಿಯ ಮಹಿಮೆಗೆ ಜೈ ಹೋ.. ಎನ್ನುತ್ತಿದ್ದಾರೆ.

  ಬೆಂಗಳೂರಿನಲ್ಲಿ ಮಾತನಾಡಿದ ರೇಣುಕಾಚಾರ್ಯ, "ಸಚಿವ ಸ್ಥಾನ‌ ಸಿಗದಿರುವುದು ಬೇಸರ ತಂದಿದೆ. ದಾವಣಗೆರೆ ಜಿಲ್ಲೆಗೆ ಅನ್ಯಾಯವಾಗಿದೆ. ನಾನು ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನ ಜನರ ಸೇವಕನಾಗಿ ಕೆಲಸ ಮಾಡುತ್ತೇನೆ. ಜನರ ಹಿತ ಮುಖ್ಯ. ಕೋವಿಡ್ ವೇಳೆಯಲ್ಲಿ ಜನರಿಗಾಗಿ ಮಾಡಿದ ಕೆಲಸ ಮಾಡಿದ ತೃಪ್ತಿ ಇದೆ,'' ಎಂದು ಹೇಳಿದ್ದಾರೆ.

  English summary
  Davanagere district Honnali taluk Marikoppa village's Haladamma Prediction Become true, Honnalli MLA MP Renukacharya not Got Minister Post.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X