ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಡಿಕೆಶಿ ಸಿಎಂ ಆಗುತ್ತೇನೆಂದು ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ"

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 06: ಡಿಕೆಶಿ ಪದಗ್ರಹಣಕ್ಕೆ ಸರ್ಕಾರ ಅಡ್ಡಿಯಾಗಿಲ್ಲ. ಡಿಕೆಶಿ ಸಿಎಂ ಆಗುತ್ತೇನೆ ಎಂದು ಎದೆ ಉಬ್ಬಿಸಿ ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ ಎಂದು ದಾವಣಗೆರೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವ್ಯಂಗ್ಯವಾಡಿದರು.

Recommended Video

ಪಕ್ಷದ ಮುಖಂಡರನ್ನ ವಾಪಸ್ ಕರೆತರೋ ಬಿಗ್ಗೆ ಮಾತನಾಡಿದ ಡಿಕೆಶಿ | DK Shivakumar | Oneindia Kannada

ನಿನ್ನೆ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಹಿಂದೆ ಸಿದ್ದರಾಮಯ್ಯ ತುಘಲಕ್ ದರ್ಬಾರ್ ಮಾಡಿದ್ದರು. ನಾವು ಆ ರೀತಿ ಮಾಡಿಲ್ಲ. ಪದಗ್ರಹಣಕ್ಕೆ ಅಡ್ಡಿಯಾಗಿಲ್ಲ. ಪೈಲ್ವಾನ್ ರೀತಿ ಎದೆ ಉಬ್ಬಿಸಿ ಡಿಕೆಶಿ ಮುಂದೆ ಬರುತ್ತಿದ್ದಾರೆ. ನಿಯಮಾನುಸಾರ ಕಾರ್ಯಕ್ರಮ ಮಾಡಿಕೊಳ್ಳಲಿ, ಯಾರು ಬೇಡ ಎನ್ನುತ್ತಾರೆ. ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಡಲಿ" ಎಂದು ಟಾಂಗ್ ನೀಡಿದರು.

ತಣ್ಣಗಾಗದ ಬಿಜೆಪಿ ಬಂಡಾಯ, ಹೈಕಮಾಂಡ್ ಭೇಟಿಗೆ ಸಿದ್ದ ಎಂದ ರೇಣುಕಾಚಾರ್ಯ!ತಣ್ಣಗಾಗದ ಬಿಜೆಪಿ ಬಂಡಾಯ, ಹೈಕಮಾಂಡ್ ಭೇಟಿಗೆ ಸಿದ್ದ ಎಂದ ರೇಣುಕಾಚಾರ್ಯ!

ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಮತವಲ್ಲ. ಡಿಕೆಶಿ, ಸಿದ್ದರಾಮಯ್ಯ ಭ್ರಮನಿರಸನರಾಗಿದ್ದಾರೆ" ಎಂದರಲ್ಲದೇ, ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪ ವಿಷದ ಕುರಿತು ಮಾತನಾಡಿ, "ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಅವರ ಮಗ ಸರ್ಕಾರಿ ಕಾಮಗಾರಿ ಶಂಕು ಸ್ಥಾಪನೆ ಮಾಡಿದ್ದರು. ಆದರೆ ಬಿಎಸ್ ವೈ ಅವರ ಪುತ್ರ ವಿಜಯೇಂದ್ರ ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಆಡಳಿತ ಯಂತ್ರದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಇಲ್ಲ" ಎಂದು ಹೇಳಿದರು.

Government Is Not Obstacle To Dk Shivakumar Oath Taking Ceremony Said MP Renukacharya

ಬಿಜೆಪಿಯಿಂದ ರಿವರ್ಸ್ ಆಪರೇಷನ್ ಸಾಧ್ಯವಿಲ್ಲ: ಯಾವುದೇ ಕಾರಣಕ್ಕೂ ಬಿಜೆಪಿಯಿಂದ ರಿವರ್ಸ್ ಆಪರೇಷನ್ ಆಗಲು ಸಾಧ್ಯವಿಲ್ಲ, ಬಿಜೆಪಿ ರಿವರ್ಸ್ ಆಪರೇಷನ್ ಮಾಡಿದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಡಿಕೆಶಿಗೆ ರೇಣುಕಾಚಾರ್ಯ ಬಹಿರಂಗ ಸವಾಲು ಹಾಕಿದರು. "ಇದನ್ನು ಡಿಕೆಶಿ ಸವಾಲಾಗಿ ಸ್ವೀಕರಿಸಲಿ ನೋಡೋಣ. ನಮಗೂ ತೋಳ್ಬಲವಿದೆ, ಕಾರ್ಯಕರ್ತರ ಪಡೆ ಇದೆ. ಇದು ಸಾಧ್ಯವಿಲ್ಲ, ಇದನ್ನು ಕಾಂಗ್ರೆಸ್ ಸೃಷ್ಟಿ ಮಾಡುತ್ತಿದೆ" ಎಂದರು.

English summary
Government is not obstale to Kpcc president DK Shivakumar oath taking ceremony said MP Renukacharya in davanagere,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X