ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾರಿ ಮಧ್ಯೆ ಗಾಡಿ ನಿಲ್ಲಿಸಿ ಸಿಲಿಂಡರ್ ನಿಂದ ಗ್ಯಾಸ್ ಕದಿಯುತ್ತಿದ್ದ ಸಿಬ್ಬಂದಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 11: ಅಡುಗೆ ಗ್ಯಾಸ್ ಸಿಲಿಂಡರ್ ತರಿಸಿದಾಗ ಗ್ರಾಹಕರು ಸಾಮಾನ್ಯವಾಗಿ ಅದರ ತೂಕ ಹಾಕಿ ನೋಡುವುದಿಲ್ಲ. ಅದರ ಬಗ್ಗೆ ಅನುಮಾನ ಕೂಡ ಮೂಡುವುದಿಲ್ಲ. ಅದರಲ್ಲೂ ವಾಣಿಜ್ಯ ಸಂಬಂಧಿ ಉದ್ದೇಶಕ್ಕೆ ಲೋಡ್ ಗಟ್ಟಲೆ ಗ್ಯಾಸ್ ಸಿಲಿಂಡರ್ ತರಿಸುವವರು ಅದನ್ನು ಗಮನಿಸುವ ಗೋಜಿಗೂ ಹೋಗುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಗ್ಯಾಸ್ ಕದಿಯುತ್ತಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ಗಳನ್ನು ನೀಡಲು ಹೋಗುವಾಗ ಮಾರ್ಗ ಮಧ್ಯೆಯೇ ಗಾಡಿ ನಿಲ್ಲಿಸಿ ಗ್ಯಾಸ್ ಕದಿಯುವ ಸಂಗತಿ ಇದೀಗ ದಾವಣಗೆರೆ ಹೊರವಲಯದಲ್ಲಿ ಬೆಳಕಿಗೆ ಬಂದಿದೆ.

 ಗ್ಯಾಸ್ ಟ್ಯಾಂಕರ್ ನಿಂದ ಅನಿಲ ಸೋರಿಕೆ; ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ ಗ್ಯಾಸ್ ಟ್ಯಾಂಕರ್ ನಿಂದ ಅನಿಲ ಸೋರಿಕೆ; ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

ವಾಣಿಜ್ಯ ಉದ್ದೇಶಕ್ಕೆ, ಮದುವೆ ಸಮಾರಂಭಗಳಿಗೆ ನೀಡಲಾಗುವ ಗ್ಯಾಸ್ ಸಿಲಿಂಡರ್ ಗಳನ್ನು ಮಾರ್ಗಮಧ್ಯೆ, ಜನ ಹೆಚ್ಚಿಲ್ಲದ ಕಡೆ ನಿಲ್ಲಿಸಿ ಸಿಬ್ಬಂದಿಯೇ ಗ್ಯಾಸ್ ಕದಿಯುತ್ತಿದ್ದ ಸಂಗತಿ ತಿಳಿದುಬಂದಿದೆ. ಸಿಬ್ಬಂದಿ ಗ್ಯಾಸ್ ಕದಿಯುತ್ತಿರುವುದನ್ನು ಕಂಡ ಸಾರ್ವಜನಿಕರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

Gas Agency Staff Stealing Gas From Cylinders In Davanagere

ಇಂದು ನಗರದ ಹೊರ ವಲಯದಲ್ಲಿದ್ದ ತೋಟವೊಂದರಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು ಇಳಿಸಿ ಡಂಪಿಂಗ್ ಮಾಡುತ್ತಿದ್ದ ಸಿಬ್ಬಂದಿ ಕಂಡುಬಂದಿದ್ದಾರೆ. ತುಂಬಿದ ಸಿಲಿಂಡರ್ ನಿಂದ ಖಾಲಿ‌ ಸಿಲಿಂಡರ್ ಗೆ ಗ್ಯಾಸ್ ತುಂಬುತ್ತಿದ್ದ ಅವರನ್ನು ಕಂಡು ಅನುಮಾನಗೊಂಡ ಜನ ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
English summary
Gas Agency staff stealing Gas from cylinders which were taken for commercial purposes have came to light in davanagere district. The scene was captured on mobile by the public who saw the crew stealing gas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X