ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಪಕ್ಷಕ್ಕೆ ಸಂಘಟನೆ ಈ ರೀತಿ ಆಗಬೇಕು ಎಂದ ಶಾಸಕ ರಮೇಶ್ ಕುಮಾರ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 15: ಕಾಂಗ್ರೆಸ್ ಒಂದೊಂದೇ ರಾಜ್ಯ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಹೇಗೆ ಎಂಬ ಬಗ್ಗೆ ಮಾಜಿ ಸಚಿವ, ಶಾಸಕ ರಮೇಶ್ ಕುಮಾರ್ ಸ್ವಪಕ್ಷದವರಿಗೆ ಪಾಠ ಮಾಡಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಸಂಘಟನೆ ಯಾವ ರೀತಿಯಲ್ಲಿ ಆಗಬೇಕೆಂಬ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಪಂಜಾಬ್ ರಾಜ್ಯದ ಉದಾಹರಣೆ ಇಟ್ಟುಕೊಂಡು ಸಂಘಟನೆ ಪಾಠ ಮಾಡಿದ ರಮೇಶ್ ಕುಮಾರ್, ಕಾಂಗ್ರೆಸ್‌ಗೆ ಟಾನಿಕ್ ಕೊಟ್ಟರೆ ಶಕ್ತಿ ಬರುತ್ತಾ? ಕಾರ್ಯಕ್ರಮಗಳು, ಆಡೋ ಭಾಷೆ, ಜನರ ಮಧ್ಯ ಇರಬೇಕು ಜನರಿಂದ ದೂರ ಆಗಿ ಕಾಂಗ್ರೆಸ್‌ನ ಕಟ್ಟಬೇಕು ಅಂದ್ರೆ ಹೇಗೆ? ಎಂದು ಪ್ರಶ್ನಿಸಿದರು.

''ಜನ ಏನು ಬದಲಾಗಿಲ್ಲ. ಜನ ಹಾಗೆ ಇದ್ದಾರೆ. ಮೊಬೈಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಸಿಎಂರನ್ನೇ ಸೋಲಿಸಿದ. ಪ್ರಜಾಪ್ರಭುತ್ವದಲ್ಲಿ ಜನರ ಶಕ್ತಿ, ಪ್ರಾಮುಖ್ಯತೆ ಏನು ಎಂಬ ತಿಳಿದುಕೊಳ್ಳುವ ಮೂಲಕ ಆತ್ಮಾವಲೋಕನ‌ ಮಾಡಿಕೊಳ್ಳಬೇಕಿದೆ. ಜೊತೆಗೆ ನಾವು ಪಾಠ ಕಲಿಬೇಕು. ನಮ್ಮಲ್ಲಿ ನಮ್ರತೆ ಬರಬೇಕು, ಅಹಂಕಾರ ಹೋಗಬೇಕು. ಜನರನ್ನು ಪ್ರೀತಿ ಮಾಡೋದು ಜನರನ್ನು ಒಲಿಸಿಕೊಳ್ಳೋ ಕೆಲಸ ಮಾಡಬೇಕು. ಅದಕ್ಕೆ ಒಳ್ಳೆಯ ಕಾರ್ಯಕ್ರಮ ರೂಪುಗೊಳ್ಳಬೇಕು,'' ಎಂದು ಸಲಹೆ ನೀಡಿದರು.

Former Minister Ramesh Kumar on how to build Congress Party organization

''ರಾಜ್ಯದಲ್ಲಿ ಎಲ್ಲಿ ಹನುಮ ಜಯಂತಿ ಆದರೂ ಕೂಡ ಎಲ್ಲೆಲ್ಲೂ ಕೇಸರಿ ಬಾವುಟ ಕಾಣುತ್ತಿವೆ. ಡಿಸೇಲ್ ಬೆಲೆ ನೂರು ರೂಪಾಯಿ ಆಗಿದೆ. ಬಿಜೆಪಿ ಪಕ್ಷ ಮಾತ್ರ ಕೇಸರಿ ಆಗಿದೆ. ಮೂರು ಪಕ್ಷದವರ ಖಾಸಗಿ ಶಾಲೆ, ಆಸ್ಪತ್ರೆಗಳಿವೆ. ಎಲ್ಲಾ ಖಾಸಗೀಕರಣ, ಕೇಸರೀಕರಣ ಆಗ್ತಾ ಇದೆ,'' ಎಂದು ಅಭಿಪ್ರಾಯಪಟ್ಟರು.

Recommended Video

ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿಕೊಂಡ ಪಂತ್ ! | Oneindia Kannada

''ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ದೇಶಕ್ಕೆ ಗೊತ್ತಿರುವ ವಿಚಾರ. ನಮ್ಮ ಮನಸ್ಸಿಗೆ, ನಮಗೆ ಲಜ್ಜೆ ಇರಬೇಕು. ಕನ್ನಡಿ ಮುಂದೆ ನಿಂತರೆ ನಮ್ಮ ಮುಖ ಸುಂದರವಾಗಿ ಕಾಣಬೇಕು. ನಮ್ಮ ಮುಖ ನಮಗೆ ಅಸಹ್ಯವಾಗಿ ಕಾಣಬಾರದು. ಇದು ಎಲ್ಲರಿಗೂ ಅನ್ವಯಿಸುತ್ತೆ. ನಾವು ಲಜ್ಜೆ ಬಿಟ್ಟಿದ್ದೀವಿ. ಎಲ್ಲರಿಗಿಂತ ನಮ್ಮ ಮುಖ ಸುಂದರವಾಗಿದೆ ಅಂದ್ರೆ ಏನು ಮಾಡೋಕೆ ಆಗುತ್ತೆ,'' ಎಂದು ಕಿಡಿಕಾರಿದರು.

English summary
Former Minister, MLA Ramesh Kumar shared his taught on how can Congres party re build its Party organization structure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X