ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸಚಿವ ಪರಮೇಶ್ಚರ ನಾಯ್ಕ ಪುತ್ರನಿಂದ ರೈತರ ಮೇಲೆ ಹಲ್ಲೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಡಿಸೆಂಬರ್ 19: ಮಾಜಿ ಸಚಿವ ಪಿ. ಟಿ. ಪರಮೇಶ್ವರ ನಾಯ್ಕ ಅವರ ಪುತ್ರ ಹಾಗೂ ಆತನ ಬೆಂಬಲಿಗರು ಸೇರಿಕೊಂಡು ರೈತರ ಮೇಲೆ ಹಲ್ಲೆ ನಡೆಸಿದ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿಯ ಹೊರವಲಯದಲ್ಲಿ ನಡೆದಿದೆ.

ಕಲ್ಲು ಗಣಿಗಾರಿಕೆ ವಿಚಾರವಾಗಿ ಪ್ರಶ್ನಿಸಿದ ರೈತರ ಮೇಲೆ ಹಲ್ಲೆ ನಡೆಸಲಾಗಿದ್ದು, ಹಲ್ಲೆ ನಡೆಸಿರುವ ಫೋಟೋದಲ್ಲಿ ಸೆರೆಯಾಗಿದೆ.‌ ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊಸಪೇಟೆ ಹೆದ್ದಾರಿಯ ಸುರಂಗ ಮಾರ್ಗದಲ್ಲಿ ಬಿರುಕು ಹೊಸಪೇಟೆ ಹೆದ್ದಾರಿಯ ಸುರಂಗ ಮಾರ್ಗದಲ್ಲಿ ಬಿರುಕು

ಹರಪ್ಪನಹಳ್ಳಿ ಪಟ್ಟಣದ ಹೊರವಲಯದಲ್ಲಿ ಮಾಜಿ ಸಚಿವ ಪಿ. ಟಿ. ಪರಮೇಶ್ವರ ನಾಯ್ಕ, ಅವರ ಪುತ್ರ ಭರತ್ ಹಾಗೂ ಬೆಂಬಲಿಗರಿಂದ ಹಲ್ಲೆ ನಡೆಸಿದ್ದು ವಿಡಿಯೋದಲ್ಲಿದೆ. ಮಾತ್ರವಲ್ಲ ಮಾಜಿ ಪರಮೇಶ್ವರ ನಾಯ್ಕ ಸಹ ವಿಡಿಯೋದಲ್ಲಿದ್ದಾರೆ.‌

Former Minister Parameshwara Naik son Who Attacked To Farmers

ಕಲ್ಲು ಗಣಿಗಾರಿಕೆಯಿಂದ ತಮ್ಮ ಜಮೀನಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಂಬಂಧ ಪಟ್ಟವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಧೂಳಿನಿಂದ ಭಾರಿ ಸಮಸ್ಯೆಯಾಗಿದೆ ಎಂದು ಹೇಳಿದ್ದ ಕಾರಣ ಉಪವಿಭಾಗಾಧಿಕಾರಿಗಳನ್ನು ಪರಿಶೀಲನೆಗೆ ಕರೆದುಕೊಂಡು ಬಂದಿದ್ದರು.

 ದಾವಣಗೆರೆ; ಪೆಟ್ರೋಲ್ ಬಂಕ್ ಆಮಿಷ ಒಡ್ಡಿ ದೋಚಿದ್ದು ಲಕ್ಷಲಕ್ಷ ದಾವಣಗೆರೆ; ಪೆಟ್ರೋಲ್ ಬಂಕ್ ಆಮಿಷ ಒಡ್ಡಿ ದೋಚಿದ್ದು ಲಕ್ಷಲಕ್ಷ

ಈ ವೇಳೆ ಇದೇ ಮಾರ್ಗದಲ್ಲಿ ಪಿ.ಟಿ.‌ ಪರಮೇಶ್ವರ ನಾಯ್ಕ್ ಕಾರಿನಲ್ಲಿ ಹೋಗುವಾಗ ಧೂಳು ಬಂದ ಕಾರಣ ರೈತರು ಆಕ್ಷೇಪಿಸಿದರು. ಆಗ ಪರಮೇಶ್ವರ ನಾಯ್ಕ್ ರ ಬೆಂಬಲಿಗರು ಹಲ್ಲೆ ಮಾಡಲು ಮುಂದಾದರು. ಆಗ ಕಾರಿನಿಂದ ಇಳಿದು ಬಂದ ಪರಮೇಶ್ಚರ ನಾಯ್ಕ, ಆತನ ಪುತ್ರ ಸಹ ರೈತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದವರು ಆರೋಪ ಮಾಡಿದ್ದಾರೆ.

ಹರಪನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ರೈತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು, ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ಸೇರಿಸಿದ್ದು ಈಗ ಚೇತರಿಸಿಕೊಂಡಿದ್ದಾರೆ. ಈ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

English summary
Former minister P. T. Parameshwara Naiks son and his supporters assaulted farmers on the outskirts of Harapanahalli in Bellary district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X