ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸ್ ನಲ್ಲಿ ಬೆಂಕಿ: ಡ್ರೈವರ್ ಹುಷಾರು, ಪ್ರಯಾಣಿಕರು ಪಾರು

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಆಗಸ್ಟ್ 22: ಹರಿಹರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು. ಚಾಲಕನ ಸಮಯ ಸ್ಫೂರ್ತಿಯಿಂದ ದೊಡ್ಡ ಅನಾಹುತವೊಂದು ತಪ್ಪಿ, ಹತ್ತಾರು ಜನರ ಪ್ರಾಣ ಉಳಿಯಿತು.

ಚಾಮರಾಜನಗರ ಡಿಪೋಗೆ ಸೇರಿದ ಬಸ್ಸು ಮೈಸೂರಿನಿಂದ ದಾವಣಗೆರೆಗೆ ಹೊರಟಿತ್ತು. ಹರಿಹರವನ್ನು ಪ್ರವೇಶಿಸಿದ ಕೆಲ ಸಮಯದಲ್ಲೇ ಶಾರ್ಟ್ ಸರ್ಕೀಟ್ ನಿಂದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದು ಕೂಡಲೇ ಚಾಲಕನ ಗಮನಕ್ಕೆ ಬಂದಿದೆ. ಜಾಗೃತನಾದ ಆತ, ರಸ್ತೆ ಬದಿಯಲ್ಲೇ ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ. ಸ್ಥಳಕ್ಕೆ ಧಾವಿಸಿ ಬಂದ ಸ್ಥಳೀಯರು ಬೆಂಕಿ ನಂದಿಸಲು ಸಹಕಾರ ನೀಡಿದ್ದಾರೆ. ಬಳಿಕ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಪೂರ್ಣವಾಗಿ ನಂದಿಸಿದ್ದಾರೆ.[ಹುಬ್ಬಳ್ಳಿ ಬಸ್ ದುರಂತದಲ್ಲಿ ಕುಂದಾಪುರದ ಸುರೇಶ್ ಸಾವು]

Fire in KSRTC bus due to short circuit

ಬಸ್ ನಲ್ಲಿ ಐವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಬೆಂಕಿ ಅವಘಡದಲ್ಲಿ ಬಸ್ ನ ಕೆಲ ಭಾಗಗಳಿಗೆ ಹಾನಿಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಕೆಎಸ್ ಆರ್ ಟಿಸಿ ಡಿಪೋ ವ್ಯವಸ್ಥಾಪಕ, ಪಿಎಸ್ ಐಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

English summary
Fire in KSRTC bus due to short circuit in Harihara taluk national highway, Davanagere district. 50 plus passangers were travelling in bus. Chamarajanagar depo bus which was travelling from Mysuru to Davanagere. Passangers safed by driver due to his precaution measures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X