ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹರಿಹರದಲ್ಲಿ ಪ್ರವಾಹ ಭೀತಿ; ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಆಗಸ್ಟ್‌ 07: ಅಧಿಕ ಮಳೆಯಿಂದಾಗಿ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಹೆಚ್ಚಿದ್ದು, ಜಲಾಶಯದಿಂದ ನೀರನ್ನು ಹೊರಬಿಡಲಾಗುತ್ತಿದೆ. ಜನರು ಜಾಗರೂಕರಾಗಿರಬೇಕೆಂದು ಹರಿಹರ ಗ್ರಾಮಾಂತರ ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ ಎಚ್ಚರಿಕೆ ನೀಡಿದ್ದಾರೆ.

Recommended Video

Karnataka Rain : ನದಿ ಮದ್ಯೆ ಸಿಲುಕಿದ್ದ ಕೋತಿಗಳನ್ನು ರಕ್ಷಿಸಿದ ರೋಚಕ ದೃಶ್ಯ | Oneindia Kannada

ಅಪಾಯ ಮಟ್ಟವಿರುವ ನದಿ ಪಾತ್ರಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಹೆಚ್ಚಳವಾಗುತ್ತದೆ. ಇದರಿಂದ ನದಿಗೆ ನೀರು ಹರಿಸಲಾಗುತ್ತದೆ. ನದಿ ಪಾತ್ರದಲ್ಲಿರುವ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ನದಿಪಾತ್ರಕ್ಕೆ ಸಾರ್ವಜನಿಕರು, ದನಕರುಗಳನ್ನು ಬಿಡದಂತೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ಪೊಲೀಸ್ ಇಲಾಖೆ ಅಗ್ನಿಶಾಮಕದಳ ಮತ್ತು ಈಜುಗಾರರ ತಂಡ ಒಳಗೊಂಡಂತೆ ವಿಪತ್ತು ನಿರ್ವಹಣೆ ಕಾರ್ಯದಲ್ಲಿ ಬಳಸಬೇಕಾದ ರಕ್ಷಾ ಕವಚಗಳೊಂದಿಗೆ ಮುಂಜಾಗ್ರತಾ ಕ್ರಮವಾಗಿ ಸಿದ್ಧವಾಗಿದೆ ಎಂದು ತಿಳಿಸಿದರು.

Davanagere: Fear Of Flood In Harihar Direction For People To Move To Safe Places

 ದಾವಣಗೆರೆ; ತುಂಬಿ ಹರಿದ ತುಂಗಭದ್ರೆಯಿಂದ ರೈತರಲ್ಲಿ ಸಂತಸ ದಾವಣಗೆರೆ; ತುಂಬಿ ಹರಿದ ತುಂಗಭದ್ರೆಯಿಂದ ರೈತರಲ್ಲಿ ಸಂತಸ

ಪ್ರವಾಹ ಭೀತಿ ಹೆಚ್ಚಾಗುತ್ತಿದೆ: ನದಿಗಳ ಹರಿವು ಹೆಚ್ಚಾದ ಕಾರಣ ವಿಪತ್ತು ಸನ್ನಿವೇಶ ಎದುರಿಸಲು ಸದಾ ಸಿದ್ದರಾಗಿರಬೇಕಾಗಿದೆ. ಗಂಗಾನಗರ, ಕೈಲಾಸನಗರ, ಪಾಮೇನಹಳ್ಳಿ, ಸಾರಥಿ ಮತ್ತು ಚಿಕ್ಕಬಿದರಿ ಮಧ್ಯೆ ಇರುವ ಸಂಪರ್ಕ ಸೇತುವೆಯ ಮೇಲ್ಬಾಗದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ತುಂಗಾ ಭದ್ರ ನದಿಯ ಪಾತ್ರದಲ್ಲಿರುವ ಪ್ರತಿಯೊಬ್ಬ ಸಾರ್ವಜನಿಕರು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕು. ಯಾವುದೇ ಅವಘಡಗಳು ಸಂಭವಿಸುವ ಮುನ್ನವೇ ತಾಲ್ಲೂಕು ಆಡಳಿತ ಪೊಲೀಸ್ ಇಲಾಖೆಗೆ ಕೂಡಲೇ ಮಾಹಿತಿ ನೀಡಬೇಕೆಂದು ಹೇಳಿದರು.

English summary
Harihar Rural DYSP warned people to move to safe places because of fear of flood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X