ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ ಬೇಲಿಮಲ್ಲೂರಿನಲ್ಲಿ ನಿತ್ಯವೂ ಕುರಿಗಳ ಸಾವು! ಯಾಕೆ?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜು 6: ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಅದರಲ್ಲಿಯೂ ಹೊನ್ನಾಳಿ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಆದರೆ, ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನಿತ್ಯವೂ ಕುರಿಗಳು ಸಾವನ್ನಪ್ಪಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನಿತ್ಯವೂ ಕುರಿಗಳು ಸಾವನ್ನಪ್ಪಿದ್ದು ಆತಂಕದ ವಾತಾವರಣ ಹಿನ್ನೆಲೆ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆದ ಶಾಸಕ ಎಂ.‌ಪಿ. ರೇಣುಕಾಚಾರ್ಯ ಭೇಟಿ‌ ನೀಡಿ ಪರಿಶೀಲಿಸಿದರು.

ಒಟ್ಟು 30ಕ್ಕೂ ಹೆಚ್ಚು ಕುರಿಗಳು ಸಾವು

ಈ ಗ್ರಾಮದಲ್ಲಿ ಕುರಿಗಳ ಅಸಹಜ ಸಾವು ಕುರಿ ಸಾಕಾಣಿಕೆದಾರರು ಹಾಗೂ ರೈತರಲ್ಲಿ ಭಯ ಹುಟ್ಟಿಸಿದೆ. ಇದುವರೆಗೆ ಒಟ್ಟು 30ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ ಎಂದು ಅಂದಾಜಿಸಲಾಗಿದೆ. ಕಳೆದ 15 ದಿನಗಳಿಂದ ಭರ್ಮಪ್ಪ ಎಂಬುವವರಿಗೆ ಸೇರಿದ 30 ಕುರಿಗಳು ಸಾವನ್ನಪ್ಪಿದ್ದು, ಯಾಕೆ ಈ ರೀತಿಯಾಗುತ್ತಿದೆ ಎಂಬುದು ಗೊತ್ತಾಗದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ತುಕ್ಕು ಹಿಡಿಯುತ್ತಿರುವ ದಾವಣಗೆರೆ ಮಹಾನಗರ ಪಾಲಿಕೆ ವಾಹನಗಳು: ಕೈ ಸದಸ್ಯರ ಆಕ್ರೋಶತುಕ್ಕು ಹಿಡಿಯುತ್ತಿರುವ ದಾವಣಗೆರೆ ಮಹಾನಗರ ಪಾಲಿಕೆ ವಾಹನಗಳು: ಕೈ ಸದಸ್ಯರ ಆಕ್ರೋಶ

ಈ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆದ ಶಾಸಕ ಎಂ.‌ಪಿ. ರೇಣುಕಾಚಾರ್ಯ ಭೇಟಿ‌ ನೀಡಿ ಪರಿಶೀಲಿಸಿದರು. ನಿತ್ಯವೂ ಎರಡರಿಂದ ಮೂರು ಕುರಿಗಳು ಸಾಯುತ್ತಿವೆ. ಕಂಪೆನಿಯೊಂದರ ಔಷಧಿಯನ್ನು ಕುರಿಗಳಿಗೆ ನೀಡಲಾಗಿದ್ದು, ಇದರಿಂದ ಇವುಗಳ ಆರೋಗ್ಯದಲ್ಲಿ ಏರುಪೇರಾಗಿದೆಯೋ ಇಲ್ಲವೋ ಬೇರೆಯದ್ದೋ ಕಾರಣವೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.

ರೇಣುಕಾಚಾರ್ಯ ಭೇಟಿ -ಪರಿಶೀಲನೆ

ರೇಣುಕಾಚಾರ್ಯ ಭೇಟಿ -ಪರಿಶೀಲನೆ

ಪಶು ವೈದ್ಯರು ಚೀಟಿ ಬರೆದುಕೊಟ್ಟಿದ್ದರು. ಅದರಂತೆ ಔಷಧಿ ಕೊಟ್ಟಿದ್ದೇವೆ. ವೈದ್ಯ ರಂಗನಾಥ್ ಎಂಬುವವರು ಹೊರಗಡೆ ಚೀಟಿ ಬರೆದು ಕೊಡುತ್ತಾರೆ. ಸರಿಯಾಗಿ ಕೆಲಸ ಮಾಡಲ್ಲ. ಕಚೇರಿಗೆ ಹೋದರೆ ಇರುವುದಿಲ್ಲ ಎಂದು ಸ್ಥಳೀಯರು ದೂರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ ಈ ಬಗ್ಗೆ ಮಾತನಾಡುತ್ತೇನೆ. ವೈದ್ಯರು ಕರ್ತವ್ಯ ಸರಿಯಾಗಿ ನಿರ್ವಹಿಸದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು‌. ಯಾವುದೇ ಕಾರಣಕ್ಕೂ ಭಯಭೀತರಾಗಬೇಡಿ. ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ತಮಿಳುನಾಡಿನಿಂದ ಅಕ್ರಮವಾಗಿ ತಂದ 102 ಕೆಜಿ ಬೆಳ್ಳಿ ಗೆಜ್ಜೆ ವಶಪಡಿಸಿಕೊಂಡ ದಾವಣಗೆರೆ ಪೊಲೀಸ್ತಮಿಳುನಾಡಿನಿಂದ ಅಕ್ರಮವಾಗಿ ತಂದ 102 ಕೆಜಿ ಬೆಳ್ಳಿ ಗೆಜ್ಜೆ ವಶಪಡಿಸಿಕೊಂಡ ದಾವಣಗೆರೆ ಪೊಲೀಸ್

ಉತ್ತಮ ಮಳೆ, ಬಿತ್ತನೆ ಚುರುಕು

ಉತ್ತಮ ಮಳೆ, ಬಿತ್ತನೆ ಚುರುಕು

ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ನಿನ್ನೆಯೂ ಮಳೆ ಸುರಿಯಿತು. ಆದರೆ ಇಂದು ಬೆಳಿಗ್ಗೆ ಶುರುವಾದ ಮಳೆಗೆ ಜನಜೀವನ ಅಸ್ತವ್ಯಸ್ತ ಗೊಂಡಿತ್ತು. ಉತ್ತಮ ಮಳೆಯಾದ ಕಾರಣ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ರೈತರು ಬಿತ್ತನೆ ಕಾರ್ಯದತ್ತ ಚಿತ್ತ ಹರಿಸಿದ್ದಾರೆ. ಮೆಕ್ಕೆಜೋಳ, ರಾಗಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲು ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಚನ್ನಗಿರಿ, ಹೊನ್ನಾಳಿ, ಜಗಳೂರು, ಮಾಯಕೊಂಡ ಸೇರಿದಂತೆ ಹಲವೆಡೆ ವರ್ಷಧಾರೆ ಆರ್ಭಟ ಜೋರಾಗಿತ್ತು. ಕೆಲವೆಡೆ ಹಾನಿ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಜಿಲ್ಲೆಯಲ್ಲಿ 8.65 ಲಕ್ಷ ರೂ ಅಂದಾಜು ನಷ್ಟ

ಜಿಲ್ಲೆಯಲ್ಲಿ 8.65 ಲಕ್ಷ ರೂ ಅಂದಾಜು ನಷ್ಟ

ಜಿಲ್ಲೆಯಲ್ಲಿ 8.65 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ. ಚನ್ನಗಿರಿಯಲ್ಲಿ ವಾಡಿಕೆ ಮಳೆ 4.6 ಮಿ.ಮೀ ಹಾಗೂ ವಾಸ್ತವ ಮಳೆ 4.5 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ ವಾಡಿಕೆ ಮಳೆ 1.3 ಮಿ.ಮೀ ಹಾಗೂ ವಾಸ್ತವ ಮಳೆ 3.2 ಮಿ.ಮೀ,, ಹರಿಹರದಲ್ಲಿ ವಾಡಿಕೆ ಮಳೆ 1.8 ಮಿ.ಮೀ ಹಾಗೂ ವಾಸ್ತವ ಮಳೆ 9.4 ಮಿ.ಮೀ, ಹೊನ್ನಾಳಿ ವಾಡಿಕೆ ಮಳೆ 2.1 ಮಿ.ಮೀ ಹಾಗೂ ವಾಸ್ತವ ಮಳೆ 4.4 ಮಿ.ಮೀ, ಜಗಳೂರು ವಾಡಿಕೆ ಮಳೆ 1.3 ಮಿ.ಮೀ ಹಾಗೂ ವಾಸ್ತವ ಮಳೆ 1.8 ಮಿ.ಮೀ, ನ್ಯಾಮತಿಯಲ್ಲಿ ವಾಡಿಕೆ ಮಳೆ 5.2 ಮಿ.ಮೀ ಹಾಗೂ ವಾಸ್ತವ ಮಳೆ 4.3 ಮಿ.ಮೀ, ಮಳೆಯಾಗಿದೆ.

ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ: ಜಿಲ್ಲಾಧಿಕಾರಿ

ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ: ಜಿಲ್ಲಾಧಿಕಾರಿ

ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾಮನೆ ತೀವ್ರ ಹಾನಿಯಾಗಿದ್ದು ಹಾಗೂ 1 ಕಚ್ಚಾಮನೆ ಭಾಗಶ: ಹಾನಿಯಾಗಿ ಒಟ್ಟು 1ಲಕ್ಷದ 30 ಸಾವಿರ ರೂಪಾಯಿ ನಷ್ಟವಾಗಿದೆ. ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 2 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು, ರೂ. 1 ಲಕ್ಷ, 1 ದನದ ಕೊಟ್ಟಿಗೆ ಹಾನಿಯಾಗಿದ್ದು, 25 ಸಾವಿರ ಸೇರಿದಂತೆ ಒಟ್ಟು ರೂ.1.25 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.

ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 2 ಪಕ್ಕಾಮನೆ ಹಾನಿಯಾಗಿದ್ದು, ಒಟ್ಟು ರೂ. 3.10 ಲಕ್ಷ ಮತ್ತು 2 ಕಚ್ಚಾಮನೆ ರೂ.3 ಲಕ್ಷ ಹಾನಿ ಸೇರಿ ಒಟ್ಟು ರೂ. 6.10 ಲಕ್ಷ ರೂಪಾಯಿ ಅಂದಾಜು ನಷ್ಟ ಸಂಭವಿಸಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

English summary
Farmers Worried over Mass death of Sheep in Belimalluru Village of honnali taluk, MLA Renukacharya visited and inspected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X