ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಸಿ ಮಡಿ ರಕ್ಷಣೆಗೆ ಬಾಟಲ್ ಸೌಂಡ್: ಹತ್ತಿರ ಸುಳಿಯದ ಪಕ್ಷಿಗಳು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜುಲೈ 23: ಭತ್ತ ಬೆಳೆಯುವ ರೈತರು ಇನ್ನು 2 ವಾರದೊಳಗೆ ನಾಟಿ ಮಾಡಲು ಸಿದ್ಧವಾಗುತ್ತಿದ್ದಾರೆ. ಈ ಮಧ್ಯೆ ಖಾಲಿ ಇರುವ ಹೊಲ, ಗದ್ದೆಗಳಲ್ಲಿ ಏನೂ ಸಿಗದ ಕಾರಣ ಸಸಿಮಡಿಯಲ್ಲಿನ ಬೀಜ, ಮೊಳಕೆಯ ಕುಡಿಯನ್ನು ತಿನ್ನಲು ಬರುವ ಪಕ್ಷಿಗಳಿಂದ ರಕ್ಷಣೆಗಾಗಿ ರೈತರು ಲೋಕಲ್ ತಂತ್ರಜ್ಞಾನ ಮಾಡಿಕೊಂಡಿದ್ದಾರೆ.

Recommended Video

ಹೊಸ Oneplus ವಿಶೇಷತೆಗಳು Oneplus Nord , ಕೈಗೆಟಕುವ ಬೆಲೆಯಲ್ಲಿ ಬೆಸ್ಟ್ ಫೋನ್ | Oneindia Kannada

ಗುಜರಿ ಅಂಗಡಿಗೆ ಹೋಗಬೇಕಾಗಿದ್ದ ತ್ಯಾಜ್ಯ ವಸ್ತುಗಳಾದ ಬಿಯರ್ ಬಾಟಲ್, ಸುಮಾರು ೫೦ ಗ್ರಾಂ ತೂಕದ ಕಬ್ಬಿಣದ ಬೋಲ್ಟ್, ಉಪಯೋಗಿಸಿ ಬಿಟ್ಟ ಬೈಂಡಿಗ್ ವೈರ್ ಹಾಗೂ ಬಳಕೆಯಾಗಿ ವಿಸರ್ಜಿಸಲ್ಪಟ್ಟ ಅಡಕೆ ತಟ್ಟೆಗಳನ್ನು ಉಪಯೋಗಿಸಿಕೊಂಡು ಗೂಟಕ್ಕೆ ತೂಗುಹಾಕಿದ್ದು, ಗಾಳಿಗೆ ತೂಗಾಡಿ ಬಡಿದಾಡಿಕೊಂಡಾಗ ಉಂಟಾಗುವ ಶಬ್ಧಕ್ಕೆ ಹೆದರಿ ಪಕ್ಷಿಗಳು ಸಸಿಮಡಿಗೆ ಬರದಂತೆ ಮಾಡಿದ್ದಾರೆ.

ದಾವಣಗೆರೆಯಲ್ಲಿ ಕಾಲುವೆಗೆ ಬಿದ್ದು ನರಳಾಡಿದ ಕಾಡೆಮ್ಮೆದಾವಣಗೆರೆಯಲ್ಲಿ ಕಾಲುವೆಗೆ ಬಿದ್ದು ನರಳಾಡಿದ ಕಾಡೆಮ್ಮೆ

ಸಂಪೂರ್ಣ ಖಾಲಿ ಇರುವ ಗದ್ದೆಗಳಲ್ಲಿ ಹಕ್ಕಿ ಪಕ್ಷಿಗಳಿಗೆ ತಿನ್ನಲು ಸುಲಭವಾಗಿ ಸಿಗುವುದು ಸಸಿಗಾಗಿ ಚಲ್ಲಿರುವ ಬೀಜಭತ್ತ ಹಾಗೂ ಮೊಳಕೆಯೊಡೆದಿರುವ ಕುಡಿ. ಇವುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ರೈತರು ಇಂತಹ ತ್ಯಾಜ್ಯವಸ್ತುಗಳಿಂದ ಸಿಂಪಲ್ ತಂತ್ರಜ್ಞಾನ ಮಾಡಿ ಸಸಿಮಡಿ ರಕ್ಷಿಸಿಕೊಳ್ಳುತ್ತಿದ್ದಾರೆ.

Farmers Protecting Crops From Birds Using Bottle Sound

ಗಿಣಿ, ಗೊರವಂಕ, ಬಿಳಿ ಕೊಕ್ಕರೆ(ಬೆಳ್ಳಕ್ಕಿ)ಯಂತಹ ಪಕ್ಷಿಗಳ ಹಾವಳಿ ಸಸಿಮಡಿಗೆ ಹೆಚ್ಚಾಗಿರುತ್ತದೆ. ಇವುಗಳನ್ನು ಕಾದು ಕುಳಿತು ಓಡಿಸುವುದು ಸುಲಭದ ಕೆಲಸವಲ್ಲ. ಆದ್ದರಿಂದ ಈ ರೀತಿ ಬಾಟಲ್ ತೂಗುಹಾಕಿ ಕಬ್ಬಿಣದ ಅಥವಾ ನಟ್ ಗಾಳಿಗೆ ತೂಗಾಡಿ ಬಾಟಲ್ ಗೆ ಬಡಿಯುವುದರಿಂದ ಜೋರಾದ ಶಬ್ಧ ಉಂಟಾಗುತ್ತದೆ. ಬೋಲ್ಟ್ ಸುಲಭವಾಗಿ ತೂಗಾಡುವಷ್ಟು ಲೋಲಕದ ಸಾಂದ್ರತೆಯನ್ನು ಅಡಕೆ ತಟ್ಟೆ ಹೆಚ್ಚಿಸುವುದರಿಂದ ಠಣ್, ಠಣ್ ಎನ್ನುವ ಶಬ್ಧ ಸುಮಾರು ಅರ್ಧ ಕಿ.ಮೀ ದೂರಕ್ಕೂ ಕೇಳಿಸುತ್ತದೆ.

ವಿವಾದಕ್ಕೂ ಮುನ್ನ ದಾವಣಗೆರೆ ನಗರದಲ್ಲಿ ವಾಸ್ತವ್ಯ ಹೂಡಿದ್ದ 'ಡ್ರೋನ್ ಪ್ರತಾಪ್'ವಿವಾದಕ್ಕೂ ಮುನ್ನ ದಾವಣಗೆರೆ ನಗರದಲ್ಲಿ ವಾಸ್ತವ್ಯ ಹೂಡಿದ್ದ 'ಡ್ರೋನ್ ಪ್ರತಾಪ್'

ಬೀಜ ಚೆಲ್ಲಿ ಸುಮಾರು 20 ದಿನ ಸಸಿಗಾಗಿ ಕಾಯಬೇಕಾದ ಅವಧಿಯಲ್ಲಿ ಪಕ್ಷಿಗಳು ಸಿಗುವ ಬೀಜಗಳನ್ನು ಹಾಗೂ ಮೊಳಕೆ ಕುಡಿಯನ್ನು ತಿನ್ನುವ ಸಂಭವ ಹೆಚ್ಚಿರುತ್ತದೆ. ಮಳೆಗಾಲವಾದ್ದರಿಂದ ಹೊಲ-ಗದ್ದೆಗಳಲ್ಲಿ ಕಾಳುಗಳು ಸಿಗುವುದು ಅಪರೂಪವಾದ್ದರಿಂದ ಹಾಗೂ ತೋಟಗಳಲ್ಲಿನ ಗಿಡಗಳಲ್ಲಿಯೂ ತಿನ್ನಲು ಹಣ್ಣು, ಬೀಜ ಸಿಗದ ಸಮಯವಾಗಿರುವುದರಿಂದ ಸದ್ಯ ಪಕ್ಷಿಗಳಿಗೆ ತಿನ್ನಲು ಸಸಿಮಡಿಯಲ್ಲಿನ ಕಾಳು ಮತ್ತು ಮೊಳಕೆ ಸುಲಭವಾಗಿ ಸಿಗುತ್ತದೆ.

Farmers Protecting Crops From Birds Using Bottle Sound

ಬಾಟಲ್ ಸೌಂಡ್ ತಂತ್ರಜ್ಞಾನ ಮಾಡಿರುವ ಕತ್ತಲಗೆರೆ ರೈತ ಕುಂಬಾರ ರಾಮಣ್ಣ ಮಾತನಾಡಿ, ಗಿಣಿ, ಗೊರವಂಕದ ಕಾಟ ಹೆಚ್ಚಾಗಿರುತ್ತದೆ. ಮಳೆಗಾಲವಾದ್ದರಿಂದ ಹೆಚ್ಚಾದ ಕೆಸರು ಇರುವುದರಿಂದ ಇಂತಹ ಸಣ್ಣ ಪಕ್ಷಿಗಳು ಸಸಿಮಡಿಗೆ ಬರುತ್ತವೆ. ಕಾದುಕುಳಿತು ಓಡಿಸುವುದು ಕಷ್ಟ ಹಾಗಾಗಿ ಈ ರೀತಿ ತಂತ್ರಜ್ಞಾನ ಮಾಡಿದ್ದೇವೆ, ಶಬ್ಧಕ್ಕೆ ಪಕ್ಷಿಗಳು ಹತ್ತಿರ ಬರುವುದಿಲ್ಲ ಎಂದು ವಿವರಿಸಿದರು.

English summary
Farmers have developed local technology to protect seed From Birds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X