ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೃಷಿ ಕಾಯ್ದೆ ಜಾರಿ ಒಕ್ಕೂಟ ವ್ಯವಸ್ಥೆಗೆ ಮಾರಕ; ನಾಗಮೋಹನ್ ದಾಸ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಫೆಬ್ರವರಿ 22: " ಕೃಷಿ ಕಾಯ್ದೆ ಎನ್ನುವಂತಹದ್ದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ರಾಜ್ಯ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸಿ ಕೇಂದ್ರ ಸರ್ಕಾರ ಜಾರಿಗೆ ತರುವುದು ನಮ್ಮ‌ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕ" ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.

ದಾವಣಗೆರೆ ನಗರದಲ್ಲಿ ಮಾತನಾಡಿದ ಅವರು, "ರಾಜ್ಯ ಸಭೆಯಲ್ಲಿ ಇವತ್ತಿನ ಸರ್ಕಾರಕ್ಕೆ ಬಹುಮತ ಇರಲಿಲ್ಲ, ಧ್ವನಿ ಮತದ ಗದ್ದಲದಲ್ಲಿ ಮಸೂದೆ ಅನುಮೋದನೆ ಮಾಡುತ್ತೇವೆ ಎಂದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿರೋದು, ಈ ಕೃಷಿ ಕಾಯ್ದೆ ವಿಚಾರವಾಗಿ ಸಂಸತ್, ರಾಜ್ಯ ಸಭೆಯಲ್ಲಿ ಪರಿಪೂರ್ಣವಾಗಿ ಚರ್ಚೆ ನಡೆಯಲಿಲ್ಲ" ಎಂದರು.

ರೈತ ಚಳುವಳಿಯ ಕಾವು ಮತ್ತು ಪಕ್ಷ ರಾಜಕಾರಣರೈತ ಚಳುವಳಿಯ ಕಾವು ಮತ್ತು ಪಕ್ಷ ರಾಜಕಾರಣ

"ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ,ಕಾಯ್ದೆಗಳ ಬಗ್ಗೆ ತಜ್ಞ ರೊಂದಿಗೆ ಜೊತೆ ಚರ್ಚೆ ಮಾಡಿಲ್ಲ, ಇದೊಂದು ಸಂವಿಧಾನದ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಎಂದು ಕಾನೂನು ದೃಷ್ಟಿಯಲ್ಲಿ ನೋಡುತ್ತೀನಿ. ಇದು ಕೃಷಿಕರನ್ನು ಕೂಲಿಗಾರರನ್ನಾಗಿ ಮಾಡುವ ಕಾಯ್ದೆ, ಕೂಲಿಗಾರರನ್ನು ಗುಲಾಮರನ್ನು ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಈ ಕಾಯ್ದೆಗಳನ್ನು ಆರ್ಥಿಕವಾಗಿ ಸಾಮಾಜಿಕವಾಗಿ ನೋಡಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಆಸೆ ಇಟ್ಟುಕೊಂಡಿದ್ದಾರೆ, ಆದರೆ ಅದನ್ನು ಧಮನ ಮಾಡುವ ಕೆಲಸ ಮಾಡುತ್ತಿದ್ದಾರೆ" ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರೈತ ಹೋರಾಟಕ್ಕೆ ಕೊರೊನಾ ಕಾಟ: ಮಹಾರಾಷ್ಟ್ರದಲ್ಲಿ ಕಿಸಾನ್ ಮಹಾಪಂಚಾಯತ್ ಗೆ ತಡೆ!? ರೈತ ಹೋರಾಟಕ್ಕೆ ಕೊರೊನಾ ಕಾಟ: ಮಹಾರಾಷ್ಟ್ರದಲ್ಲಿ ಕಿಸಾನ್ ಮಹಾಪಂಚಾಯತ್ ಗೆ ತಡೆ!?

Farm Law Affects Indias Federal Structure Says Justice HN Nagamohan Das

ಮೀಸಲಾತಿ; "ಎಲ್ಲಾ ಜಾತಿಯ ರೈತರು ಬಿಕ್ಕಟ್ಟಿನಲ್ಲಿ ಇದ್ದು, ಮೀಸಲಾತಿ ಹೋರಾಟ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ನಡೆಯುತ್ತಿವೆ. ಮೀಸಲಾತಿ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಆರ್ಥಿಕವಾಗಿ ದುರ್ಬಲವಾಗಿದ್ದಾರೆ. ಮೀಸಲಾತಿ ದಾರಿ ತೋರಿಸಿದಾಗ ಅದರ ಹಿಂದೆ ಹೋಗುತ್ತಿದ್ದಾರೆ, ರೈತರ ಸಮಸ್ಯೆಗೆ ಮೀಸಲಾತಿಯೇ ಪರಿಹಾರವಲ್ಲ, ‌ಮೀಸಲಾತಿ‌ ನೀತಿಯನ್ನು ಪುನಾಃರಚನೆ ‌ಮಾಡಬೇಕಾಗುತ್ತದೆ" ಎಂದರು.

ರೈತ ನಾಯಕರು ಮತ್ತು ಸಾಮೂಹಿಕ ನಾಯಕತ್ವದ ಅನಿವಾರ್ಯತೆರೈತ ನಾಯಕರು ಮತ್ತು ಸಾಮೂಹಿಕ ನಾಯಕತ್ವದ ಅನಿವಾರ್ಯತೆ

"ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸದನ ಸಮಿತಿ ನೇಮಕ ಅಗತ್ಯವಿಲ್ಲ. ಸದಸನ ಸಮಿತಿ ಅಗತ್ಯ ಬಾಬಾಬುಡ ನಗಿರಿಯಂತಹ ವಿಚಾರದಲ್ಲಿ ಬೇಕಾಗುತ್ತದೆ. ಮೀಸಲಾತಿ ಹೆಚ್ಚಳ ಸರ್ಕಾರ ಒಂದು ಆದೇಶದ ಮೂಲಕ ಜಾರಿ ಮಾಡಬಹುದು. ಎಸ್ಟಿಗೆ ಶೇ 3ರಿಂದ 7ರಷ್ಟು ಮೀಸಲಾತಿ ಹೆಚ್ಚಿಸಬಹುದು. ಪರಿಶಿಷ್ಟ ಜಾತಿಗೆ 15 ರಿಂದ 17 ಮಾಡಬಹುದು. ಅದಕ್ಕೆ ಎಲ್ಲ ಅಧ್ಯಯನ ‌ಮಾಡಿ ಕೊಡಲಾಗಿದೆ" ಎಂದು ಸ್ಪಷ್ಟ ಪಡಿಸಿದರು.

Recommended Video

ಶಾಸಕ ಯತ್ನಾಳ್ ವಿರುದ್ಧ ಸಚಿವ ಬಿ.ಸಿ ಪಾಟೀಲ್ ಕಿಡಿ | Oneindia Kannada

English summary
Three farm law will affect the India's federal structure said Karnataka high court retired judge Justice H. N. Nagamohan Das.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X