ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯ ದುಗ್ಗಮ್ಮನ ಹೆಸರಲ್ಲಿ ನಕಲಿ ಬಿಲ್ ದಂಧೆಕೋರರ ಕಾಟ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

Recommended Video

ಶೋಕಿ ಮಾಡೋಕೆ ನಿಮ್ಮಪ್ಪನ ಮನೆ ಜಾಗಕ್ಕೆ ಹೋಗಿ | Bellary | R Ashok | Sharath | Rahul | Ravikanth | Sachin

ದಾವಣಗೆರೆ, ಫೆಬ್ರವರಿ 13: ದಾವಣಗೆರೆ ನಗರ ದೇವತೆ ದುಗ್ಗಮ್ಮ ದೇವಿಯ ಜಾತ್ರೆ ಸಮೀಪಿಸುತ್ತಿದ್ದಂತೆ ದೇವಿಯ ಹೆಸರಲ್ಲಿ ನಕಲಿ ಬಿಲ್ ಗಳನ್ನು ತಯಾರಿಸಿ ಭಕ್ತರಿಂದ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿರುವ ಗ್ಯಾಂಗ್ ಒಂದು ದಾವಣಗೆರೆಯಲ್ಲಿ ಸೃಷ್ಠಿಯಾಗಿದೆ.

ಫೆಬ್ರವರಿ 29 ರಿಂದ ಮಾರ್ಚ್ 8 ರ ವರೆಗೆ ನಗರ ದೇವತೆ ದುಗ್ಗಮ್ಮನ ಜಾತ್ರೆ ನಡೆಯಲಿದ್ದು, ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಆದರೆ ದೇವಸ್ಥಾನದ ಟ್ರಸ್ಟ್ ಹೆಸರಿನಲ್ಲಿ ಭಕ್ತರಿಂದ ಹಣ ವಸೂಲಿ ಮಾಡುತ್ತಿರುವ ಗ್ಯಾಂಗ್ ಒಂದು ಹುಟ್ಟಿಕೊಂಡಿದ್ದು ಇದರಿಂದ ದೇವಸ್ಥಾನ ಟ್ರಸ್ಟಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ದಾವಣಗೆರೆ ಜಿಲ್ಲೆಯಲ್ಲಿ ಒಂದೇ ಗ್ರಾ.ಪಂಗೆ ಇಬ್ಬರು ಪಿಡಿಓದಾವಣಗೆರೆ ಜಿಲ್ಲೆಯಲ್ಲಿ ಒಂದೇ ಗ್ರಾ.ಪಂಗೆ ಇಬ್ಬರು ಪಿಡಿಓ

ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನದ ಟ್ರಸ್ಟ್ ಹೆಸರಿನಲ್ಲಿ ಲೆಟರ್ ಹೆಡ್ ಮಾಡಿಸಿ, ಜಾತ್ರೆ ಪ್ರಯುಕ್ತ ಕುರಿ ಕಾಳಗ, ಕುಸ್ತಿ, ಹಾಗೂ ಅನ್ನಸಂತರ್ಪಣೆ ಇದೆ ಎಂದು ಲೆಟರ್ ನಲ್ಲಿ ‌ಮುದ್ರಿಸಿ ಭಕ್ತರಿಂದ ಸಾವಿರಾರು ರೂಪಾಯಿ ಹಣ ವಸೂಲಿಗೆ ನಿಂತಿದ್ದಾರೆ.

Fake Bill In The Name Of God In Davanagere

ದೇಣಿಗೆ ಎತ್ತುವಳಿದಾರರು ದೇವಸ್ಥಾನ ಹೆಸರಲ್ಲಿ ಮಾಡಿಸಿದ ನಕಲಿ ಬಿಲ್ ನಲ್ಲಿ ದಾವಣಗೆರೆಯ ಮಾಜಿ ಶಾಸಕ ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ನವರ ಭಾವಚಿತ್ರಗಳನ್ನು ಮುದ್ರಿಸಲಾಗಿದೆ.

Fake Bill In The Name Of God In Davanagere

ಅಸಲಿ ಬಿಲ್ ಗಳ ತಲೆಗೆ ಹೊಡೆದಂತೆ ನಕಲಿ ಬಿಲ್ ಗಳನ್ನು ಸೃಷ್ಠಿಸಿದ್ದಾರೆ. ಇದರಿಂದ ರೋಸಿ ಹೋಗಿರುವ ದೇವಸ್ಥಾನದ ಕಮಿಟಿ, ಪೊಲೀಸ್ ಠಾಣೆಗೂ ದೂರು ನೀಡಲು ಮುಂದಾಗಿದ್ದಾರೆ. ಅಲ್ಲದೇ ಭಕ್ತರಿಗೆ ಮನವಿ ಮಾಡಿಕೊಂಡಿದ್ದು, ದೇವಸ್ಥಾನದ ಹೆಸರಿನಲ್ಲಿ ಯಾರಾದರೂ ವರ್ತಕರ ಹಾಗೂ ಸಾರ್ವಜನಿಕರ ಹತ್ತಿರ ಏನಾದರೂ ಚಂದಾ ವಸೂಲಿ‌ ಮಾಡಲು ಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ದೇವಸ್ಥಾನದ ಟ್ರಸ್ಟ್ ನ ಧರ್ಮದರ್ಶಿಗಳು ಭಕ್ತರಲ್ಲಿ ‌ಮನವಿ ಮಾಡಿಕೊಂಡಿದ್ದಾರೆ.

English summary
A gang making thousands of rupees in the name of the goddess In Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X