ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಯಾಮರಣ ಹೋರಾಟಗಾರ್ತಿ ಕರಿಬಸಮ್ಮರಿಂದ 3 ಲಕ್ಷ ರೂ. ದೇಣಿಗೆ

By ದಾವಣಗೆರೆ ಸುದ್ದಿ
|
Google Oneindia Kannada News

ದಾವಣಗೆರೆ, ಏಪ್ರಿಲ್ 03: ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಲು ನಗರದ ನಿವೃತ್ತ ಶಿಕ್ಷಕರಾದ, ದಯಾಮರಣ ಹೋರಾಟಗಾರ್ತಿ ಎಚ್.ಬಿ. ಕರಿಬಸಮ್ಮ ಅವರು ಧನ ಸಹಾಯ ಮಾಡಿದ್ದಾರೆ.

ಪ್ರಧಾನಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂ ಹಾಗೂ ಮುಖ್ಯಮಂತ್ರಿಗಳ ಪರಿಹರ ನಿಧಿಗೆ ಒಂದು ಲಕ್ಷ ರೂ ಮತ್ತು ಆರ್ ಎಸ್ ಎಸ್ ಸಂಚಾಲಿತ ಪರಿಹಾರ ನಿಧಿಗೆ ಒಂದು ಲಕ್ಷ ರೂ ಸೇರಿದಂತೆ, ಒಟ್ಟು ಮೂರು ಲಕ್ಷ ರೂ. ಗಳನ್ನು ಕರಿಬಸಮ್ಮ ನೀಡಿದ್ದಾರೆ.

ಕೊರೊನಾ ಹೋರಾಟಕ್ಕೆ ಪಾಕೆಟ್ ಮನಿ ನೀಡಿದ ಮಂಗಳೂರಿನ ಪುಟಾಣಿಕೊರೊನಾ ಹೋರಾಟಕ್ಕೆ ಪಾಕೆಟ್ ಮನಿ ನೀಡಿದ ಮಂಗಳೂರಿನ ಪುಟಾಣಿ

ಬ್ಯಾಂಕಿನಲ್ಲಿ ತಾವು ಇಟ್ಟಿದ್ದ ಠೇವಣಿ ಹಣವನ್ನು ಮುಂಗಡವಾಗಿ ಬಿಡಿಸಿಕೊಂಡ ಕರಿಬಸಮ್ಮ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಆರ್ ಎಸ್ ಎಸ್ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. ತನಗೆ ಸರ್ಕಾರದಿಂದ ಬಂದ ನಿವೃತ್ತಿ ವೇತನದಲ್ಲಿ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಸಮರ್ಪಿಸಿದ್ದೇನೆ ಎಂದು ಕರಿಬಸಮ್ಮ ತಿಳಿಸಿದ್ದಾರೆ.

Euthanasia Activist Karibasamma Gave 3 Lakh For Corona Relief Fund

 ಸುತ್ತೂರು ಮಠದಿಂದ ಸಿಎಂ ಪರಿಹಾರ ನಿಧಿಗೆ 50ಲಕ್ಷ ರೂ. ದೇಣಿಗೆ ಸುತ್ತೂರು ಮಠದಿಂದ ಸಿಎಂ ಪರಿಹಾರ ನಿಧಿಗೆ 50ಲಕ್ಷ ರೂ. ದೇಣಿಗೆ

ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕರಿಬಸಮ್ಮ ಅವರು ಈ ಹಿಂದೆ ದಯಾಮರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರು. ಅನಾರೋಗ್ಯದಿಂದ ಏಕಾಂಗಿಯಾಗಿ ಬದುಕುವ ವೃದ್ಧರಿಗೆ ದಯಾಮರಣ ಕಾಯ್ದೆ ಜಾರಿಗೆ ತರಬೇಕೆಂದು ಹೋರಾಟ ಮಾಡಿದ್ದರು. ಜೆಜೆಎಂ ಮೆಡಿಕಲ್ ಕಾಲೇಜ್ ಗೆ ತಮ್ಮ ದೇಹದಾನ ಮಾಡಿ ಗಮನ ಸೆಳೆದಿದ್ದರು. ಇದೀಗ ಕೊರೊನಾ ಹಿನ್ನೆಲೆ ಸರ್ಕಾರಕ್ಕೆ ಹಣದ ನೆರವು ನೀಡಿ ಮಾದರಿಯಾಗಿದ್ದಾರೆ.

English summary
Euthanasia activist karibasamma gave 3 lakh rupees for corona relief fund
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X