ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ ಪೊಲೀಸ್ ಕಚೇರಿಯಲ್ಲಿ ಇ-ತಂತ್ರಾಂಶಕ್ಕೆ ಚಾಲನೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಫೆಬ್ರವರಿ 17: ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇಂದು ಇ-ಕಚೇರಿ ತಂತ್ರಾಂಶಕ್ಕೆ ಮಹಾಂತೇಶ ಬೀಳಗಿ ಚಾಲನೆ ನೀಡಿದರು.

ಇ-ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇ- ಕಚೇರಿ ತಂತ್ರಾಂಶವನ್ನು ಪರಿಶೀಲಿಸಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುವಂತೆ ಅಭಿನಂದಿಸಿದರು.

ಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ ವಿತರಣೆಗೆ ಇಲಾಖೆ ಸೂಚನೆಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ ವಿತರಣೆಗೆ ಇಲಾಖೆ ಸೂಚನೆ

ಈ ವೇಳೆ ಎಸ್‍ಸಿಆರ್ ‍ಬಿ ಬೆಂಗಳೂರು ಇದರ ಹಿರಿಯ ಕಾರ್ಯಕ್ರಮಾಧಿಕಾರಿ ನಾಗೇಶ್.ಎನ್ ಮಾತನಾಡಿ, "ಕಾಗದ ರಹಿತ ಆಡಳಿತಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಇ- ಕಚೇರಿಯನ್ನು ಪ್ರಾರಂಭಿಸಲಾಗುತ್ತಿದೆ. ರಾಜ್ಯಾದ್ಯಂತ ಇ- ಕಚೇರಿಗಳನ್ನು ಚಾಲನೆಗೊಳಿಸುತ್ತಿದ್ದು, ಇಂದು 43 ಘಟಕಕ್ಕೆ ಚಾಲನೆ ನೀಡಲಾಗಿದೆ ಮ್ಯಾನ್ಯುಯಲ್ ಕಡತ ವ್ಯವಹಾರ ನಿಲ್ಲಿಸಿ, ಸಂಪೂರ್ಣ ಇ-ಕಚೇರಿ ಆಡಳಿತ ಜಾರಿಗೊಳಿಸಿ ಯಶಸ್ವಿಯಗಿ ನಡೆಸಲಾಗುತ್ತಿದೆ" ಎಂದು ಮಾಹಿತಿ ನೀಡಿದರು.

 E Office Software In District Police Station

ಇ-ಕಚೇರಿ ವ್ಯವಸ್ಥೆಯಲ್ಲಿ ಅರ್ಜಿದಾರರಿಗೆ ಸ್ಥಳದಲ್ಲಿಯೇ ರಶೀದಿ ನೀಡಿ ಮೊಬೈಲ್ ಸಂಖ್ಯೆ ಪಡೆದು ಕಡತದ ಪ್ರತಿ ಹಂತದ ಮಾಹಿತಿಯನ್ನು ಮೊಬೈಲ್ ಮೂಲಕ ಕಾಲ ಕಾಲಕ್ಕೆ ಕಳುಹಿಸಲಾಗುವುದು. ಅರ್ಜಿದಾರರು ಮಾಹಿತಿಯನ್ನು ಆನ್ ಲೈನ್ ಮೂಲಕ ತಾವು ಇರುವಲ್ಲಿಯೇ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಇ-ಕಚೇರಿಯ ತರಬೇತಿಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

English summary
Mahantesha beelagi inaugurated e-office software in the Davanagere District Police Office today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X