ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ಮಳೆಯ ಹೊಡೆತಕ್ಕೆ ಅನ್ನದಾತರು ಕಂಗಾಲು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 17; ದಾವಣಗೆರೆ ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲಿಯೂ ಭತ್ತ, ಮೆಕ್ಕೆಜೋಳ, ರಾಗಿ ಸೇರಿದಂತೆ ಇತರೆ ಬೆಳೆ ಬೆಳೆದ ರೈತರ ಫಸಲು ಕೈಗೆ ಬರುವ ಸಮಯ. ಆದರೆ ಮಳೆಯ ಹೊಡೆತಕ್ಕೆ ಅನ್ನದಾತರ ಬದುಕು ಮೂರಾಬಟ್ಟೆಯಾಗಿದೆ. ಮಳೆಯಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯುವುದು ಭತ್ತ, ಮೆಕ್ಕೆಜೋಳ ಹಾಗೂ ಅಡಕೆ. ಇನ್ನು ಭಾರೀ ಮಳೆಯಾದ ಪರಿಣಾಮದಿಂದಾಗಿ ಭತ್ತ ಹಾಗೂ ಮೆಕ್ಕೆಜೋಳ ಬೆಳೆ ನೀರಿನಿಂದ ಆವೃತವಾಗಿದ್ದರಿಂದ ನಷ್ಟ ಸಂಭವಿಸಿದೆ. ಅಡಕೆ ಬೆಳೆಗಾರರೂ ಸಹ ತೋಟದಲ್ಲಿ ನೀರು ನಿಂತ ಪರಿಣಾಮ ಅಡಿಕೆ ಮರಗಳು ಹಾಳಾಗಿವೆ.

ದಾವಣಗೆರೆ; ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಜೆಡಿಎಸ್ ನಾಯಕ! ದಾವಣಗೆರೆ; ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಜೆಡಿಎಸ್ ನಾಯಕ!

ಫಸಲು ಕೊಯ್ಯುವ ವೇಳೆಯಲ್ಲಿ ಮಳೆ ಸುರಿಯುತ್ತಿದೆ‌. ಅಡಕೆ ಸುಲಿದು ಒಣಗಿಸುವುದಕ್ಕೂ ಕಷ್ಟ ಆಗುತ್ತಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಒಳ್ಳೆಯ ಮಳೆಯಾಗಿದೆ. ಬೆಳಗ್ಗೆ ಬಿಸಿಲಿದ್ದರೆ ಮಧ್ಯಾಹ್ನ ಮಳೆಯಾಗುತ್ತಿದೆ. ಅಕಾಲಿಕ ಮಳೆ ಸುರಿಯುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಚೆನ್ನೈನಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ಸೂಚನೆ: ರೆಡ್ ಅಲರ್ಟ್ ಘೋಷಣೆಚೆನ್ನೈನಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ಸೂಚನೆ: ರೆಡ್ ಅಲರ್ಟ್ ಘೋಷಣೆ

Due To Heavy Rain Paddy Crop Damaged In Davanagere

ಜಿಲ್ಲೆಯಲ್ಲಿ ಭತ್ತ ಈಗ ಕೊಯ್ಲಿಗೆ ಬರುತ್ತಿದೆ. ಇನ್ನು ಸ್ವಲ್ಪ ದಿನಗಳು ಕಳೆದರೆ ಕಟಾವಿಗೆ ಬರುತ್ತಿತ್ತು. ಸಾಲ ಮಾಡಿ ಭತ್ತ ಬೆಳೆದಿದ್ದ ಬೆಳೆಗಾರರಿಗೆ ಅಸಲು ಸಿಗುವುದು ಕಷ್ಟ ಎಂಬ ಪರಿಸ್ಥಿತಿ ಈಗ ಇದೆ. ಇನ್ನು ಮೆಕ್ಕೆಜೋಳ ಬೆಳೆದವರ ಗೋಳು ಇದಕ್ಕಿಂತ ಭಿನ್ನವಾಗಿಲ್ಲ. ಜಮೀನುಗಳಲ್ಲಿ ಬೆಳೆದಿದ್ದ ಜೋಳ ಕೊಳೆಯಲಾರಂಭಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಸನ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ; ತತ್ತರಿಸಿದ ಕಾಫಿ ಬೆಳೆಗಾರರುಹಾಸನ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ; ತತ್ತರಿಸಿದ ಕಾಫಿ ಬೆಳೆಗಾರರು

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಲಕ್ಕಶೆಟ್ಟಿಹಳ್ಳಿಯಲ್ಲಿ ಭತ್ತದ ಗದ್ದೆಯು ಮಳೆಯ ಹೊಡೆತಕ್ಕೆ ಮಲಗಿದೆ. ವಾರ ಕಳೆದರೆ ಭತ್ತ ಕಟಾವು ಮಾಡಲು ರೈತರು ನಿರ್ಧರಿಸಿದ್ದಾರೆ‌. ನಿನ್ನೆ ಸುರಿದ ಭಾರೀ ಮಳೆಗೆ ಚಾಪೆ ಹಾಸಿದ ರೀತಿಯಲ್ಲಿ ಕಟಾವಿಗೆ ಬಂದ ಭತ್ತ ಮಲಗಿದೆ.

ವರುಣನ ಅಬ್ಬರಕ್ಕೆ ರೈತರು ಕಂಗಾಲಾಗಿದ್ದಾರೆ. ಇತ್ತ ಹೊನ್ನಾಳಿ ತಾಲೂಕಿನ ಬೆಲಿಮಲ್ಲೂರು ಗ್ರಾಮದಲ್ಲಿ ಮನೆಗೆ ನೀರು ನುಗ್ಗಿದೆ. ವರುಣನ ಅಬ್ಬರಕ್ಕೆ ಚರಂಡಿ ತುಂಬಿ ಮೂರು ಮನೆಗಳಿಗೆ ನೀರು ನುಗ್ಗಿದ್ದು ಜನರು ಪರದಾಡುತ್ತಿದ್ದಾರೆ. ನೀರು ಹೊರ ಹಾಕಲು ಮನೆಯವರು ಹರಸಾಹಸ ಪಡುವಂತಾಯಿತು.

ಎಲ್ಲೆಲ್ಲಿ ಎಷ್ಟು ಮಳೆ?; ದಾವಣಗೆರೆ ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಮಂಗಳವಾರ 18.59 ಮಿ.ಮೀ ಸರಾಸರಿ ಉತ್ತಮ ಮಳೆಯಾಗಿದ್ದು, ಒಟ್ಟು ರೂ. 63.50 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ.

ಚನ್ನಗಿರಿ ತಾಲ್ಲೂಕಿನಲ್ಲಿ 19.48 ಮಿ.ಮೀ, ದಾವಣಗೆರೆ 05.61 ಮಿ.ಮೀ, ಹರಿಹರ 19.30 ಮಿ.ಮೀ, ಹೊನ್ನಾಳಿ 27.80 ಮಿ.ಮೀ, ಜಗಳೂರು ತಾಲ್ಲೂಕಿನಲ್ಲಿ 20.80 ಮಿ.ಮೀ ವಾಸ್ತವ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 20 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು ರೂ. 2.50 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.

ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 1 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು 30 ಸಾವಿರ ರೂ. ಹಾಗೂ 695 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು ರೂ. 55.60 ಲಕ್ಷ ಹಾನಿಯಾಗಿದೆ. ಒಟ್ಟು ರೂ. 55.90 ಲಕ್ಷ ಅಂದಾಜು ನಷ್ಟ ಆಗಿದೆ.

ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, ರೂ. 1.50 ಲಕ್ಷ ರೂ., ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು 30 ಸಾವಿರ ರೂ. ನಷ್ಟದ ಅಂದಾಜು ಮಾಡಲಾಗಿದೆ.

ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ ಮನೆ ಭಾಗಶಃ ಹಾನಿ ಆಗಿದ್ದು ರೂ. 1.20 ಲಕ್ಷ ಮತ್ತು 2 ಕಚ್ಚಾ ಮನೆ ತೀವ್ರಹಾನಿಯಾಗಿದ್ದು ರೂ. 1.30 ಲಕ್ಷ, 2 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು 80 ಸಾವಿರ ರೂ. ಸೇರಿಸಂತೆ ಒಟ್ಟು 3.30 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Recommended Video

Rohit Sharma 9 ವರ್ಷಗಳ ಮುಂಚೆಯೇ ಈ ಬಗ್ಗೆ ಹೇಳಿದ್ದರು | Oneindia Kannada

"ನಾವು ಕಷ್ಟಪಟ್ಟು ಭತ್ತ ಬೆಳೆದಿದ್ದೇವೆ‌. ಇನ್ನೊಂದು ವಾರದಲ್ಲಿ ಭತ್ತ ಕಟಾವು ಮಾಡಬೇಕಿತ್ತು‌. ಆದರೆ ಭಾರೀ ಮಳೆಯಿಂದಾಗಿ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಭತ್ತ ನಾಶವಾಗಿದೆ. ಕೇವಲ ನಮ್ಮದು ಮಾತ್ರವಲ್ಲ ಜಿಲ್ಲೆಯ ವಿವಿಧೆಡೆ ಬೆಳೆದ ರೈತರ ಗೋಳು ಇದೇ ಆಗಿದೆ. ಸರ್ಕಾರ ಕೊಡುವ ಪರಿಹಾರ ಯಾವುದಕ್ಕೂ ಸಾಲದು. ಪರಿಹಾರ ಮೊತ್ತ ಹೆಚ್ಚಿಸಿ ಹೆಚ್ಚಿನ ಪರಿಹಾರ ನೀಡಬೇಕು‌. ಭತ್ತ ಬೆಳೆಯಲು ಮಾಡಿದ್ದ ಸಾಲ ತೀರಿಸುವುದಾದರೂ ಹೇಗೆ ಎಂಬ ಆತಂಕ ಕಾಡುತ್ತಿದೆ. ಗೊಬ್ಬರ ಸೇರಿದಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇನೆ. ಈಗ ತೀರಿಸುವುದು ಹೇಗೆ ಎಂಬುದೇ ನಮ್ಮನ್ನು ಕಾಡುತ್ತಿರುವ ಪ್ರಶ್ನೆ" ಎನ್ನುತ್ತಾರೆ ರೈತ ನಾಗರಾಜ್.

English summary
Due to heavy rain in Davanagere paddy and other crop damaged. Farmers upset after crop damage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X