• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆಯಲ್ಲಿ ಖಾಸಗಿ ಲ್ಯಾಬ್ ಎಡವಟ್ಟು: 6 ದಿನದ ಶಿಶು ಸಾವು

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಜೂನ್ 24: ಖಾಸಗಿ ಲ್ಯಾಬ್ ನೀಡಿದ ತಪ್ಪು ವರದಿಯಿಂದಾಗಿ ಆರು ದಿನದ ಮಗುವು ಮೃತಪಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಜೂನ್ 18ರಂದು ಕೋವಿಡ್ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ತಾಯಿಗೆ ಕೊರೊನಾ ವೈರಸ್ ಇದೆ ಎಂದು ಖಾಸಗಿ ಲ್ಯಾಬ್ ‍ನೀಡಿದ ವರದಿಯಿಂದ, ತಾಯಿ ಹಾಗೂ ಮಗುವನ್ನು ಎನ್‍ಐಸಿಯುನಲ್ಲಿ ಪ್ರತ್ಯೇಕ ಇರಿಸಲಾಗಿತ್ತು. ಆದರೆ ಮಗುವು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದೆ.

ದಾವಣಗೆರೆ: ಮದುವೆಗೆ ಹೋದವರ ಎದೆಯಲ್ಲಿ ಈಗ ಢವ ಢವ!

ನಗರದ ಬಿಸಲೇರಿ ದುರ್ಗಾಂಬಿಕಾ ಕ್ಯಾಂಪ್ ನ ಗೃಹಿಣೆಗೆ ನೆಗೆಟಿವ್ ಇದ್ದರೂ ಲ್ಯಾಬ್, ತಾಯಿಗೆ ಮೊದಲು ಪಾಸಿಟಿವ್ ಎಂದು ವರದಿ ನೀಡಿತ್ತು. ಮಗುವಿಗೂ ಸೋಂಕು ತಗುಲುವ ಸಾಧ್ಯತೆಯಿಂದಾಗಿ ತಾಯಿ ಮಗುವನ್ನು ಪ್ರತ್ಯೇಕ ಎನ್‍ಐಸಿಯುನಲ್ಲಿ ಇರಿಸಲಾಗಿತ್ತು. ಆದರೆ ಮಗುವಿಗೆ ಸರಿಯಾಗಿ ಚಿಕಿತ್ಸೆ ಸಿಗದೆ ಹಾಗೂ ಕರುಳಬಳ್ಳಿ ನಂಜು, ಉಸಿರಾಟ ಸಮಸ್ಯೆಯಿಂದ ಮಗು ಸಾವನ್ನಪ್ಪಿದೆ.

ಲ್ಯಾಬ್ ನೀಡಿದ ತಪ್ಪು ವರದಿ ಮತ್ತು ಮಗುವಿಗೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ.

English summary
A six days old baby dies due to a false report by a private lab in davanagere
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X