ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಾದಕ್ಕೂ ಮುನ್ನ ದಾವಣಗೆರೆ ನಗರದಲ್ಲಿ ವಾಸ್ತವ್ಯ ಹೂಡಿದ್ದ 'ಡ್ರೋನ್ ಪ್ರತಾಪ್'

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜುಲೈ 20: ಯುವ ವಿಜ್ಞಾನಿ ಎಂದು ಗುರುತಿಸಿಕೊಂಡಿರುವ ಮಂಡ್ಯದ ಡ್ರೋನ್ ಪ್ರತಾಪ್ 8 ದಿನಗಳ ಕಾಲ ದಾವಣಗೆರೆ ನಗರದ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರೆಂಬ ವಿಚಾರ ತಡವಾಗಿ ತಿಳಿದು ಬಂದಿದೆ.

Recommended Video

Drone Prathap Warned by German Company BillzEye | Oneindia Kannada

""ಪ್ರಧಾನಿ ನರೇಂದ್ರ ಮೋದಿಯವರು ನನಗೆ ಫೋನ್ ಮಾಡಿ ಆಫರ್ ಕೊಟ್ಟರು. ಅದನ್ನು ನಿರಾಕರಿಸಿದರೆ ಟೀಕೆಗಳಿಗೆ ಒಳಗಾಗುತ್ತೇನೆ'' ಎಂದು ಮಂಡ್ಯದ ಡ್ರೋನ್ ಪ್ರತಾಪ್ ಹೇಳಿದ್ದರು.

ಡ್ರೋನ್ ಪ್ರತಾಪ್ ವಿರುದ್ಧ ಎಫ್ಐಆರ್ ದಾಖಲುಡ್ರೋನ್ ಪ್ರತಾಪ್ ವಿರುದ್ಧ ಎಫ್ಐಆರ್ ದಾಖಲು

'ದಾವಣಗೆರೆಯ ಶ್ರೀಗಂಧ ರೆಸಿಡೆನ್ಸಿಯಲ್ಲಿ ಜುಲೈ 1 ರಿಂದ 8 ರವರೆಗೆ ವಾಸ್ತವ್ಯ ಹೂಡಿದ್ದ ಪ್ರತಾಪ್‌, ಆ ವೇಳೆ ಕೆಲವು ವಿಷಯಗಳನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ' ಎಂದು ಹೋಟೆಲ್‌ ಮಾಲೀಕ ವಿನಾಯಕ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Drone Pratap Stayed In Hotel At Davanagere

'ಪ್ರಧಾನಿಯವರು ದೂರವಾಣಿ ಕರೆ ಮಾಡಿ, ಡಿಆರ್ ಡಿಒ ದಲ್ಲಿ ಉದ್ಯೋಗದ ಆಫರ್ ಮಾಡಿದ್ದಾರೆ. ಅದನ್ನು ಒಪ್ಪಬೇಕೊ ಅಥವಾ ತಿರಸ್ಕರಿಸಬೇಕೋ ಗೊತ್ತಿಲ್ಲ. ತಿರಸ್ಕರಿಸಿದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಟ್ರೋಲ್ ಆಗುತ್ತೇನೆ. ನನಗೆ ಮಾಧ್ಯಮಗಳು ಕರೆ ಮಾಡಿ ಕೇಳಿದರೂ, ನನಗೆ ಆಫರ್ ಬಂದಿಲ್ಲ ಎಂದೇ ಹೇಳುತ್ತೇನೆ ಎಂದು ಪ್ರತಾಪ್ ನನ್ನ ಬಳಿ ಹೇಳಿದ್ದರು' ಎಂದು ವಿನಾಯಕ ತಿಳಿಸಿದರು.

Drone Pratap Stayed In Hotel At Davanagere

ಕ್ಯಾಚ್ ಮಿ ಇಫ್ ಯು ಕ್ಯಾನ್: ಡ್ರೋನ್ ಪ್ರತಾಪ್ ಸೈಕೋ ಅನಾಲಿಸಿಸ್!

'ರಾತ್ರಿ ಎಲ್ಲಾ ವಿಡಿಯೋ ಕಾಲ್‌ನಲ್ಲೇ ಇರುತ್ತಿದ್ದರು. ಮೂರು ದಿವಸಗಳ ಹಿಂದೆ ನನಗೆ ದೂರವಾಣಿ ಕರೆ ಮಾಡಿ ಫ್ರಾನ್ಸ್‌ನಿಂದ ಒಂದು ಅವಕಾಶವಿದೆ. ಅದನ್ನು ಒಪ್ಪಿಕೊಂಡರೆ ನಾನು ನಗೆಪಾಟಲಿಗೆ ಈಡಾಗಿದ್ದೆಲ್ಲವೂ ಮುಚ್ಚಿಹೋಗುತ್ತದೆ ಎಂದು ಹೇಳಿದ್ದಾರೆ' ಎಂದು ವಿವರಿಸಿದರು.

'ನಮ್ಮ ಹೋಟೆಲ್‌ ಬಗ್ಗೆ ಮಾತನಾಡಿರುವುದನ್ನು ಸಾಮಾಜಿಕ ಮಾಧ್ಯಮಗಳಿಗೆ ಅಪ್‌ಲೋಡ್ ಮಾಡಬೇಕು ಎಂದಿದ್ದೆ. ಆದರೆ ಅವರು ಟ್ರೋಲ್ ಆದ ಮೇಲೆ ಆ ನಿರ್ಧಾರ ಕೈಬಿಟ್ಟೆ. ಜುಲೈ 1 ರಂದು ಕೊಠಡಿ ಖಾಲಿ ಮಾಡಿದ ಮೇಲೆ ಅವರ ಬಗ್ಗೆ ಟೀಕೆಗಳು ಬಂದವು. ಎರಡನೇ ಬಾರಿ ನಮ್ಮ ಹೋಟೆಲ್‌ಗೆ ಬಂದಿದ್ದಾಗ, ನಾನು ಕೆಲಸದ ನಿಮಿತ್ತ ಬಂದು ವಾಸ್ತವ್ಯ ಹೂಡಿದ್ದೇನೆ. ಕ್ವಾರಂಟೈನ್ ಗಾಗಿ ಅಲ್ಲ ಎಂದಿದ್ದರು' ಎಂದು ಹೋಟೆಲ್ ಮಾಲೀಕ ವಿನಾಯಕ ಹೇಳಿದರು.

English summary
Drone Pratap, who identified as a young scientist, He was stayed at private hotel in Davanagere for 8 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X