ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ: ನಗರದಲ್ಲಿ 21 ನಿರ್ಭಯ ಗಸ್ತು ಬೈಕ್‍ಗಳಿಗೆ ಚಾಲನೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಡಿಸೆಂಬರ್ 11: ದಾವಣಗೆರೆ ಜಿಲ್ಲೆಗೆ ಆಗಮಿಸಿರುವ 21 ನಿರ್ಭಯ ಗಸ್ತು ಬೈಕ್‍ಗಳನ್ನು ಗುರುವಾರ ಸಂಜೆ ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೂ ವಿತರಿಸಲಾಯಿತು.

ನಿರ್ಭಯ ಪಡೆ ಕರ್ತವ್ಯಕ್ಕೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ನೂತನ ಬೈಕ್ ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಬಳ್ಳಾರಿ: 35 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ: ಆರೋಪಿಗಳ ಬಂಧನಬಳ್ಳಾರಿ: 35 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ: ಆರೋಪಿಗಳ ಬಂಧನ

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಎಸ್ಪಿ, ""ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ನಿರ್ಭಯ ಯೋಜನೆಯಡಿ ದಾವಣಗೆರೆ ಜಿಲ್ಲೆಗೆ ನೀಡಲಾಗಿರುವ 21 ಹೊಸ ಬೈಕ್ ಗಳನ್ನು ಜಿಲ್ಲೆಯ 21 ಪೊಲೀಸ್ ಠಾಣೆಗಳಿಗೂ ತಲಾ ಒಂದರಂತೆ ವಿತರಿಸಲಾಗಿದೆ'' ಎಂದು ಹೇಳಿದರು.

Davanagere: Drived For 21 Nirbhaya Patrol Bikes In The City

ಠಾಣೆಗಳ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಿ ನಿರ್ಭಯ ಪಡೆ ರಚಿಸಲಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆದ ದೌರ್ಜನ್ಯದ ಘಟನಾ ಸ್ಥಳಕ್ಕೆ ಹೋಗಲು, ತನಿಖೆ ನಡೆಸಲು ಈ ಬೈಕ್‍ಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಡಿ ಜಿಲ್ಲೆಗೆ ಬಂದಿರುವ ಮೂರು ವಿಶೇಷ ಕಮಾಂಡೋ ವಾಹನಗಳಿಗೆ ವಿವಿಧ ಉಪಕರಣಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಉತ್ತರ ಮತ್ತು ದಕ್ಷಿಣ ವಲಯಗಳಿಗೆ ಹಾಗೂ ಜಿಲ್ಲಾ ಶಸಸ್ತ್ರ ಮೀಸಲು ಪಡೆಗೆ ಒಂದೊಂದು ವಾಹನ ಹಂಚಿಕೆ ಮಾಡಲಾಗಿದೆ ಎಂದರು.

Davanagere: Drived For 21 Nirbhaya Patrol Bikes In The City

ದಾವಣಗೆರೆ ಜಿಲ್ಲೆಯಲ್ಲಿರುವ 13 ಗಸ್ತು ವಾಹನಗಳೊಂದಿಗೆ ಮೂರು ವಿಶೇಷ ಕಮಾಂಡೋ ವಾಹನಗಳು, ನಿರ್ಭಯ ಗಸ್ತು ಬೈಕ್‍ಗಳು ಹಾಗೂ ಚಿತಾ ಬೈಕ್‍ಗಳು ಗಸ್ತು ನಡೆಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಡಿವೈಎಸ್‍ಪಿ ಪ್ರಕಾಶ್, ಆರ್‍ಪಿಐ ಕಿರಣಕುಮಾರ್ ಸೇರಿದಂತೆ ಇತರರು ಇದ್ದರು.

Recommended Video

Team India ಇಂದು ಅಭ್ಯಸ ಪಂದ್ಯದಲ್ಲಿ ಹೀನಾಯ ಪ್ರದರ್ಶನ | Oneindia Kannada

ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆ ಬಳಿ 3 ಹಾಗೂ 4 BHK ಐಷಾರಾಮಿ ಅಪಾರ್ಟ್ಮೆಂಟ್. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ

English summary
The 21 Nirbhaya patrol bikes, which arrived in Davanagere district, were distributed to all police stations in the district on Thursday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X