ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ್ಯೂಯಾರ್ಕಿನಲ್ಲಿ ದಾವಣಗೆರೆ ಮೂಲದ ಕೊರೊನಾ ವಾರಿಯರ್

|
Google Oneindia Kannada News

ದಾವಣಗೆರೆ, ಏಪ್ರಿಲ್ 27: ಅಮೆರಿಕದ ನ್ಯೂಯಾರ್ಕ್‌ನ ಬ್ರಾಂಕ್ಸ್ ಕೇರ್ ಆಸ್ಪತ್ರೆಯಲ್ಲಿ ನೆಫ್ರಾಲಜಿ ವಿಭಾಗದಲ್ಲಿ ಭಾರತ ಮೂಲದ ಡಾ. ಕಲ್ಪನಾ ಉದಯಶಂಕರ್ ಅವರು ಸೇವೆ ಸಲ್ಲಿಸುತ್ತಿರುವುದು ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

Recommended Video

ದಾವಣಗೆರೆ ಪರಿಸ್ಥಿತಿ ಬಗ್ಗೆ ಮಾತನಾಡಿದ ಶ್ರೀರಾಮುಲು | Sri Ramulu | Davangere

ದಾವಣಗೆರೆ ಮೂಲದ ಡಾ. ಕಲ್ಪನಾ ಉದಯಶಂಕರ್ ಅವರು ಕಳೆದ ಎರಡು ತಿಂಗಳಿನಿಂದ ಬ್ರಾಂಕ್ ಕೇರ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಬ್ರಾಂಕ್ಸ್ ನಲ್ಲಿ ಎರಡು ಕಡೆಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗಳಿವೆ. ಪ್ರತಿ ಆಸ್ಪತ್ರೆಯಲ್ಲಿ 300ರಿಂದ 350 ಕೊರೊನಾ ರೋಗಿಗಳಿದ್ದಾರೆ. ಡಾ. ಕಲ್ಪನಾ ಅವರು ದಿನ ಬಿಟ್ಟು ದಿನ 12 ಗಂಟೆಗಳ ಶಿಫ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಲ್ಪನಾ ಅವರು 30ರಿಂದ 40 ರೋಗಿಗಳಿಗೆ ಪ್ರತಿದಿನ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆಸ್ಪತ್ರೆ ಮೂಲದಿಂದ ತಿಳಿದು ಬಂದಿದೆ.

ಕೊರೊನಾ ಚಿಕಿತ್ಸೆ; ಮೈಸೂರು ಮೂಲದ ವೈದ್ಯೆ ಡಾ. ಉಮಾರಿಗೆ ಅಮೆರಿಕದಲ್ಲಿ ಕೃತಜ್ಞತೆ!ಕೊರೊನಾ ಚಿಕಿತ್ಸೆ; ಮೈಸೂರು ಮೂಲದ ವೈದ್ಯೆ ಡಾ. ಉಮಾರಿಗೆ ಅಮೆರಿಕದಲ್ಲಿ ಕೃತಜ್ಞತೆ!

ಡಾ. ಕಲ್ಪನಾ ಅವರು ದಾವಣೆಗೆರೆಯ ಡಾ. ಉದಯಶಂಕರ್ ಕೆ. ಶೆಟ್ರು ಅವರ ಪತ್ನಿಯಾಗಿದ್ದಾರೆ. ನಗರದ ಬಾಪೂಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದರು. ನಂತರ, ಜಮೈಕಾ ಗಯಾನಾ ಹಾಗೂ ದಕ್ಷಿಣ ಅಮೆರಿಕದ ವಿವಿಧೆಡೆಗಳಲ್ಲಿ ಕಾರ್ಯ ನಿರ್ವಹಿಸಿದ ಬಳಿಕ ಸದ್ಯ ನ್ಯೂಯಾರ್ಕಿನ ಬ್ರಾಂಕ್ಸ್ ಎಂಬಲ್ಲಿ ಆಸ್ಪತ್ರೆಯಲ್ಲಿ ವಿಶೇಷ ತಜ್ಞ ವೈದ್ಯೆಯಾಗಿದ್ದಾರೆ.

Dr. Kalpana Uday, MD As Corona warrior in Bonx NY

ಈಗ ನ್ಯೂಯಾರ್ಕ್‌ನಲ್ಲಿ ಪತಿ ಡಾ. ಉದಯಶಂಕರ್ ಜೊತೆ ನೆಲೆಸಿದ್ದಾರೆ. ನೆಫ್ರಾಲಜಿ ತಜ್ಞೆಯಾಗಿರುವ ಡಾ. ಕಲ್ಪನಾ ಅವರು ಕಳೆದ ಎರಡು ತಿಂಗಳಿನಿಂದ ಕಿಡ್ನಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ, ನ್ಯೂಯಾರ್ಕಿನಲ್ಲಿ ಕೊರೊನಾ ಸೋಂಕು ಹರಡುವುದು ಹೆಚ್ಚಾಗುತ್ತಿದ್ದಂತೆ ಕೊರೊನಾ ವಾರಿಯರ್ ಗಳ ಅಗತ್ಯ ಹೆಚ್ಚಾಗಿ ಕಂಡು ಬಂದಿದ್ದರಿಂದ ಕೊರೊನಾ ರೋಗಿಗಳ ಚಿಕಿತ್ಸೆಗೆ ಮುಂದಾಗಿದ್ದಾರೆ.

Dr. Kalpana Uday, MD As Corona warrior in Bonx NY

ಇದು ಸವಾಲಿನಹಾಗೂ ಕಲಿಕೆಯ ಮತ್ತು ಸಾರ್ಥಕತೆಯ ಕ್ಷಣವಾಗಿದೆ, ಕೊವಿಡ್ ಬಗ್ಗೆ ಜನರು ಮುನ್ನೆಚ್ಚರಿಕೆ ವಹಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು ಹಾಗೂ ಆಗಾಗ ಕೈ ತೊಳೆಯುತ್ತಿರಬೇಕು ಎಂದು ಡಾ. ಕಲ್ಪನಾ ಹೇಳಿದ್ದಾರೆ.

English summary
Dr. Kalpana Uday origin of Davanagere in Karnataka is an Internist in Bronx, NY. Dr. Uday completed their Medical School at Bangalore Medical College.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X