• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬರುವ ಚುನಾವಣೆಗಳು ನಮಗೆ ಅಗ್ನಿಪರೀಕ್ಷೆ; ಯಡಿಯೂರಪ್ಪ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 19; "ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಹುಮತ ಪಡೆಯುವುದು ಕಷ್ಟ ಆಗದು. ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಅಪೇಕ್ಷೆ ಜನರದ್ದು ಇದೆ. ಆದರೆ ಕರ್ನಾಟಕದಲ್ಲಿ ಅಷ್ಟು ಸುಲಭವಲ್ಲ. ಈಗಾಗಲೇ ಕಾಂಗ್ರೆಸ್ ಎದ್ದು ಕುಳಿತಿದೆ. ಎಚ್ಚರಿಕೆಯಿಂದ ನಾವು ಹೆಜ್ಜೆ ಇಡಬೇಕಿದೆ. ಯಾವುದೇ ಕಾರಣಕ್ಕೂ ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸಬೇಡಿ" ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಭಾನುವಾರ ದಾವಣಗೆರೆ ನಗರದ ತ್ರಿಶೂಲ್ ಕಲಾಭವನದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಈಗಾಗಲೇ ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷ ನಿರೀಕ್ಷೆ ಮೀರಿ ಸಾಧನೆ ಮಾಡಿದೆ. ಮುಂಬರುವ ಒಂದು ತಿಂಗಳು ಪಕ್ಷ ಸಂಘಟನೆಗೆ ಆದ್ಯತೆ ಕೊಡಬೇಕಿದೆ. ನಾನೊಬ್ಬನೇ ಪ್ರವಾಸ ಹೋಗುತ್ತಿಲ್ಲ. ಸಂಸದರು, ಶಾಸಕರು, ಪರಿಷತ್ ಸದಸ್ಯರು ಬರುತ್ತಾರೆ. ನಾಲ್ಕೈದು ತಂಡಗಳಾಗಿ ಪ್ರವಾಸ ಮಾಡುತ್ತೇವೆ" ಎಂದು ಹೇಳಿದರು.

ದಾವಣಗೆರೆಯಲ್ಲಿ ಎರಡು ದಿನಗಳಿಂದ ರಾಜ್ಯ ಕಾರ್ಯಕಾರಣಿ ಸಭೆ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಲವಾರು ನಾಯಕರು ದಾವಣಗರೆಯಲ್ಲಿದ್ದಾರೆ.

ಮದುವೆಯಾಗಲ್ಲ ಎಂದು ಯುವತಿ ಶಪಥ: ಎಚ್. ರಾಂಪುರಕ್ಕೆ ದಾವಣಗೆರೆ ಜಿಲ್ಲಾಡಳಿತ ದೌಡು!ಮದುವೆಯಾಗಲ್ಲ ಎಂದು ಯುವತಿ ಶಪಥ: ಎಚ್. ರಾಂಪುರಕ್ಕೆ ದಾವಣಗೆರೆ ಜಿಲ್ಲಾಡಳಿತ ದೌಡು!

"ರಾಜ್ಯದಲ್ಲಿ ಬಹಳಷ್ಟು ಶ್ರಮ ಹಾಕಿ ಪಕ್ಷ ಬಲಿಷ್ಠಗೊಳಿಸಬೇಕಿದೆ. ಪ್ರತಿಬೂತ್ ನಲ್ಲಿಯೂ ಮಹಿಳೆಯರನ್ನು ಗುಂಪುಗೂಡಿಸಿ ಪಕ್ಷ ಕಟ್ಟಬೇಕಿದೆ. ಮತ್ತೊಮ್ಮೆ ಜನರಲ್ಲಿ ವಿಶ್ವಾಸ ಮೂಡಿಸಬೇಕಾದ ಕೆಲಸ ಆಗಬೇಕು" ಎಂದು ಯಡಿಯೂರಪ್ಪ ತಿಳಿಸಿದರು.

ಸಚಿವ ಸ್ಥಾನ, ಚುನಾವಣೆ ಸ್ಪರ್ಧೆ ಬಗ್ಗೆ ಬಿ. ವೈ. ವಿಜಯೇಂದ್ರ ಮಾತು ಸಚಿವ ಸ್ಥಾನ, ಚುನಾವಣೆ ಸ್ಪರ್ಧೆ ಬಗ್ಗೆ ಬಿ. ವೈ. ವಿಜಯೇಂದ್ರ ಮಾತು

"ದೇವಾಲಯಗಳ ತೆರವು ವಿಚಾರದಲ್ಲಿ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಒಂದು ವೇಳೆ ಲೋಪದೋಷವಾಗಿದ್ದರೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು. ಯಾವುದೇ ಕಾರಣಕ್ಕೂ ಎದೆಗುಂದಬೇಕಿಲ್ಲ. ಲೋಕಸಭೆಯಲ್ಲಿ ಗೆಲ್ಲಬಹುದು. ಆದರೆ ರಾಜ್ಯದಲ್ಲಿ ಕಷ್ಟವಾಗುತ್ತದೆ" ಎಂದು ಅಭಿಪ್ರಾಯಪಟ್ಟರು.

Breaking: ಬಿಜೆಪಿ ಮಾಜಿ ನಾಯಕ ಬಾಬುಲ್‌ ಸುಪ್ರೀಯೋ ಟಿಎಂಸಿ ಸೇರ್ಪಡೆBreaking: ಬಿಜೆಪಿ ಮಾಜಿ ನಾಯಕ ಬಾಬುಲ್‌ ಸುಪ್ರೀಯೋ ಟಿಎಂಸಿ ಸೇರ್ಪಡೆ

"ಹಾನಗಲ್ ಮತ್ತು ಸಿಂಧಗಿ ಉಪ ಚುನಾವಣೆ ಅಷ್ಟು ಸುಲಭವಲ್ಲ. ಭ್ರಮೆಯಲ್ಲಿರಬೇಡಿ,‌ ಮುಂಬರುವ ಚುನಾವಣೆಗಳು ಅಗ್ನಿಪರೀಕ್ಷೆ. ಹಾಗಾಗಿ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕಿದೆ" ಎಂದು ಯಡಿಯೂರಪ್ಪ ಎಚ್ಚರಿಸಿದರು.

"ದಯವಿಟ್ಟು ಯಾರೂ ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸಬೇಡಿ. ಅವರದ್ದೇ ಆದ ಲೆಕ್ಕಾಚಾರ ಹಾಗೂ ಶಕ್ತಿ ಅವರಿಗೆ ಇದೆ. ಬಿಜೆಪಿ ಮುಖಂಡರನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಹಾಗಾಗಿ ನಾವೆಲ್ಲರೂ ಎಚ್ಚರಿಕೆಯಿಂದ ಮುಂದುವರಿಯಬೇಕಿದೆ. ಕಾಂಗ್ರೆಸ್‌ನವರು ನಮ್ಮ ಪಕ್ಷದ ಮುಖಂಡರನ್ನು ಸೆಳೆಯುವುದಕ್ಕೆ ಬಿಡಬಾರದು. ನಾವೆಲ್ಲರೂ ಆತ್ಮವಿಶ್ವಾಸದಿಂದ ಮುನ್ನಡೆಯಬೇಕಿದೆ. 140 ಕ್ಷೇತ್ರಗಳಲ್ಲಿ ಜಯಿಸುವ ಮೂಲಕ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಬೇಕಿದೆ. ಇದಕ್ಕಾಗಿ ನಾವೆಲ್ಲರೂ ಪ್ರಯತ್ನಿಸೋಣ" ಎಂದು ಕರೆ ಕೊಟ್ಟರು.

"ಸಾಧ್ಯವಾದಷ್ಟು ಬಿಜೆಪಿ ಪಕ್ಷಕ್ಕೆ ಎಸ್ಸಿ, ಎಸ್ಟಿ ಸಮುದಾಯದ ನಾಯಕರನ್ನು ಕರೆತರುವ ಕೆಲಸ ಆಗಬೇಕಿದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಕ್ಕೆ ಕರೆದುಕೊಂಡು ಬಂದರೆ ಮತ್ತಷ್ಟು ಪಕ್ಷ ಶಕ್ತಿಯುತವಾಗಲಿದೆ. ಬೂತ್ ಮಟ್ಟದಲ್ಲಿ ಕನಿಷ್ಟ 25 ಮಹಿಳೆಯರ ಮೋರ್ಚಾ ಮಾಡಿ, ಪಕ್ಷ ಮತ್ತಷ್ಟು ಸದೃಢಗೊಳಿಸೋಣ" ಎಂದು ಸಲಹೆ ನೀಡಿದರು.

"ದಾವಣಗೆರೆಯಲ್ಲಿ ಜಿ. ಎಂ. ಸಿದ್ದೇಶ್ವರ್ ನೇತೃತ್ವದಲ್ಲಿ ಹಲವು ಸಭೆ ನಡೆಸಿದ್ದೇವೆ. ಸಮಾವೇಶ ಮಾಡಿದ್ದೇವೆ. ಆಗೆಲ್ಲಾ ಜನರೇ ವಾಹನ ಮಾಡಿಕೊಂಡು ಬರುತ್ತಿದ್ದರು. 50 ರಿಂದ 60 ಸಾವಿರ ಜನರು ಸೇರುತ್ತಿದ್ದರು. ಇಬ್ಬರೇ ಶಾಸಕರಿದ್ದಾಗ ಒಬ್ಬರೂ ರಾಜೀನಾಮೆ ಕೊಟ್ಟು ಹೋದರು. ಆದರೂ ಎದೆಗುಂದದೇ ಪಕ್ಷವನ್ನು ರಾಜ್ಯಾದ್ಯಂತ ಓಡಾಡಿ ಕಟ್ಟಿದ್ದೇವೆ. ಜನರ ಪ್ರೀತಿ ವಿಶ್ವಾಸಗಳಿಸಿದ ಪರಿಣಾಮ ಅಧಿಕಾರದಲ್ಲಿದ್ದೇವೆ" ಎಂದರು.

   ಸೋನು ಸೂದ್ ಮೇಲೆ 20 ಕೋಟಿ ರೂಪಾಯಿ ತೆರಿಗೆ ವಂಚನೆ ಆರೋಪ | Oneindia Kannada

   ಕಾರ್ಯಕಾರಿಣಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಯಡಿಯೂರಪ್ಪ, "ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಇಬ್ಬರು ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಕಾಂಗ್ರೆಸ್ ನವರೇ ನಮ್ಮ ಪಕ್ಷಕ್ಕೆ ಬರುತ್ತಾರೆ" ಎಂದು ಹೇಳಿದರು.

   English summary
   Former chief minister B. S. Yediyurappa called the party workers don't take opposition party's lightly. BJP executive committee meeting of the state unit underway at Davangere.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X