ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲ್ಲ ಹಾವಿಗೆ ಹಾಲೆರೆಯಬೇಡಿ; ಅದನ್ನೇ ಮಕ್ಕಳಿಗೆ ಕೊಡಿ: ಜಯಮೃತ್ಯುಂಜಯ ಸ್ವಾಮೀಜಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಆಗಸ್ಟ್ 1: ಇನ್ನೇನು ನಾಗರಪಂಚಮಿ ಹಬ್ಬ ಹತ್ತಿರವಾಗುತ್ತಿದೆ. ಶ್ರಾವಣ ಮಾಸದಲ್ಲಿನ ಈ ಹಬ್ಬದಲ್ಲಿ ಕಲ್ಲಿನ ನಾಗರ ಹಾವಿಗೆ ಹಾಲೆರೆಯುವ ಪದ್ಧತಿ ಎಲ್ಲೆಲ್ಲೂ ನಡೆಯುತ್ತದೆ. ಕೆಲವರು ಹುತ್ತಕ್ಕೆ ಹಾಲೆರೆಯುತ್ತಾರೆ. ಆದರೆ ಹಾಲನ್ನು ಹೀಗೆ ಸುಮ್ಮನೆ ಸುರಿದು ವ್ಯರ್ಥ ಮಾಡುವ ಬದಲು ಮಕ್ಕಳಿಗೆ ನೀಡಿ ಎಂದು ದಾವಣಗೆರೆಯಲ್ಲಿ ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀಗಳು ಮನವಿ ಮಾಡಿಕೊಂಡಿದ್ದಾರೆ.

ದಾವಣಗೆರೆಯ ಕೊಂಡಜ್ಜಿ ರಸ್ತೆಯಲ್ಲಿರುವ ಬಿಜಿಎಂ ಶಾಲೆಯಲ್ಲಿ "ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು' ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

 ನಾವು ನಮ್ಮ ಹಕ್ಕು ಕೇಳುತ್ತಿದ್ದೇವಷ್ಟೆ; ಜಯಮೃತ್ಯುಂಜಯ ಸ್ವಾಮೀಜಿ ತಿರುಗೇಟು‌ ನಾವು ನಮ್ಮ ಹಕ್ಕು ಕೇಳುತ್ತಿದ್ದೇವಷ್ಟೆ; ಜಯಮೃತ್ಯುಂಜಯ ಸ್ವಾಮೀಜಿ ತಿರುಗೇಟು‌

"ಕೆಲವೇ ದಿನಗಳಲ್ಲಿ ನಾಗರ ಪಂಚಮಿ ಹಬ್ಬ ಬರುತ್ತಿದೆ. ಆಗ ಲಕ್ಷಾಂತರ ‌ಲೀಟರ್ ಹಾಲನ್ನು ನಾಗರ ಮೂರ್ತಿಗಳಿಗೆ, ಹುತ್ತಗಳಿಗೆ ಎರೆದು ವ್ಯರ್ಥ ಮಾಡುತ್ತೀರಿ. ಆದರೆ ಹಾಗೆ ಮಾಡಬೇಡಿ. ಅದನ್ನೇ ಮಕ್ಕಳಿಗೆ ನೀಡಿ. ಮಕ್ಕಳು ಅದನ್ನು ಸದೃಢವಾಗಿ ಬೆಳೆಯುತ್ತಾರೆ" ಎಂದು ಸಲಹೆ ನೀಡಿದ್ದಾರೆ.

Dont Milk Stone Snake In Nagarapanchami Said Jayamruthyunjaya Of Kudalasangama

"ಹುತ್ತಕ್ಕೆ ಹಾಲು ಎರೆಯುವುದರಿಂದ ಹಾವುಗಳು ಸಾವನ್ನಪ್ಪುವ ಘಟನೆಗಳೂ ನಡೆದಿವೆ. ಆದ್ದರಿಂದ ಕೇವಲ‌ ಪೂಜೆ ಸಲ್ಲಿಸಿ, ಬೇಡಿಕೊಳ್ಳಿ. ಅದೇ ಹಾಲನ್ನು ಮಕ್ಕಳಿಗೆ ವಿತರಣೆ ಮಾಡುವುದರ ಮೂಲಕ ಹಬ್ಬ ಆಚರಿಸಿ" ಎಂದು ಕರೆ ನೀಡಿದರು. ಶಾಲೆಯ ಮಕ್ಕಳಿಗೆ ಹಾಲು ಹಾಗೂ ಬನ್ ವಿತರಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

English summary
Nagarapanchami festival is getting closer.During the festival, people pour the milk to stone. Instead of that, please give that milk to children said jayamaritunjaya swamiji of Davanagere. He requested that the milk should be given to the children instead of being wasted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X