ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವಣ್ಣನವರ ವಚನಗಳ ತಿದ್ದುವ ಪ್ರಯತ್ನ ಮಾಡಬಾರದು: ಸಿದ್ಧಲಿಂಗಾ ಸ್ವಾಮೀಜಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 3: ರಾಜ್ಯದಲ್ಲಿ ದಿನೇ ದಿನೇ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರುತ್ತಿದೆ. ಪ್ರಸ್ತುತ ಪಠ್ಯ ಪರಿಷ್ಕರಣೆಗೆ ಮಠಾಧೀಶರು, ಶಿಕ್ಷಣ ತಜ್ಞರು, ಸಾಹಿತಿಗಳು, ಲೇಖಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ತುಮಕೂರಿನ ಸಿದ್ಧಗಂಗ ಮಠದ ಸಿದ್ದಗಂಗಾ ಸ್ವಾಮೀಜಿ ಅವರು ಪ್ರತಿಕ್ರಿಯೆ ನೀಡಿದ್ದು, ಬಸವಣ್ಣನವರ ತತ್ವಗಳು ಪ್ರತಿಯೊಬ್ಬ ವ್ಯಕ್ತಿಗೂ ಬೇಕಾಗಿದೆ. ಅವರ ವಚನಗಳೇ ನಮಗೆ ಆಧಾರ ಆಗಿವೆ. ಆದ್ದರಿಂದ ಅದನ್ನು ತಿರುಚುವ ಪ್ರಯತ್ನ ಆಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ವಾಸ್ತವ ವಿಚಾರಗಳನ್ನು ಪಠ್ಯದಲ್ಲಿ ಪ್ರಕಟಿಸುವುದು ಒಳ್ಳೆಯದು. ಪಠ್ಯ ಪುಸ್ತಕ ವಿವಾದ ಬೆಳಸಬಾರದು ಎಂದು ಹೇಳಿದರು.

ರೋಹಿತ್ ಚಕ್ರತೀರ್ಥರಿಂದ ಗಡೀಪಾರು ಮಾಡುವಂಥ ಅಪರಾಧ ಆಗಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರರೋಹಿತ್ ಚಕ್ರತೀರ್ಥರಿಂದ ಗಡೀಪಾರು ಮಾಡುವಂಥ ಅಪರಾಧ ಆಗಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಪಠ್ಯ ಪುಸ್ತಕದ ವಿವಾದ ದಿನ ಕಳೆದಂತೆ ಬೇರೆಯದ್ದೇ ಸ್ವರೂಪ ಪಡೆಯುತ್ತಿದೆ. ಈಗಾಗಲೇ ಬಹಳಷ್ಟು ತಿರುವು ಪಡೆದುಕೊಂಡಿದೆ. ಯಾವುದೇ ಕಾರಣದಿಂದ ಇಂತಹ ವಾತಾವರಣ ಸೃಷ್ಟಿಯಾಗಬಾರದು. ಮಕ್ಕಳಿಗೆ ಏನೇ ವಿಷಯ ಬೋಧನೆ ಮಾಡಿದರೂ ನೈತಿಕ ಶಿಕ್ಷಣ ಅತ್ಯಂತ ಮುಖ್ಯ ಎಂದು ಸಿದ್ದಗಂಗಾ ಸ್ವಾಮೀಜಿ ತಿಳಿಸಿದರು‌.

Dont Distort Basavanna Vachana, says Siddaganga Mutt Seer to Govt

ಪಠ್ಯ ಪುಸ್ತಕದಲ್ಲಿ ನೈತಿಕ ಕೊರತೆ ಹೆಚ್ಚು ಕಾಣುತ್ತಿದೆ. ಮೂಲ ವಿಚಾರವನ್ನು ತಿದ್ದದೇ ವಾಸ್ತವ ವಿಚಾರದ ಬಗ್ಗೆ ತಿಳಿಸುವ ಕಾರ್ಯ ಮಾಡಬೇಕು. ವಾದ, ವಿವಾದಗಳು ಪೂರ್ಣಗೊಂಡು ಶಾಂತಿ ವಾತಾವರಣ ನಿರ್ಮಾಣ ಆಗಬೇಕು. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಉಂಟಾಗಬೇಕು ಎಂದು ಹೇಳಿದರು.

ಪಠ್ಯದಿಂದ ಅಧ್ಯಾಯ ಕೈಬಿಡಿ ಅಭಿಯಾನ ಕಾಂಗ್ರೆಸ್ ಉಪಕೃತರ ನಾಟಕ: ಪ್ರತಾಪ್ ಸಿಂಹಪಠ್ಯದಿಂದ ಅಧ್ಯಾಯ ಕೈಬಿಡಿ ಅಭಿಯಾನ ಕಾಂಗ್ರೆಸ್ ಉಪಕೃತರ ನಾಟಕ: ಪ್ರತಾಪ್ ಸಿಂಹ

ಬಸವಣ್ಣನವರು ಸಮಾಜಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಮಾನವ ಬದುಕಿಗೆ ಬೇಕಾದ ತತ್ಚವನ್ನು ಕೊಟ್ಟಿರುವುದು ಮುಖ್ಯ. ನಮ್ಮನ್ನು ನಾವು ತಿದ್ದಿಕೊಳ್ಳುವ ಪ್ರಯತ್ನ ಮಾಡಿದರೆ ಅದು ಬಸವಣ್ಣನವರಿಗೆ ಕೊಟ್ಟ ಗೌರವ ಆಗುತ್ತದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

Dont Distort Basavanna Vachana, says Siddaganga Mutt Seer to Govt

ಚಕ್ರತೀರ್ಥ ವಿರುದ್ಧ ಕಿಡಿ ಕಾರಿದ್ದ ಸ್ವಾಮೀಜಿಗಳು:
ನಾಡಗೀತೆಗೆ ಅವಮಾನ ಮಾಡಿದ್ದಾರೆಂದು ಪಠ್ಯಪುಸ್ತಕ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಮತ್ತು ಅವರ ನೇತೃತ್ವದ ಸಮಿತಿಯನ್ನು ರದ್ದುಗೊಳಿಸಬೇಕೆಂದು ಮೆಣಸೂರು ಬಸವ ಕೇಂದ್ರದ ಬಸವಯೋಗಿ ಸ್ವಾಮೀಜಿ ಮತ್ತು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಒತ್ತಾಯಿಸಿದ್ದರು.

Recommended Video

ಬೃಹತ್ ಗಾತ್ರದ ಕಾಳಿಂಗ ಸೆರೆ :ಕಾಳಿಂಗ ಸರ್ಪಕ್ಕೆ ಹೆದರುತ್ತಿದ್ದ ಜನರು ಈಗ ನಿರಾಳ | Oneindia Kannada

ರಾಷ್ಟ್ರಕವಿ ಕುಪೆಂಪು ಬರೆದಿರುವ ನಾಡಗೀತೆಯನ್ನು ತಿರುಚಿ ಬರೆದಿದ್ದ ಗೀತೆಯನ್ನು ಚಕ್ರತೀರ್ಥ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ದೊಡ್ಡ ವಿವಾದವಾಗಿತ್ತು. ಒಕ್ಕಲಿಗ ಸಮೂದಾಯ ಕುವೆಂಪುಗೆ ಅವಮಾನ ಮಾಡಿದ್ದಾರೆಂದು ರೋಹಿತ್ ವಿರುದ್ಧ ಪ್ರತಿಭಟನೆ ಮಾಡಿ ಆಕ್ರೋಶವ್ಯಕ್ತಪಡಿಸಿದ್ದರು.

(ಒನ್ಇಂಡಿಯಾ ಸುದ್ದಿ)

English summary
Tumakuru Siddaganga Mutt Seer's reaction about recent controversy over textbook revision, says don't try to distort Basavanna Vachana. Basavanna' teachings are needed for everyone in the society, says Siddalinga Swamiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X