ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋ ಚಾಲಕರಾಗಿದ್ದ ವೈದ್ಯ ಕೊಪ್ಪಳಕ್ಕೆ ವರ್ಗಾವಣೆ

|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 10 : ಜೀವನ ನಿರ್ವಹಣೆಗಾಗಿ ದಾವಣಗೆರೆ ನಗರದಲ್ಲಿ ಆಟೋ ಓಡುಸುತ್ತಿದ್ದ ಡಾ. ರವೀಂದ್ರನಾಥ್ ಎಂ. ಎಚ್. ಅವರನ್ನು ಕೊಪ್ಫಳದ ಕುಟುಂಬ ಕಲ್ಯಾಣಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

ಡಾ. ರವೀಂದ್ರನಾಥ್ ಎಂ. ಎಚ್. ಪರವಾಗಿ ಕೆಎಟಿ ತೀರ್ಪು ನೀಡಿದರೂ ಅವರಿಗೆ ಹುದ್ದೆಯನ್ನು ನೀಡಿರಲಿಲ್ಲ. ಇದರಿಂದ ಬೇಸತ್ತ ಅವರು ಜೀವನ ನಿರ್ವಹಣೆ ಮಾಡಲು ದಾವಣಗೆರೆ ನಗರದಲ್ಲಿ ಆಟೋ ಓಡಿಸುತ್ತಿದ್ದರು.

ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಈಗ ಆಟೋ ಚಾಲಕಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಈಗ ಆಟೋ ಚಾಲಕ

ವೈದ್ಯರು ಆಟೋ ಓಡಿಸುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿರುವ ಕರ್ನಾಟಕ ಸರ್ಕಾರ ಅವರನ್ನು ಕೊಪ್ಪಳಕ್ಕೆ ವರ್ಗಾವಣೆ ಮಾಡಿದೆ. ಎರಡು ದಿನದಲ್ಲಿ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ವೈದ್ಯ ರವೀಂದ್ರನಾಥ್ ಮಾಡಿರುವ ಆರೋಪ ತಳ್ಳಿಹಾಕಿದ ಬಳ್ಳಾರಿ ಜಿಲ್ಲಾಧಿಕಾರಿವೈದ್ಯ ರವೀಂದ್ರನಾಥ್ ಮಾಡಿರುವ ಆರೋಪ ತಳ್ಳಿಹಾಕಿದ ಬಳ್ಳಾರಿ ಜಿಲ್ಲಾಧಿಕಾರಿ

'ಐಎಎಸ್ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ' ಎಂದು ಆಟೋ ಮೇಲೆ ಬರೆಸಿಕೊಂಡು ದಾವಣಗೆರೆಯಲ್ಲಿ ಡಾ. ರವೀಂದ್ರನಾಥ್ ಎಂ. ಎಚ್. ಆಟೋ ಓಡಿಸುತ್ತಿದ್ದರು. ಖಾಸಗಿ ಫೈನಾನ್ಸ್‌ನಲ್ಲಿ ಸಾಲ ಮಾಡಿ ಆಟೋ ಖರೀದಿಸಿದ್ದರು.

ಕೊವಿಡ್ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ ಚಾಲಕನಾದ ವೈದ್ಯಕೊವಿಡ್ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ ಚಾಲಕನಾದ ವೈದ್ಯ

24 ವರ್ಷ ಕೆಲಸ ಮಾಡಿದ್ದರು

24 ವರ್ಷ ಕೆಲಸ ಮಾಡಿದ್ದರು

ಆರೋಗ್ಯ ಇಲಾಖೆಯಲ್ಲಿ ಡಾ. ರವೀಂದ್ರನಾಥ್ ಎಂ. ಎಚ್. 24 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಬಳ್ಳಾರಿಯಲ್ಲಿ ಕೆಲಸ ಮಾಡುವ ವೇಳೆ ಅವರನ್ನು ಅಮಾತನು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಕೆಎಟಿ ಮೊರೆ ಹೋಗಿದ್ದರು. ಇವರ ಪರವಾಗಿಯೇ ತೀರ್ಪು ಬಂದರೂ ಸರ್ಕಾರ ಹುದ್ದೆಯನ್ನು ನೀಡಿರಲಿಲ್ಲ.

ಆಟೋ ಓಡಿಸಲು ಆರಂಭ

ಆಟೋ ಓಡಿಸಲು ಆರಂಭ

ಡಾ. ರವೀಂದ್ರನಾಥ್ ಎಂ. ಎಚ್. ಅವರಿಗೆ ಇಲಾಖೆಯ ಐಎಎಸ್ ಅಧಿಕಾರಿಗಳ ಕಾರಣದಿಂದಾಗಿ ಹುದ್ದೆ ಸಿಕ್ಕಿರಲಿಲ್ಲ. ಆದ್ದರಿಂದ, ಅವರು 'ಐಎಎಸ್ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ' ಎಂದು ಆಟೋ ಮೇಲೆ ಬರೆಸಿಕೊಂಡು ದಾವಣಗೆರೆಯಲ್ಲಿ ಜೀವನ ನಿರ್ವಹಣೆಗಾಗಿ ಆಟೋ ಓಡಿಸುತ್ತಿದ್ದರು.

ಕೊರೊನಾ ಕಾಲದಲ್ಲಿ ಕೆಲಸ ಇಲ್ಲ

ಕೊರೊನಾ ಕಾಲದಲ್ಲಿ ಕೆಲಸ ಇಲ್ಲ

ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ, ಬಳ್ಳಾರಿಯಲ್ಲಿ ಲಸಿಖಾಧಿಕಾರಿಯಾಗಿದ್ದ ವೇಳೆ ಟೆಂಡರ್ ಟೆಕ್ನಿಕಲ್ ಬಿಡ್ ಇವಾಲ್ಯುಯೇಷನ್ ಸಂಬಂಧ ದಾಖಲೆ ಇಲ್ಲ ಎಂಬ ಕಾರಣಕ್ಕೆ ಅಮಾನತುಗೊಂಡಿದ್ದ ಡಾ.ರವೀಂದ್ರನಾಥ್ ಎಂ. ಎಚ್. ಅವರಿಗೆ ಹುದ್ದೆಯನ್ನೇ ನೀಡಿರಲಿಲ್ಲ.

Recommended Video

RCB ತಂಡದಲ್ಲಿ ಈ ಬಾರಿ playing 11ನಲ್ಲಿ ಯಾರೆಲ್ಲಾ ಇರ್ತಾರೆ ? | Oneindia Kannada
ಖುಷಿಯಿಂದ ಕೆಲಸ ಮಾಡುವೆ

ಖುಷಿಯಿಂದ ಕೆಲಸ ಮಾಡುವೆ

ಕೊಪ್ಪಳಕ್ಕೆ ವರ್ಗಾವಣೆಗೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಾ.ರವೀಂದ್ರನಾಥ್ ಎಂ. ಎಚ್. "ಕೋವಿಡ್ ಕಾಲದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಈಗ ಸಂತಸವಾಗಿದೆ, ಬದ್ಧತೆಯಿಂದ ಕೆಲಸ ಮಾಡಿ ಒಳ್ಳೆಯ ಹೆಸರುಗಳಿಸುತ್ತೇನೆ. ಆಟೋವನ್ನು ಬಡ ರಿಕ್ಷಾ ಚಾಲಕನಿಗೆ ನೀಡುವೆ. ಡೌನ್ ಪೇಮೆಂಟ್ ಕಟ್ಟಿದ್ದಾಗಿದೆ. ಕಂತು ಕಟ್ಟಬೇಕಷ್ಟೇ" ಎಂದು ಹೇಳಿದ್ದಾರೆ.

ಆರೋಗ್ಯ ಸಚಿವರ ಸೂಚನೆ

ವೈದ್ಯರು ಆಟೋ ಓಡಿಸುತ್ತಿರುವ ಸುದ್ದಿ ಪ್ರಕಟವಾದ ಬಳಿಕ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಸೂಚನೆ ಕೊಟ್ಟಿದ್ದರು.

English summary
Doctor turned auto driver at Davanagere, Karnataka. Government now posted Dr Ravindranath M.H. to Koppal district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X