• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂಜೆಕ್ಷನ್ ಕೊಟ್ಟು ವೈದ್ಯನಿಂದ ಪತ್ನಿ ಹತ್ಯೆ; ಪೊಲೀಸರ ಸ್ಪಷ್ಟನೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 27; ಹೈಡೋಸ್ ಇಂಜೆಕ್ಷನ್ ಕೊಟ್ಟು ವೈದ್ಯನೊಬ್ಬ ತನ್ನಪತ್ನಿಯನ್ನು ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ ಆಗಿಲ್ಲ. ಈ ಬಗ್ಗೆ ತಪ್ಪಾಗಿ ವರದಿ ಮಾಡಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಇದೊಂದು ಹೈಪ್ರೊಫೈಲ್ ಪ್ರಕರಣ. ನ್ಯಾಮತಿ ತಾಲೂಕಿನ ಬೆಳಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಚನ್ನೇಶಪ್ಪನನ್ನು ಹೈಡೋಸ್ ಇಂಜೆಕ್ಷನ್ ಕೊಟ್ಟು ಪತ್ನಿ ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಚಾರ್ಜ್ ಶೀಟ್ ಸಲ್ಲಿಸಿಲ್ಲ" ಎಂದರು.

ಅಬ್ಬಬ್ಬಾ..ಮಗುವಿನ ಚಿಕಿತ್ಸೆಗೆ 16 ಕೋಟಿಯ ಇಂಜೆಕ್ಷನ್: ಏನಿದು ಕಾಯಿಲೆ?ಅಬ್ಬಬ್ಬಾ..ಮಗುವಿನ ಚಿಕಿತ್ಸೆಗೆ 16 ಕೋಟಿಯ ಇಂಜೆಕ್ಷನ್: ಏನಿದು ಕಾಯಿಲೆ?

"36 ವರ್ಷದ ಶಿಲ್ಪಾರನ್ನು ಓವರ್ ಡೋಸ್ ಇಂಜೆಕ್ಷನ್ ನೀಡಿ ಸಾಯಿಸಲಾಗಿದೆ ಎಂದು ಆಕೆ ತಂದೆ ಚಂದ್ರಪ್ಪ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಚಾರ್ಜ್ ಶೀಟ್ ಸಲ್ಲಿಸುವುದು ಇನ್ನು ಬಾಕಿ ಇದೆ. ತನಿಖೆಯ ದೃಷ್ಟಿಯಿಂದ ಫೊರೆನ್ಸಿಕ್ ಹಾಗೂ ಎಫ್‌ಎಸ್‌ಎಲ್ ವರದಿಯ ಮಾಹಿತಿ ಬಹಿರಂಗಪಡಿಸಲಾಗದು. ತನಿಖೆ ಮುಂದುವರಿದಿದ್ದು, ವರದಿ ಆಧರಿಸಿ ಮುಂದಿನ ಕ್ರಮ ತೆಗೆದು ಕೊಳ್ಳಲಾಗುವುದು" ಎಂದು ತಿಳಿಸಿದರು.

ಪ್ರಸಿದ್ಧ ಆಯುರ್ವೇದ ವೈದ್ಯ ಪಿ.ಕೆ. ವಾರಿಯರ್ ನಿಧನಪ್ರಸಿದ್ಧ ಆಯುರ್ವೇದ ವೈದ್ಯ ಪಿ.ಕೆ. ವಾರಿಯರ್ ನಿಧನ

ಘಟನೆ ಹಿನ್ನಲೆ ಏನು?; ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದ ಚನ್ನೇಶಪ್ಪ 18 ವರ್ಷಗಳ ಹಿಂದೆ ಹಾವೇರಿ ಜಿಲ್ಲೆಯ ಹಿರೇಕೆರೂರಿನ ಶಿಲ್ಪಾ ಜೊತೆ ವಿವಾಹವಾಗಿದ್ದರು. ಮದುವೆ ವೇಳೆ 700 ಗ್ರಾಂ ಬಂಗಾರ, 1 ಕೆಜಿ ಬೆಳ್ಳಿ, 7 ಲಕ್ಷ ನಗದು ವರದಕ್ಷಿಣೆ ರೂಪದಲ್ಲಿ ಕೊಡಲಾಗಿತ್ತು.

ದಾವಣಗೆರೆ ಮೇಯರ್ ಕಾರಿಗೆ ಸಿನಿಮಾ ಸ್ಟೈಲ್‌ನಲ್ಲಿ ಬೈಕ್ ಡಿಕ್ಕಿ: ಹೆಲ್ಮೆಟ್ ಉಳಿಸಿತು ಪ್ರಾಣ! ದಾವಣಗೆರೆ ಮೇಯರ್ ಕಾರಿಗೆ ಸಿನಿಮಾ ಸ್ಟೈಲ್‌ನಲ್ಲಿ ಬೈಕ್ ಡಿಕ್ಕಿ: ಹೆಲ್ಮೆಟ್ ಉಳಿಸಿತು ಪ್ರಾಣ!

ಹಣಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದ ಚನ್ನೇಶಪ್ಪ ಜೂಜಾಟ, ಮಾಟ, ಮಂತ್ರ, ವಾಮಾಚಾರ ಹಾಗೂ ಕುಡಿತದ ದಾಸನಾಗಿದ್ದ. ಇದಕ್ಕೆ ಕುಟುಂಬದಲ್ಲಿ ಆಗಾಗ ಜಗಳ ಆಗುತಿತ್ತು. ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ. ಚನ್ನೇಶಪ್ಪ ಕಳೆದ 9 ತಿಂಗಳ ಹಿಂದೆ ತನ್ನ ಚಾಣಾಕ್ಷತನ ಬಳಸಿ ಶಿಲ್ಪಾಳ ಕಥೆ ಮುಗಿಸಿದ್ದ. 2021ರ ಫೆಬ್ರವರಿ 11ರಂದು ಪತ್ನಿ ಶಿಲ್ಪಾಳಿಗೆ ಹೈಡೋಸ್ ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ್ದ.

ಶಿಲ್ಪಾ ಪೋಷಕರಿಗೆ ಫೋನ್ ಮಾಡಿ ಶಿಲ್ಪಾ ಸಾವನ್ನಪ್ಪಿದ್ದಾಳೆ ಬನ್ನಿ ಎಂದು ಚನ್ನೇಶಪ್ಪ ಮಾಹಿತಿ ತಿಳಿಸಿದ್ದ. ಈ ವೇಳೆ ಸ್ಥಳಕ್ಕೆ ಹೋಗಿ ನೋಡಿದಾಗ ಶಿಲ್ಪಾ ಭುಜದ ಮೇಲೆ ಇಂಜೆಕ್ಷನ್‌ ಚುಚ್ಚಿದ ಗುರುತು ಕಂಡುಬಂದಿತ್ತು. ಆಗ ಚನ್ನೇಶಪ್ಪ ಶಿಲ್ಪಾಗೆ ಲೋ ಬಿಪಿ ಆಗಿತ್ತು. ಹಾಗಾಗಿ ನಾನೇ ಇಂಜೆಕ್ಷನ್ ಕೊಟ್ಟೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದ.

ಆದರೆ ಶಿಲ್ಪಾ ತಂದೆ ಚಂದ್ರಪ್ಪ ಚನ್ನೇಶಪ್ಪ ಮಗಳನ್ನು ಕೊಲೆ ಮಾಡಿದ್ದು, ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು. ಅಪ್ಪನು ಅಮ್ಮನಿಗೆ ಇಂಜೆಕ್ಷನ್ ಕೊಡುತ್ತಿದ್ದರು. ಆಗಾಗ ಜಗಳ ಆಗುತ್ತಿತ್ತು. ಮಾತ್ರವಲ್ಲ, ಬೈಯುತ್ತಿದ್ದ ಎಂದು ಮಕ್ಕಳೇ ಹೇಳಿದ್ದಾರೆ. ಓವರ್ ಡೋಸ್ ಇಂಜೆಕ್ಷನ್ ಕೊಟ್ಟು ಕೊಂದಿದ್ದು, ಬಂಧಿಸಬೇಕು. ಈ ಬಗ್ಗೆ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದರು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ; 9 ತಿಂಗಳ ಹಿಂದೆ ಈ ಘಟನೆ ನಡೆದಿದ್ದರೂ ಜಮೀನು ಸಾಕಷ್ಟು ಇದ್ದ ಕಾರಣ ಮಕ್ಕಳ ಹೆಸರಿಗೆ ಬರೆಯುವುದಾಗಿ ಚನ್ನೇಶಪ್ಪ ಹೇಳಿದ್ದ. ಇದಕ್ಕೆ ಮೃತ ಶಿಲ್ಪಾ ಪೋಷಕರು ಒಪ್ಪಿದ್ದರು. ಆದರೆ ಈತ ಕುಡಿದು ಹಣವನ್ನೆಲ್ಲಾ ಖರ್ಚು ಮಾಡಿ ಮಕ್ಕಳಿಗೆ ಆಸ್ತಿ ಕೊಡಲ್ಲ ಎಂದು ಹೇಳಿದ್ದ. ಶಿಲ್ಪಾ ಸತ್ತಾಗ ಆಕೆಯ ಮೃತದೇಹವನ್ನು ಮಣ್ಣು ಮಾಡದೇ ಸುಟ್ಟು ಹಾಕಿದ್ದ. ಹಾಗಾಗಿ ಪ್ರಕರಣ ಯಾರಿಗೂ ಗೊತ್ತಾಗಿರಲಿಲ್ಲ.

ಬಳಿಕ ತನ್ನ ಮಗಳ ಸಾವು ಸಹಜವಲ್ಲ, ಕೊಲೆ ಎಂಬ ದೂರು ಕೊಟ್ಟ ಬಳಿಕ ಸುಟ್ಟ ಜಾಗದಲ್ಲಿ ಸಿಕ್ಕ ಮೂಳೆಗಳನ್ನು ಫೊರೆನ್ಸಿಕ್ ಮತ್ತು ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಡಲಾಗಿತ್ತು. ಈ ವರದಿಯಲ್ಲಿ ಮೆದುಳಿನಲ್ಲಿ ರಕ್ತಸ್ರಾವವಾಗಿ ಮೃತಪಟ್ಟಿರುವುದಾಗಿ ಬಂದಿತ್ತು. ಇನ್ನು ಹೈಡೋಸ್ ಇಂಜೆಕ್ಷನ್ ಕೊಟ್ಟಿದ್ದರಿಂದಲೇ ಸಾವನ್ನಪ್ಪಿದ್ದರಾ? ಎಂಬ ಅಂತಿಮ ವರದಿ ಬರಬೇಕಿದ್ದು, ಪೊಲೀಸರು ಇದಕ್ಕಾಗಿ ಕಾಯುತ್ತಿದ್ದಾರೆ.

English summary
No charge sheet filed in the case of doctor who killed wife by injecting high doses of drugs in Davanagere district said Davanagere SP C. B. Ryshyant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X