ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಠಕ್ಕೆ ಹೋದ ಮಂತ್ರಿಗೆ ಸ್ವಾಮೀಜಿ ಬೈದು ಕಳುಹಿಸಿದ್ದಾರೆ; ಡಿಕೆಶಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 04; "ಅಧಿಕಾರಕ್ಕೋಸ್ಕರ ಸಚಿವರು ಹಾಗೂ ಶಾಸಕರು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೈಸೂರಿಗೆ ಮಂತ್ರಿಯೊಬ್ಬ ಮಠಕ್ಕೆ ಸಿಡಿ ತೋರಿಸಲು ಹೋಗಿದ್ದ. ಆ ಮಠದ ಸ್ವಾಮೀಜಿ ಸರಿಯಾಗಿಯೇ ಬೈದು ಕಳುಹಿಸಿದ್ದಾರೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.

ದಾವಣಗೆರೆಯಲ್ಲಿ ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಮೂರು ಪಕ್ಷಗಳ ಸರ್ಕಾರ ಎನ್ನುವ ಸಿ. ಪಿ. ಯೋಗೀಶ್ವರ್ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರಲ್ಲ. ನಾನು ಮತ್ತೆ ಹೇಳಬೇಕಾ?" ಎಂದು ಪ್ರಶ್ನಿಸಿದರು.

ಡಿಕೆಶಿ, ಎಚ್‌ಡಿಕೆಗೆ ಟಾಂಗ್ ನೀಡುವ ಸುಳಿವು ನೀಡಿದ ಸಚಿವ ಸಿಪಿ ಯೋಗೇಶ್ವರ್ಡಿಕೆಶಿ, ಎಚ್‌ಡಿಕೆಗೆ ಟಾಂಗ್ ನೀಡುವ ಸುಳಿವು ನೀಡಿದ ಸಚಿವ ಸಿಪಿ ಯೋಗೇಶ್ವರ್

ಮೈಸೂರಿನಲ್ಲಿ ಡಿಸಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಸಂಘರ್ಷದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿ. ಕೆ. ಶಿವಕುಮಾರ್, "ಯಥಾ ರಾಜ ತಥಾ ಪ್ರಜೆ. ಯಥಾ ರಾಜ ತಥಾ ಅಧಿಕಾರಿ‌. ಇದು ಆಡಳಿತ ಯಂತ್ರದ ಕಾರ್ಯವೈಖರಿಗೆ ಸಾಕ್ಷಿಯಾಗಿದೆ" ಎಂದರು‌.

ಮನಸ್ಸಿಗೆ ಬಹಳ ನೋವಾಗಿದೆ; ಸಚಿವ ಸಿ. ಪಿ. ಯೋಗೀಶ್ವರ್ ಮನಸ್ಸಿಗೆ ಬಹಳ ನೋವಾಗಿದೆ; ಸಚಿವ ಸಿ. ಪಿ. ಯೋಗೀಶ್ವರ್

DK Shivakumar Slams Tourism Minister CP Yogeshwar

"ಸಿಎಂ ಯಡಿಯೂರಪ್ಪ ಲಸಿಕೆ ನೀಡುವುದಕ್ಕೆ ಚಾಲನೆ ನೀಡಿದ್ದಾರೆ. ಆದರೆ ಈಗ ಆನ್‌ಲೈನ್ ನೋಂದಣಿ ಮಾಡಿಕೊಳ್ಳುವುದನ್ನೇ ನಿಲ್ಲಿಸಿದ್ದಾರೆ. ನಾನು ಕಾಂಗ್ರೆಸ್‌ನ ಯುವ ಘಟಕ, ಮಹಿಳಾ ಹಾಗೂ ಎನ್ಎಸ್‌ಯುಐ ಕಾರ್ಯಕರ್ತರಿಗೆ ಲಸಿಕೆ ನೀಡುವ ಕುರಿತಂತೆ ಪರಾಮರ್ಶೆ ನಡೆಸುವಂತೆ ಸೂಚಿಸಿದ್ದೆ. ಆಗ ಇದು ಗೊತ್ತಾಗಿದೆ. ಮುಖ್ಯ ಕಾರ್ಯದರ್ಶಿ ಇದನ್ನು ಖಚಿತಪಡಿಸಿದ್ದಾರೆ. 45 ವರ್ಷ ಮೇಲ್ಪಟ್ಟವರಿಗೆ ಹೇಗಾದರೂ ಮಾಡಿ ವ್ಯಾಕ್ಸಿನ್ ನೀಡುತ್ತೇವೆ ಎನ್ನುತ್ತಾರೆ. ಹೀಗಾದರೆ ಹೇಗೆ?" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಸಿಕೆ ವಿಷಯದಲ್ಲಿ ಜಾತಿ ರಾಜಕಾರಣ ಬೇಡ: ಸಚಿವ ಶ್ರೀರಾಮುಲುಲಸಿಕೆ ವಿಷಯದಲ್ಲಿ ಜಾತಿ ರಾಜಕಾರಣ ಬೇಡ: ಸಚಿವ ಶ್ರೀರಾಮುಲು

"ಈಗಾಗಲೇ 10 ಸಾವಿರ ಲಸಿಕೆ ತರಿಸಿರುವ ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ಕಾರ್ಯ ಶ್ಲಾಘನೀಯ. ಈಗಾಗಲೇ ಆರು ಕೋಟಿ ರೂಪಾಯಿ ಸಂದಾಯ ಮಾಡಿದ್ದಾರೆ. ಜಿಲ್ಲೆಯ ಜನರಿಗೆ ಸಹಾಯ ಮಾಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ." ಎಂದು ಹೇಳಿದರು.

"ಒಂದು ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲು ಮುಂದಾಗಿರುವ ಶಾಮನೂರು ಕುಟುಂಬ ಹೃದಯ ಶ್ರೀಮಂತಿಕೆ ಮೆರೆದಿದೆ. ರಾಜಕಾರಣಿಗಳೆಲ್ಲರೂ ಪಕ್ಷ ಭೇದ ಮರೆತು ಗೌರವ ಸಲ್ಲಿಸಬೇಕು. ಯಾವುದೋ ಒಂದು ಪಕ್ಷ, ಜಾತಿಗೆ ಸೀಮಿತವಾಗಿ ಲಸಿಕೆ ನೀಡುತ್ತಿಲ್ಲ. ರಾಜ್ಯ ಸರ್ಕಾರ ಏನು ಮಾಡುತ್ತೋ ಬಿಡುತ್ತೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತಾನಾಡುತ್ತೇನೆ" ಎಂದರು.

Recommended Video

ಶಿಲ್ಪಾ ನಾಗ್ ವಿಚಾರವಾಗಿ ಸ್ಪಷ್ಟನೆ ನೀಡಿದ ರೋಹಿಣಿ ಸಿಂಧೂರಿ | Oneindia Kannada

"ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಗುಲಾಂ ನಬಿ ಆಜಾದ್ ಆರೋಗ್ಯ ಸಂಸ್ಥೆಗಳನ್ನು ಹೊಂದಿರುವ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಿ ಜನರಿಗೆ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿದ್ದು, ಪಾಲನೆ ಮಾಡುತ್ತಿದ್ದೇವೆ. ಈ ಬಗ್ಗೆ ನಾನು ಪಕ್ಷದ ನಾಯಕರ ಜೊತೆ ಚರ್ಚೆ ನಡೆಸಿದ್ದೇನೆ. ಸರ್ಕಾರ ಲಸಿಕೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ನಾವು ಕೂಡ ಜನರ ನೆರವಿಗೆ ಕೆಲಸ ಮಾಡುತ್ತೇವೆ" ಎಂದು ಹೇಳಿದರು.

English summary
KPCC president D. K. Shivakumar hitting out the tourism minister C. P. Yogeshwarar for his recent visit to mutt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X