ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಶ್ವರಪ್ಪ ಸಿಡಿಸಿದ ಹೊಸ ಬಾಂಬ್: ಯಡಿಯೂರಪ್ಪ - ಸಿದ್ದರಾಮಯ್ಯ ತಡರಾತ್ರಿ ಭೇಟಿ ಡಿಕೆಶಿಗೆ ತಿಳಿದಿತ್ತು

|
Google Oneindia Kannada News

ದಾವಣಗೆರೆ, ಡಿ 12: "ನಮ್ಮದೇನಿದ್ದರೂ ಓಪನ್, ನಿಮ್ಮ ಹಾಗೇ ತಡರಾತ್ರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿಲ್ಲ"ಎಂದು ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಹೇಳಿದ್ದರು.

ಸಿದ್ದರಾಮಯ್ಯನವರು ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿರುವ ವಿಚಾರದ ಬಗ್ಗೆ ಗ್ರಾಮೀಣಾಭಿವೃದ್ದಿ ಖಾತೆಯ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿದ್ದಾರೆ. ಆ ಮೂಲಕ, ಇಬ್ಬರು ಹಿರಿಯ ನಾಯಕರು ಭೇಟಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ.

ನಾನು ಸಿದ್ದರಾಮಯ್ಯನವರಂತೆ ತಡರಾತ್ರಿ ಬಿಎಸ್ವೈ ಭೇಟಿಯಾಗಲಿಲ್ಲ, ನಮ್ಮದೇನಿದ್ದರೂ ಓಪನ್: ಕುಮಾರಸ್ವಾಮಿ ನಾನು ಸಿದ್ದರಾಮಯ್ಯನವರಂತೆ ತಡರಾತ್ರಿ ಬಿಎಸ್ವೈ ಭೇಟಿಯಾಗಲಿಲ್ಲ, ನಮ್ಮದೇನಿದ್ದರೂ ಓಪನ್: ಕುಮಾರಸ್ವಾಮಿ

"ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ತಡರಾತ್ರಿ ಭೇಟಿಯಾಗಿದ್ದರು. ಈ ವಿಚಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿಳಿದಿತ್ತು. ನನಗೆ ಗೊತ್ತಿರಲಿಲ್ಲ"ಎಂದು ಈಶ್ವರಪ್ಪ ಹೇಳಿದರು.

DK Shivakumar Is Aware Of Yediyurappa And Siddaramaiah Late Night Meet, Said KS Eshwarappa

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಈಶ್ವರಪ್ಪ, "ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಸುಳ್ಳು ಎನ್ನುವ ಪದಕ್ಕೆ ಇನ್ನೊಂದು ಅನ್ವರ್ಥನಾಮವೇ ಸಿದ್ದರಾಮಯ್ಯ. ನಾಯಕತ್ವ ಬದಲಾವಣೆಯ ಯಾವ ವಿಚಾರವೂ ವರಿಷ್ಠರ ಮುಂದಿಲ್ಲ"ಎಂದು ಈಶ್ವರಪ್ಪ ಸ್ಪಷ್ಟ ಪಡಿಸಿದರು.

Recommended Video

ಹೊಸ ವರುಷ ಆಚರಣೆ ಮೂಡ್ ಅಲ್ಲಿ ಇದ್ರೆ ಬ್ರೇಕ್ ಹಾಕಿ! | New Year 2021 | Oneindia Kannada

"ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆನ್ನುವ ಹಗಲು ಕನಸನ್ನು ಕಾಣುತ್ತಿದ್ದಾರೆ. ಆದರೆ, ರಾಜ್ಯದ ಜನತೆ ಮತ್ತೆ ಬಿಜೆಪಿಯನ್ನು ಆಶೀರ್ವದಿಸಲಿದ್ದಾರೆ"ಎನ್ನುವ ವಿಶ್ವಾಸದ ಮಾತನ್ನು ಈಶ್ವರಪ್ಪ ಆಡಿದ್ದಾರೆ.

"ಸಾರಿಗೆ ಸಂಸ್ಥೆಯ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿದೆ. ಆದರೆ, ಸಮಯ ಸಂದರ್ಭವನ್ನು ಅರಿತು ನೌಕರರು ಪ್ರತಿಭಟನೆ ಮಾಡಬೇಕು"ಎಂದು ಈಶ್ವರಪ್ಪ ಸಾರಿಗೆ ಸಂಸ್ಥೆಯ ನೌಕರರ ಪ್ರತಿಭಟನೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.

English summary
DK Shivakumar Is Aware Of Yediyurappa And Siddaramaiah Late Night Meet, Said KS Eshwarappa,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X