ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ ಅಪಘಾತ; ಮೃತಪಟ್ಟವರ ಕುಟುಂಬದ ಆಕ್ರೋಶಕ್ಕೆ ಕಾರಣವೇನು?

|
Google Oneindia Kannada News

ದಾವಣಗೆರೆ, ಜನವರಿ 18: ಧಾರವಾಡ ತಾಲೂಕಿನ ಇಟಿಗಟ್ಟಿ ಬಳಿ ಶುಕ್ರವಾರ ಮುಂಜಾನೆ ಟ್ರಕ್ ಮತ್ತು ಟೆಂಪೋ ಟ್ರಾವೆಲರ್ ಮುಖಾಮುಖಿ ಡಿಕ್ಕಿಯಾಗಿ 13 ಜನರು ಮೃತಪಟ್ಟರು. ಮೃತಪಟ್ಟವರೆಲ್ಲರೂ ದಾವಣಗೆರೆ ಮೂಲದವರಾಗಿದ್ದು ಸ್ನೇಹಿತೆಯರಾಗಿದ್ದರು.

ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಯಿಂದ ಗೋವಾ ಪ್ರವಾಸ ಹೊರಟಿದ್ದ 13 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಅಪಘಾತದಲ್ಲಿ ಮೃತಪಟ್ಟ ಕುಟುಂಬದವರಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದರು.

ದಾವಣಗೆರೆ; 13 ಕುಟುಂಬಗಳಿಗೆ ಆಘಾತ ತಂದ ಧಾರವಾಡದ ಅಪಘಾತದಾವಣಗೆರೆ; 13 ಕುಟುಂಬಗಳಿಗೆ ಆಘಾತ ತಂದ ಧಾರವಾಡದ ಅಪಘಾತ

ದಾವಣಗೆರೆಯ ಗುಂಡಿ ಸರ್ಕಲ್‌ನಲ್ಲಿ ಮೃತ ಸ್ನೇಹಿತೆಯರ ಗೆಳತಿಯರಾದ ಸೀಮಾ, ರಮಿತ, ಚೈತ್ರಾ, ಆಶಾ ಮುಂತಾದವರು ಕ್ಯಾಂಡಲ್ ಹಚ್ಚುವ ಮೂಲಕ ಅಗಲಿದ ಸ್ನೇಹಿತರಿಗೆ ಶ್ರದ್ದಾಂಜಲಿ ಸಲ್ಲಿಸಿದರು. ಮೃತಪಟ್ಟ ಕುಟುಂಬದವರ ಮನೆಗಳಲ್ಲಿ ಶೋಕ ಮಡುಗಟ್ಟಿದೆ.

13 ಜನರನ್ನು ಬಲಿ ಪಡೆದ ಅಪಘಾತ; ಧಾರವಾಡ ಜಿಲ್ಲಾಡಳಿತ ಕ್ರಮವೇನು? 13 ಜನರನ್ನು ಬಲಿ ಪಡೆದ ಅಪಘಾತ; ಧಾರವಾಡ ಜಿಲ್ಲಾಡಳಿತ ಕ್ರಮವೇನು?

ಧಾರವಾಡ ಜಿಲ್ಲಾಡಳಿತ ಅಪಘಾತ ನಡೆದ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ 30 ಕಿ. ಮೀ. ರಸ್ತೆ ಪರಿಶೀಲಿಸಿ ಮುಂದಿನ 72 ಗಂಟೆಗಳಲ್ಲಿ ಅಪಾಯಕಾರಿ ಸ್ಥಳ, ಸೇತುವೆ ತಿರುವು ಗುರುತಿಸಿ ಚಾಲಕರಿಗೆ ಅರಿವು ಮೂಡಿಸುವ ಫಲಕಗಳನ್ನು ಅಳವಡಿಕೆ ಮಾಡಲು ಕ್ರಮ ಕೈಗೊಂಡಿದೆ.

ಧಾರವಾಡದಲ್ಲಿ ಭೀಕರ ರಸ್ತೆ ಅಪಘಾತ; 13 ಜನರು ಸಾವು ಧಾರವಾಡದಲ್ಲಿ ಭೀಕರ ರಸ್ತೆ ಅಪಘಾತ; 13 ಜನರು ಸಾವು

ಫೇಸ್ ಬುಕ್ ವಿರುದ್ಧ ಆಕ್ರೋಶ

ಫೇಸ್ ಬುಕ್ ವಿರುದ್ಧ ಆಕ್ರೋಶ

ಇಟಿಗಟ್ಟಿ ಬಳಿ ನಡೆದ ರಸ್ತೆ ಅಪಘಾತದ ಚಿತ್ರ, ವಿಡಿಯೋಗಳು ಫೇಸ್ ಬುಕ್‌ನಲ್ಲಿ ಹರಿದಾಡುತ್ತಿವೆ. ಛಿದ್ರಗೊಂಡಿರುವ ದೇಹದ ಚಿತ್ರಗಳು ಕುಟುಂಬಸ್ಥರು ಘಟನೆ ಬಗ್ಗೆ ಪದೇ ಪದೇ ನೆನಪು ಮಾಡಿಕೊಳ್ಳುವಂತೆ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಶೇರ್ ಮಾಡುವವರ ವಿರುದ್ಧ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೀಳು ಮಟ್ಟದ ಕಮೆಂಟ್‌ಗಳು

ಕೀಳು ಮಟ್ಟದ ಕಮೆಂಟ್‌ಗಳು

ರಸ್ತೆ ಅಪಘಾತದಲ್ಲಿ ಮೃತಪಟ್ಟವರು ಗೋವಾ ಪ್ರವಾಸ ಹೊರಟಿದ್ದರು ಎಂಬ ಕಾರಣಕ್ಕೆ ಅವರ ವಿರುದ್ಧ ಕೀಳು ಮಟ್ಟದ ಕಮೆಂಟ್‌ಗಳನ್ನು ಹಾಕಲಾಗುತ್ತಿದೆ. ಇಂತಹ ಪೋಸ್ಟ್‌ಗಳನ್ನು ನೋಡಿ ಕುಟುಂಬದವರು ಆಕ್ರೋಶಗೊಂಡಿದ್ದಾರೆ. ಸಾವಿನ ದುಖಃ ಒಂದು ಕಡೆಯಾದರೆ, ಇಂತಹ ಪೋಸ್ಟ್‌ಗಳು ಕುಟುಂಬದವರಿಗೆ ನೋವು ತಂದಿವೆ.

ಒಂದು ತಿಂಗಳ ಹಿಂದೆ ಪ್ಲಾನ್ ಮಾಡಿದ್ದರು

ಒಂದು ತಿಂಗಳ ಹಿಂದೆ ಪ್ಲಾನ್ ಮಾಡಿದ್ದರು

ಬಾಲ್ಯ ಸ್ನೇಹಿತೆಯರು ಒಟ್ಟಾಗಿ ಗೋವಾ ಪ್ರವಾಸ ಹೋಗುವ ಯೋಜನೆ ಒಂದು ತಿಂಗಳ ಮೊದಲೇ ಆಗಿತ್ತು. ಆದರೆ, ಮಕ್ಕಳ ಪರೀಕ್ಷೆ ಮತ್ತು ವಿವಿಧ ಕಾರಣಗಳಿಂದಾಗಿ ಒಂದಿಬ್ಬರು ಅಂದು ಪ್ರವಾಸ ಹೊರಟಿರಲಿಲ್ಲ. ಮೃತಪಟ್ಟವರ ಮನೆಯಲ್ಲಿ ಶೋಕ ಮಡುಗಟ್ಟಿದೆ. ಅಪಘಾತದಲ್ಲಿ ಮೃತಪಟ್ಟವರಲ್ಲಿ ಮಹಿಳೆಯರೇ ಹೆಚ್ಚು, ಹಲವು ಕುಟುಂಬಗಳನ್ನು ಈ ಸಾವು ಕಂಗೆಡಿಸಿದೆ.

Recommended Video

Special Report :Karnataka-Maharashtra ಗಡಿವಿವಾದ ಬೂದಿ ಮುಚ್ಚಿದ ಕೆಂಡ- ಇದು ಇಂದು ನಿನ್ನೆಯ ವಿವಾದವಲ್ಲ..!
ಆಸ್ಪತ್ರೆಗೆ ಬೀಗ ಹಾಕಲಾಗಿದೆ

ಆಸ್ಪತ್ರೆಗೆ ಬೀಗ ಹಾಕಲಾಗಿದೆ

ಅಪಘಾತದಲ್ಲಿ ಎಂಸಿಸಿ 'ಬಿ' ಬ್ಲಾಕ್‌ನಲ್ಲಿ ಆಸ್ಪತ್ರೆ ಹೊಂದಿರುವ ಡಾ. ವೀಣಾ ಮೃತಪಟ್ಟಿದ್ದಾರೆ. ಸುಜನ್ ಉದರ ರೋಗ ಮತ್ತು ಸ್ತ್ರೀ ಆರೈಕೆ ಕೇಂದ್ರ ಬಾಗಿಲು ಮುಚ್ಚಿದೆ. ಡಾ. ವೀಣಾ ಅವರು ದಾವಣಗೆರೆ ವಿವಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಅಜ್ಜನ ಹೆಸರಿನಲ್ಲಿ ಚಿನ್ನದ ಪದಕ ನೀಡಲು 50 ಸಾವಿರ ರೂ. ದತ್ತಿಯನ್ನು ಸ್ಥಾಪಿಸಿದ್ದರು.

English summary
13 people of Davanagere killed in road accident near Ittigatti village in Dharwad. Family members of victims unhappy with social media post's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X