ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಸಿಕೆ ಪಡೆಯಲು ಬಂದವರನ್ನು ಕೈ ಮುಗಿದು ಸ್ವಾಗತಿಸಿದ ಡಿಸಿ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಏಪ್ರಿಲ್ 27; ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಜನರು‌ ಲಸಿಕೆ ಪಡೆಯಲು ಉತ್ಸಾಹ ತೋರುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನವೂ ವೇಗವಾಗಿ ಸಾಗುತ್ತಿದೆ.

ದಾವಣಗೆರೆಯ ಮೋತಿ ವೀರಪ್ಪ ಕಾಲೇಜಿನಲ್ಲಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆ ಹಾಕಲಾಯಿತು. ಲಸಿಕೆ ಹಾಕಿಸಿಕೊಳ್ಳಲು ಜನರ ದಂಡೇ ಹರಿದು ಬಂತು. ಹಿರಿಯ ನಾಗರಿಕರು ಸರತಿ ಸಾಲಿನಲ್ಲಿ ನಿಂತು ಲಸಿಕೆಯನ್ನು ಪಡೆದರು.

ದಾವಣಗೆರೆ; ಮಾರ್ಕೆಟ್‌ನಲ್ಲಿ ಕೋವಿಡ್ ನಿಯಮ ಮರೆತ ಜನ! ದಾವಣಗೆರೆ; ಮಾರ್ಕೆಟ್‌ನಲ್ಲಿ ಕೋವಿಡ್ ನಿಯಮ ಮರೆತ ಜನ!

ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಲಸಿಕೆ ನೀಡಲು ಸಕಲ ವ್ಯವಸ್ಥೆ ಮಾಡಿಕೊಂಡು ನಿತ್ಯವೂ ಕನಿಷ್ಠ 600 ರಿಂದ ಗರಿಷ್ಠ 800 ಜನರಿಗೆ ಲಸಿಕೆಯನ್ನು ಹಾಕುವ ಗುರಿ ಹೊಂದಲಾಗಿದೆ.

ದಾವಣಗೆರೆ: ವೆಂಟಿಲೇಟರ್ ಸಿಗದ ಮಹಿಳೆಗೆ ಮಾಜಿ ಸಚಿವರಿಂದ ಸಹಾಯದಾವಣಗೆರೆ: ವೆಂಟಿಲೇಟರ್ ಸಿಗದ ಮಹಿಳೆಗೆ ಮಾಜಿ ಸಚಿವರಿಂದ ಸಹಾಯ

Deputy Commissioner Welcomes People Who Come To Take Corona Vaccine

ಮೋತಿ ವೀರಪ್ಪ ಕಾಲೇಜಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಆರೋಗ್ಯಾಧಿಕಾರಿ ಡಾ. ನಾಗರಾಜ್ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದ ಹಿರಿಯ ನಾಗರಿಕನ್ನು ಕೈ ಮುಗಿದು ಸ್ವಾಗತಿಸಿದರು.

ದಾವಣಗೆರೆಯಲ್ಲಿ ವೆಂಟಿಲೇಟರ್ ಸಿಗದೆ ಒದ್ದಾಡಿದ್ದ ಕೊರೊನಾ ಸೋಂಕಿತೆ ಸಾವುದಾವಣಗೆರೆಯಲ್ಲಿ ವೆಂಟಿಲೇಟರ್ ಸಿಗದೆ ಒದ್ದಾಡಿದ್ದ ಕೊರೊನಾ ಸೋಂಕಿತೆ ಸಾವು

ಬಳಿಕ, ಲಸಿಕೆ ಹಾಕುತ್ತಿರುವುದನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪರಿಶೀಲನೆ ನಡೆಸಿದರು. ಈ ವೇಳೆ ಲಸಿಕೆ ಹಾಕಿಸಿಕೊಂಡ ಹಾಗೂ ಹಾಕಿಸಿಕೊಳ್ಳಲು ಕಾದು ಕುಳಿತ್ತಿದ್ದ ಜನರನ್ನು ಕೈ ಮುಗಿದು ಪ್ರೀತಿಯಿಂದ ಮಾತನಾಡಿಸಿ ಮಾಹಿತಿ ಪಡೆದುಕೊಂಡರು.

ಈ ಹಿಂದೆ ಪ್ರಥಮ ಹಂತದಲ್ಲಿ ನಾವೇ ಸ್ವತಃ ಲಸಿಕೆ ಹಾಕಿಸಿಕೊಂಡು ಜನರಿಗೆ ಕೈ ಮುಗಿದು ಮನವಿ ಮಾಡಿದ್ದೆವು. ಆದರೆ, ಯಾರು ಮುಂದೆ ಬರಲಿಲ್ಲ. ಇದೀಗ ಕೊರೊನಾ ಎರಡನೇ ಅಲೆ ತೀವ್ರವಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಪಾಸಿಟಿವ್ ಕೇಸ್‌ಗಳು ಸಹ ಬಂದಿವೆ.

ಹೀಗಾಗಿ, ಜನರು ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ಧಾರೆ. ಇದು ನಮಗೂ ಸಾಕಷ್ಟು ಖುಷಿ ತಂದಿದ್ದು, ನಮಗೂ ಕೆಲಸ ಮಾಡಲು ಧೈರ್ಯ ಬರುತ್ತಿದೆ. ಹೀಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಸಹಕಾರ ನೀಡಿ ಕೊರೊನಾ ನಿಯಂತ್ರಣಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.

Recommended Video

ಅಗತ್ಯ ಸಾಮಾಗ್ರಿ ಖರೀದಿ ವೇಳೆ ಜನ ದಟ್ಟಣೆ..ಕೊರೊನಾ ನಿಯಮಗಳ ಉಲ್ಲಂಘನೆ | Oneindia Kannada

ಯಾವುದೇ ಕಾರಣಕ್ಕೂ ಹೆದರಬೇಡಿ. ನಿಮ್ಮ ಜೀವವನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾದರೂ ಲಸಿಕೆಗಳನ್ನು ಹಾಕಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಜನರಲ್ಲಿ ಮನವಿ ಮಾಡಿದರು.

English summary
Davangere deputy commissioner Mahanthesh Bilagi inspeted COVID vaccination drive and welcomed the people who come to take vaccination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X