• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶೀಘ್ರದಲ್ಲೇ ದಾವಣಗೆರೆ-ಹುಬ್ಬಳ್ಳಿ ಡೆಮು ರೈಲು ಸಂಚಾರ

|
Google Oneindia Kannada News

ದಾವಣಗೆರೆ, ಮಾರ್ಚ್ 17; ಉತ್ತರ ಕರ್ನಾಟಕ ಭಾಗದ ಜನರಿಗೆ ಭಾರತೀಯ ರೈಲ್ವೆ ಸಿಹಿ ಸುದ್ದಿ ಕೊಟ್ಟಿದೆ. ದಾವಣಗೆರೆ-ಹುಬ್ಬಳ್ಳಿ ನಡುವಿನ ಡೆಮು ರೈಲು ಸಂಚಾರವನ್ನು ಆರಂಭಿಸಲು ಒಪ್ಪಿಗೆ ಸಿಕ್ಕಿದ್ದು, ವೇಳಾಪಟ್ಟಿ ಕುರಿತು ಚರ್ಚಿಸಲಾಗುತ್ತಿದೆ.

ಈ ಡೆಮು ರೈಲು ಸಂಚಾರ ಆರಂಭವಾದರೆ ದಾವಣಗೆರೆ-ಹಾವೇರಿ-ಹುಬ್ಬಳ್ಳಿ ಜನರಿಗೆ ಅನುಕೂಲವಾಗಲಿದೆ. ಪ್ರತಿನಿತ್ಯ ನಗರಗಳ ನಡುವೆ ಸಾವಿರಾರು ಜನರು ಸಂಚಾರ ನಡೆಸುತ್ತಾರೆ. ಅವರು ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ.

ಬೆಂಗಳೂರಿನಿಂದ ಹೊರಟ ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ಬೆಂಗಳೂರಿನಿಂದ ಹೊರಟ ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು

ಮೊದಲು ದಾವಣಗೆರೆ-ಹುಬ್ಬಳ್ಳಿ ನಡುವೆ ಡೆಮು ರೈಲು ಸಂಚಾರ ನಡೆಸುತ್ತಿತ್ತು. ಕೋವಿಡ್ ಲಾಕ್ ಡೌನ್ ಬಳಿಕ ರೈಲು ಸಂಚಾರ ರದ್ದಾಗಿತ್ತು. ಈಗಾಗಲೇ ರೈಲ್ವೆ ಇಲಾಖೆ ಬೆಂಗಳೂರು-ಅರಸೀಕೆರೆ ತನಕ ಡೆಮು ರೈಲನ್ನು ಓಡಿಸುತ್ತಿದೆ.

ಹಂಪಿಗೆ ಬಂದು ಮೆಟ್ರೋ ರೈಲು ಮಾದರಿ ವಾಹನ ಹಂಪಿಗೆ ಬಂದು ಮೆಟ್ರೋ ರೈಲು ಮಾದರಿ ವಾಹನ

ಈಗ ದಾವಣಗೆರೆ-ಹುಬ್ಭಳ್ಳಿ ನಡುವೆ ರೈಲು ಓಡಿಸಲು ಒಪ್ಪಿಗೆ ಸಿಕ್ಕಿದೆ. ದಾವಣಗೆರೆ ಸಂಸದ ಜಿ. ಎಂ. ಸಿದ್ದೇಶ್ವರ, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಮೂಲಕ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದ್ದರು.

ದಾವಣಗೆರೆ; ಬಾಲಭವನದಲ್ಲಿ ಕೆಲಸ ಖಾಲಿ ಇದೆ ದಾವಣಗೆರೆ; ಬಾಲಭವನದಲ್ಲಿ ಕೆಲಸ ಖಾಲಿ ಇದೆ

ಪ್ರತಿನಿತ್ಯ ಹುಬ್ಬಳ್ಳಿ-ದಾವಣಗೆರೆ ನಡುವೆ ಸಂಚಾರ ನಡೆಸುವ ಜನರಿಗೆ ಸಹ ರೈಲು ಸಂಚಾರದಿಂದ ಅನುಕೂಲವಾಗಲಿದೆ. ಡೆಮು ರೈಲು ಆರಂಭವಾದರೆ ಸುಮಾರು 150 ಕಿ. ಮೀ. ಮಾರ್ಗವನ್ನು ಕಡಿಮೆ ದರದಲ್ಲಿ ಕ್ರಮಿಸಬಹುದಾಗಿದೆ.

   ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡುವ ಪ್ರಸ್ತಾಪ ಇಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ | Oneindia Kannada

   "ರೈಲು ಸಂಚಾರದ ವೇಳಾಪಟ್ಟಿ ಕುರಿತು ಚರ್ಚಿಸಲಾಗುತ್ತಿದೆ. ಶೀಘ್ರವೇ ರೈಲು ಸಂಚಾರ ಆರಂಭಿಸಲಾಗುತ್ತದೆ" ಎಂದು ಹಾವೇರಿ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ.

   English summary
   Indian railways approved to run DEMU train between Davanagere and Hubballi. Train service suspended after announcement of lock down.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X