ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಳೆ ದಾವಣಗೆರೆ ಮೇಯರ್ ಚುನಾವಣೆ; ಇಂದು 12 ಎಂಎಲ್ಸಿಗಳಿಗೆ ನೋಟಿಸ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಫೆಬ್ರವರಿ 18: ನಾಳೆ ನಿಗದಿಯಾಗಿರುವ ದಾವಣಗೆರೆ ಮಹಾನಗರಪಾಲಿಕೆ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ 12 ಎಂಎಲ್ ಸಿ ಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಬೋಗಸ್ ವಿಳಾಸ ನೀಡಿ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಿದ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಪರಿಶೀಲನೆಯನ್ನು ಕೈಗೊಳ್ಳಲಾಗಿತ್ತು. ಮೇಯರ್ ಚುನಾವಣೆ ಉದ್ದೇಶಕ್ಕಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಎಂಎಲ್ ಸಿಗಳು ನೀಡಿದ ವಿಳಾಸದಲ್ಲಿ ಯಾರೂ ವಾಸವಾಗಿಲ್ಲದ ಕಾರಣ ನೋಟಿಸ್ ನೀಡಲಾಗಿದೆ. ಜೊತೆಗೆ ಇಂದು ಸಂಜೆ 5 ಗಂಟೆಯೊಳಗೆ ಅಗತ್ಯ ದಾಖಲೆಗಳೊಂದಿಗೆ ಇ ಮೇಲ್ ಅಥವಾ ಖುದ್ದು ಹಾಜರಾಗಲು ನೋಟಿಸ್ ನಲ್ಲಿ ತಿಳಿಸಲಾಗಿದೆ.

 ಬೋಗಸ್ ವಿಳಾಸ; ದಾವಣಗೆರೆ ಮೇಯರ್ ಎಲೆಕ್ಷನ್ ಮುಂದೂಡಿಕೆ? ಬೋಗಸ್ ವಿಳಾಸ; ದಾವಣಗೆರೆ ಮೇಯರ್ ಎಲೆಕ್ಷನ್ ಮುಂದೂಡಿಕೆ?

Dc Issued Notice To 12 Mlcs As Allegations Before Davanagere Municipal Election

ತಪ್ಪು ಮಾಡಿದ್ದು ಸಾಬೀತಾದರೆ ತಮ್ಮ ಸಮಜಾಯಿಷಿ ಏನೂ ಇಲ್ಲವೆಂದು ಪರಿಗಣಿಸಿ ಪ್ರಜಾಪ್ರತಿನಿಧಿ ಕಾಯ್ದೆಯಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ನಾಳೆ ದಾವಣಗೆರೆ ಮಹಾನಗರಪಾಲಿಕೆ ಚುನಾವಣೆ ನಿಗದಿಯಾಗಿದ್ದು, ಜಿಲ್ಲಾಡಳಿತ ಚುನಾವಣೆಗೆ ಸಕಲ ಸಜ್ಜು ಮಾಡುತ್ತಿದೆ. ಇದೀಗ ಈ ಬೆಳವಣಿಗೆ ಹಿನ್ನೆಲೆಯಲ್ಲಿ ಚುನಾವಣೆ ಬಗ್ಗೆ ಕುತೂಹಲ ಮೂಡಿದೆ.
English summary
DC Mahantesh Beelagi has issued a notice to 12 MLCs after hearing the allegations that they had filed forged documents in the voter list for the Davanagere municipal election which scheduled for tomorrow,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X