ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾವ ಶಾಮನೂರು, ಅಳಿಯ ಜಿ ಎಂ ಸಿದ್ದೇಶ್ವರ ವೇದಿಕೆಯಲ್ಲೇ ಕಿತ್ತಾಡಿಕೊಂಡಾಗ!

|
Google Oneindia Kannada News

ದಾವಣಗೆರೆ, ಮಾರ್ಚ್ 6: ಕಾಂಗ್ರೆಸ್ಸಿನ ಹಿರಿಯ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಅವರ ಅಳಿಯ, ದಾವಣಗೆರೆ ಬಿಜೆಪಿ ಸಂಸದ ಜಿ ಎಂ ಸಿದ್ದೇಶ್ವರ ವೇದಿಕೆಯಲ್ಲೇ ವಾಗ್ಯುದ್ದ ನಡೆಸಿದ ವಿದ್ಯಮಾನ ನಡೆದಿದೆ.

ಸಮಾಧಾನಕರ ಅಂಶವೇನಂದರೆ, ಇದು ಅಭಿವೃದ್ದಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಮಾತಿನ ಚಕಮಕಿಯಾಗಿತ್ತು. ಮೋದಿ ಸರಕಾರ ಅನುದಾನ ಕೊಟ್ಟಿದ್ದಾ, ರಾಜ್ಯ ಸರಕಾರ ದುಡ್ಡು ಕೊಟ್ಟಿದ್ದಾ ಎನ್ನುವ ವಿಚಾರಕ್ಕಾಗಿ ಮಾವ-ಅಳಿಯ ನಡುವೆ ಮಾತಿಗೆ ಮಾತು ಬೆಳೆದು, ಕೊನೆಗೆ ನೀವು ಕೂತ್ಕೊಳ್ಳಿ ಮಾವ ಎಂದು ಅಳಿಯ ಸಮಾಧಾನ ಪಡಿಸಿದರು.

ವೀರಶೈವರು ಈವರೆಗೆ ಬಿಬಿಎಂಪಿ ಮೇಯರ್ ಆಗಿಲ್ಲ: ಶಾಮನೂರು ಪಟ್ಟು ವೀರಶೈವರು ಈವರೆಗೆ ಬಿಬಿಎಂಪಿ ಮೇಯರ್ ಆಗಿಲ್ಲ: ಶಾಮನೂರು ಪಟ್ಟು

ದಾವಣಗೆರೆ ಹಳೇ ಬಸ್ ನಿಲ್ದಾಣ ಪುನರ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ವೇಳೆ, ನಾನು ಮತ್ತು ಎಸ್ ಎಸ್ ಮಲ್ಲಿಕಾರ್ಜುನ್ ಅವಧಿಯಲ್ಲೇ ಜಿಲ್ಲೆ ಹೆಚ್ಚಿನ ಅಭಿವೃದ್ದಿ ಕಂಡಿದ್ದು ಎನ್ನುವ ಹೇಳಿಕೆಯನ್ನು ಶಾಮನೂರು ನೀಡಿದ್ದರು.

ನಾನೇ ಖುದ್ದಾಗಿ ರಾಜ್ಯ ಸರಕಾರದ ಜೊತೆ ಚರ್ಚಿಸಿ ಕೋಟ್ಯಾಂತರ ರೂಪಾಯಿ ಅನುದಾನ ತಂದಿದ್ದೇನೆ ಎಂದು ಅಳಿಯ ಸಿದ್ದೇಶ್ವರ ಅವರತ್ತ ಮುಖ ಮಾಡಿ ಶಾಮನೂರು ಹೇಳಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಿದ್ದೇಶ್ವರ, ಅನುದಾನ ಕೊಟ್ಟಿದ್ದು ಮೋದಿಯೇ ಹೊರತು ನೀವಲ್ಲ ಎಂದರು.

ರಿಸರ್ವ್ ಬೆಟಾಲಿಯನ್ ಗೆ ಸಂಸದ ಸಿದ್ದೇಶ್ವರರಿಂದ ಮನವಿ ರಿಸರ್ವ್ ಬೆಟಾಲಿಯನ್ ಗೆ ಸಂಸದ ಸಿದ್ದೇಶ್ವರರಿಂದ ಮನವಿ

ಎಲ್ಲದಕ್ಕೂ ಮೋದಿ ಮೋದಿ ಅಂತಿಯಲ್ಲಪ್ಪಾ.. ಮೋದಿ ಕೊಟ್ಟಿದ್ದು ಇರ್ಲಿ, ನಾನು ಕೊಟ್ಟಿಲ್ಲಾ ಅಂದ್ರಲ್ಲಾ.. ನೀನೇನು ಜಿಲ್ಲೆಯ ಅಭಿವೃದ್ದಿಗೆ ಕೊಟ್ಟಿದ್ದೀಯಾ, ಅದನ್ನು ಮೊದಲು ಹೇಳು ಎಂದು ಮತ್ತೆ ಅಳಿಯ ಸಿದ್ದೇಶ್ವರ ಅವರನ್ನು ಶಾಮನೂರು ಪ್ರಶ್ನಿಸಿದ್ದಾರೆ. ಮೂರು ಬಾರಿ ಅಭಿವೃದ್ದಿ ಸಂಬಂಧದ ಸಭೆಗೆ ನಿಮ್ಮನ್ನು ಕರೆದರೂ, ನೀವು ಬಂದ್ರಾ ಎಂದು ಮತ್ತೆ ಸಿದ್ದೇಶ್ವರ, ಮಾವ ಶಾಮನೂರು ಅವರನ್ನು ಪ್ರಶ್ನಿಸಿದ್ದಾರೆ.

Davangere: Son, father-in-law fight it out over city development funds

ಇತ್ತ ವೇದಿಕೆಯಲ್ಲಿ ಮಾವ-ಅಳಿಯ ವ್ಯಾಗ್ಯುದ್ದ ನಡೆಸುತ್ತಿದ್ದರೆ, ಎದುರು ಕೂತಿದ್ದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರೂ ವಾಗ್ವಾದಕ್ಕೆ ಇಳಿದರು. ಆಗ ಸಿದ್ದೇಶ್ವರ, ಮಾವನವರೇ ನೀವು ಆರಾಮಾಗಿ ಕುಳಿತುಕೊಳ್ಳಿ ಎಂದು ಶಾಮನೂರು ಅವರನ್ನು ಕೂರಿಸಿ, ನೀವೆಲ್ಲಾ ಸುಮ್ನೆ ಇರಿ ಎಂದು ಕಾರ್ಯಕರ್ತರ ಬಾಯಿಯನ್ನೂ ಸಿದ್ದೇಶ್ವರ ಮುಚ್ಚಿಸಿದರು.

ಶಾಮನೂರು ಶಿವಶಂಕರಪ್ಪ ಅವರಿಗೆ ಡಿಸಿಎಂ ಆಫರ್ ಕೊಟ್ಟಿತ್ತಂತೆ ಬಿಜೆಪಿ ಶಾಮನೂರು ಶಿವಶಂಕರಪ್ಪ ಅವರಿಗೆ ಡಿಸಿಎಂ ಆಫರ್ ಕೊಟ್ಟಿತ್ತಂತೆ ಬಿಜೆಪಿ

ಎರಡು ವರ್ಷಗಳ ಹಿಂದೆ, ಸ್ಮಾರ್ಟ್ ಸಿಟಿ ಯೋಜನೆಯ ಕ್ರೆಡಿಟ್ ಯಾರಿಗೆ ಹೋಗಬೇಕು ಎನ್ನುವ ವಿಚಾರದಲ್ಲೂ ಮಾವ-ಅಳಿಯ, ಸಾರ್ವಜನಿಕವಾಗಿ ಜಗಳವಾಡಿಕೊಂಡಿದ್ದರು.

English summary
Davangere: Son-in-law (GM Siddeshwara, BJP MP from Davangere) and father-in-law (Shamanuru Shivashankarappa, Senior Congress leader and MLA) fight it out over city development funds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X