ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಯನ್ಮಾರ್ ಮಹಿಳೆಯ ಜೀವ ಉಳಿಸಿತು ದಾವಣಗೆರೆ ವ್ಯಕ್ತಿಯ ವಿರಳ ರಕ್ತ

|
Google Oneindia Kannada News

ದಾವಣಗೆರೆ, ಡಿಸೆಂಬರ್ 3: ದಾವಣಗೆರೆ ವ್ಯಕ್ತಿಯ ರಕ್ತ ಮಯನ್ಮಾರ್‌ನ ಮಹಿಳೆಯ ಜೀವ ಉಳಿಸಿದೆ. ಬಾಂಬೆ ಬ್ಲಡ್ ಗ್ರೂಪ್‌ನ ವಿಶೇಷ ರಕ್ತವನ್ನು ನೀಡಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ.

ದಾವಣಗೆರೆ ರಕ್ತ ನಿಧಿಯಲ್ಲಿ ಸಂಗ್ರಹಿಸಿಟ್ಟಿದ್ದ ಅತಿ ವಿರಳವಾದ 'ಬಾಂಬೆ ಬ್ಲಡ್' ಗುಂಪಿನ ಎರಡು ಯುನಿಟ್ ರಕ್ತ ಕೊರಿಯರ್ ಮೂಲಕ ಕಳುಹಿಸಿ ದೂರದ ಮಯನ್ಮಾರ್ ದೇಶದಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 34 ವರ್ಷದ ಮಹಿಳೆಯ ಜೀವ ಉಳಿಸಿದೆ.

ದಾವಣಗೆರೆಯಲ್ಲಿ ಈ ರಕ್ತವಿರುವ ಮಾಹಿತಿ ತಿಳಿದ ಮಯನ್ಮಾರ್ ದೇಶದ ವೈದ್ಯರು ದಾವಣಗೆರೆಯ ಸಂಸ್ಥೆಯೊಂದನ್ನು ಸಂಪರ್ಕಿಸಿದ್ದರು. ಬಳಿಕ ದಾವಣಗೆರೆಯ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಾಧಿಕಾರಿ ಸಹಕಾರದಿಂದ ರಕ್ತ ಪಡೆದುಕೊಳ್ಳಲಾಯಿತು.

Davangere mans blood save Myanmar lady

ರಕ್ತದ ಮಾದರಿ ಪರೀಕ್ಷೆ ಬಳಿಕ ಮುಂಬೈ ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನೋ-ಹೆಮಟಾಲಜಿ ವತಿಯಿಂದ ವಿದೇಶಕ್ಕೆ ರಕ್ತ ರವಾನೆ ಮಾಡಲು ಅನುಮತಿ ಪಡೆದುಕೊಳ್ಳಲಾಯಿತು.

ಮಯನ್ಮಾರ್‌ಗೆ ರವಾನೆಯಾಗಿರುವ ರಕ್ತವನ್ನು ಇತ್ತೀಚೆಗೆ ನಡೆಸಿದ್ದ ರಕ್ತದಾನ ಶಿಬಿರದಲ್ಲಿ ಪಡೆದುಕೊಳ್ಳಲಾಗಿತ್ತು ಹಾಗಾಗಿ ದಾನಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಬಾಂಬೆ ಬ್ಲಡ್ ಗುಂಪಿನ ರಕ್ತ ಸಾಕಷ್ಟು ಮಂದಿಗೆ ತಿಳಿದಿಲ್ಲ. ಸುಮಾರು 18 ಸಾವಿರ ಮಂದಿಯಲ್ಲಿ ಒಬ್ಬರಿಗೆ ಈ ಗುಂಪಿನ ರಕ್ತವಿರುತ್ತದೆ. ಇಡೀ ದೇಶದಲ್ಲಿ ಸುಮಾರು 200-250 ಮಂದಿ ಮಾತ್ರ ಈ ಗುಂಪಿನ ರಕ್ತವನ್ನು ಹೊಂದಿದ್ದಾರೆ.

ಹಾಗಾದರೆ ಬಾಂಬೆ ಬ್ಲಡ್ ಎಂದರೇನು? ಬಾಂಬೆ ಬ್ಲಡ್ ಎನ್ನುವುದು ಮುಂಬೈ ಪ್ರಾಂತ್ಯದ ಜನರಲ್ಲಿ ವಿಶೇಷವಾಗಿ ಕಂಡುಬರುವ ಒಂದು ರಕ್ತದ ಮಾದರಿ, ಇದನ್ನು 1952ರಲ್ಲಿ ಮುಂಬೈನ್ ತಜ್ಞ ಡಾ. ವೈ.ಆರ್. ಬೇಂಡೆ ಪತ್ತೆ ಹಚ್ಚಿದರು.

English summary
Two units of the rare Bombay Blood Group, stored in a Davanagere blood bank, has travelled miles to Myanmar via a courier and saved the life of a 34-year-old woman who underwent a heart surgery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X