ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ಅಪ್ಪು ಪ್ರೇರಣೆ, ನೇತ್ರದಾನಕ್ಕೆ ಸಹಿ ಹಾಕಿದ ಗ್ರಾಮಸ್ಥರು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ ನವೆಂಬರ್ 7: ಚಂದನವನದ ಚಂದದ ಅಪ್ಪು ಅಗಲಿ ಒಂದು ವಾರವೇ ಕಳೆದು ಹೋಗಿದೆ. ಆದರೂ ಪುನೀತ್ ರಾಜುಕುಮಾರ್ ಇನ್ನಿಲ್ಲ ಅನ್ನೋದನ್ನ ಯಾರಿಂದಲೂ ಅರಗಿಸಿಕೊಳ್ಲಲು ಸಾಧ್ಯವಾಗುತ್ತಿಲ್ಲ. ದೊಡ್ಮನೆಯ ಕಿರಿಯ ಮಗನನ್ನು ನೆನೆದರೆ ಇಂದಿಗೂ ಕರುನಾಡಿನ ಜನತೆಯ ಕಣ್ಣುಗಳು ಒದ್ದೆಯಾಗುತ್ತವೆ. ಮನೆ ಮಂದಿಯನ್ನೇ ಕಳೆದುಕೊಂಡಷ್ಟು ದು:ಖ ವ್ಯಕ್ತವಾಗುತ್ತದೆ. ತಂದೆಯ ಮಾರ್ಗದಲ್ಲಿ ನಡೆದ ಅಪ್ಪು ಸದ್ಯ ಅಭಿಮಾನಿಗಳಿಗೆ ದಾರಿ ದೀಪವಾಗಿದ್ದಾರೆ. ಅವರ ಆದರ್ಶನಗಳನ್ನು ಪಾಲಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಮಾತ್ರವಲ್ಲದೆ ನಾಲ್ವರಿಗೆ ಜೀವನ ನೀಡಿದ ನೆಚ್ಚಿನ ನಟನಂತೆ ನೇತ್ರದಾನ ಮಾಡಲು ಮುಂದಾಗಿದ್ದಾರೆ.

ಹೌದು.. ಸ್ಯಾಂಡಲ್‌ವುಡ್ ನಲ್ಲಿ ನೃತ್ಯ, ಹಾಡು, ಅಭಿನಯದ ಮೂಲಕ ಸಾವಿರಾರು ಅಭಿಮಾನಿ ಬಳಗವನ್ನು ಹೊಂದಿದ ಪುನೀತ್ ರಾಜುಕುಮಾರ್ ಇಂದಿಗೂ ಅಜಾರಮರ. ಯಾಕೆಂದರೆ ಅಪ್ಪು ಮೇಲೆ ಅಪಾರ ಅಭಿಮಾನ ಪ್ರೀತಿ ಇಟ್ಟುಕೊಂಡಿದ್ದ ಗ್ರಾಮವೊಂದರ ಜನ ನೇತ್ರದಾನಕ್ಕಾಗಿ ಮುಂದಾಗಿದ್ದಾರೆ. ಪುನೀತ್ ರಾಜುಕುಮಾರ್ ಅವರು ಕಣ್ಣುಗಳನ್ನು ದಾನ ಮಾಡಿದಂತೆ ತಾವುಗಳು ದಾನ ಮಾಡುವ ಸಂಕಲ್ಪ ತೊಟ್ಟಿದ್ದಾರೆ.

ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿ ತಾಂಡಾದ ಗ್ರಾಮಸ್ಥರು ಈ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ. 60ಕ್ಕೂ ಹೆಚ್ಚು ಮಂದಿ ಪತ್ರಕ್ಕೆ ಸಹಿ ಹಾಕುವ ಮೂಲಕ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ. ಇವರ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಚಿತ್ರದುರ್ಗದ ಮುರುಘಾಮಠದಿಂದ ನಟ ಪುನೀತ್ ರಾಜಕುಮಾರ್ ರಿಗೆ ಬಸವಶ್ರೀ ಪ್ರಶಸ್ತಿ ಚಿತ್ರದುರ್ಗದ ಮುರುಘಾಮಠದಿಂದ ನಟ ಪುನೀತ್ ರಾಜಕುಮಾರ್ ರಿಗೆ ಬಸವಶ್ರೀ ಪ್ರಶಸ್ತಿ

ಸಾವಿನಲ್ಲೂ ಸಾರ್ಥಕತೆಯನ್ನು ನಟ ಪುನೀತ್ ರಾಜ್ ಕುಮಾರ್ ಮೆರೆದಿದ್ದಾರೆ. ಅವರಿಂದಾಗಿ ನಾಲ್ವರು ಜಗತ್ತನ್ನು ಇಂದು ನೋಡುವಂತಾಗಿದೆ. ಪುನೀತ್ ರಾಜ್ ಕುಮಾರ್ ಅವರ ಎರಡು ಕಣ್ಣುಗಳಿಂದ ನಾಲ್ವರು ಅಂಧಹೀನರಿಗೆ ಅತ್ಯಾಧುನಿಕ ಹೊಸ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ದೃಷ್ಟಿ ನೀಡಲಾಗಿದೆ.

ದೇವಪ್ರಿಯೆ ಆಸೆ ತೀರಿಸಲು ಮೂರು ತಾಸು ಕಾದು ಕುಳಿತಿದ್ದ ಪುನೀತ್ ರಾಜ್ ಕುಮಾರ್! ದೇವಪ್ರಿಯೆ ಆಸೆ ತೀರಿಸಲು ಮೂರು ತಾಸು ಕಾದು ಕುಳಿತಿದ್ದ ಪುನೀತ್ ರಾಜ್ ಕುಮಾರ್!

Davanagere Villagers Decides To Eye Donation Inspired By Puneeth Rajkumar

ಎರಡು ಕಣ್ಣುಗಳನ್ನು ಭಾಗಗಳನ್ನಾಗಿ ಮಾಡಿ ನಾಲ್ವರಿಗೆ ದೃಷ್ಟಿಯನ್ನು ನೀಡಲಾಗಿದೆ. ಸಾಮಾನ್ಯವಾಗಿ ನೇತ್ರದಾನ ಮಾಡಿದವರ ಕಣ್ಣುಗಳನ್ನು ಇಬ್ಬರಿಗೆ ನೀಡುತ್ತೇವೆ. ಆದರೆ ಅಪ್ಪು ಅವರ ಕಣ್ಣುಗಳನ್ನು ವಿಭಿನ್ನವಾಗಿ ಶಸ್ತ್ರಕ್ರಿಯೆ ಮಾಡಿ ನಾಲ್ವರಿಗೆ ನೀಡಲಾಗಿದೆ. ಅವರ ಕಣ್ಣುಗಳನ್ನು ಪಡೆದವರು ಚೆನ್ನಾಗಿದ್ದಾರೆ, ಒಬ್ಬ ಮಹಿಳೆ ಮತ್ತು ಮೂವರು ಪುರುಷರಿಗೆ ಕಣ್ಣುಗಳನ್ನು ದಾನಮಾಡಿದ್ದು ಎಲ್ಲರೂ ವಯಸ್ಕರಾಗಿದ್ದಾರೆ.1994ರಲ್ಲಿ ಅವರ ಕುಟುಂಬ ನಮ್ಮ ನಾರಾಯಣ ನೇತ್ರಾಲಯದಲ್ಲಿ ಡಾ ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರು ಸೇರಿ ಡಾ ರಾಜ್ ಕುಮಾರ್ ನೇತ್ರದಾನ ಕೇಂದ್ರ ಉದ್ಘಾಟಿಸಿದರು. 2006ರಲ್ಲಿ ಅಣ್ಣಾವ್ರು ತೀರಿಕೊಂಡಾಗ ಅವರ ಕಣ್ಣುಗಳು ದಾನವಾದವು. 2017ರಲ್ಲಿ ಪಾರ್ವತಮ್ಮನವರು ತೀರಿಹೋದಾಗ ಅವರ ಕಣ್ಣುಗಳು ದಾನವಾದವು. ಮೊನ್ನೆ ಶುಕ್ರವಾರ ಪುನೀತ್ ಅವರ ಜೀವನ ದುರಂತದಲ್ಲಿ ಕೊನೆಯಾದಾಗ ಆ ದುಃಖದ ಮಧ್ಯೆ ಕೂಡ ನಮ್ಮ ಸಂಸ್ಥೆಗೆ ನೇತ್ರದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪುನೀತ್ ಜೀವ ಕಾಪಾಡುವ ಗೋಲ್ಡನ್ ಅವರ್ ಮಿಸ್ ಆಗಿದ್ದು ಹೇಗೆ?ಪುನೀತ್ ಜೀವ ಕಾಪಾಡುವ ಗೋಲ್ಡನ್ ಅವರ್ ಮಿಸ್ ಆಗಿದ್ದು ಹೇಗೆ?

ಇದು ಪುನೀತ್ ಅವರ ಅಭಿಮಾನಿಗಳ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಗ್ರಾಮದ ಅರವತ್ತಕ್ಕೂ ಹೆಚ್ಚು ಜನ ನೇತ್ರ ದಾನ ಮಾಡಲು ನಿರ್ಧರಿಸಿದ್ದಾರೆ. ಅಧಿಕ ಯುವಕರು, ಯುವತಿಯರು ಹಾಗೂ ಗ್ರಾಮದ ಜನರು ನೇತ್ರದಾನ ಮಾಡುವ ಸಂಕಲ್ಪ ತೊಟ್ಟು ಪತ್ರಕ್ಕೆ ಸಹಿ ಕೂಡ ಹಾಕಿದ್ದಾರೆ. ಪುನೀತ್ ಅಗಲಿದ ದಿನ ಇಡೀ ಗ್ರಮದ ಜನ ಊಟವಿಲ್ಲದೇ, ಮನೆಯ ಸದಸ್ಯರನ್ನು ಕಳೆದುಕೊಂಡಂತೆ ಮರುಕ ವ್ಯಕ್ತಪಡಿಸಿತ್ತು. ಶೋಕದ ಮಡುವಿನಲ್ಲಿ ಮುಳುಗಿತ್ತು. ಅಪ್ಪು ನೃತ್ರದಾನದ ಸುದ್ದಿ ಕೇಳಿ ತಾವೂ ಕೂಡ ನೇತ್ರದಾನ ಮಾಡುವ ಮೂಲಕ ಗೌರವ ಸಲ್ಲಿಸಲು ಈ ನಿರ್ಧಾರ ಮಾಡಿದ್ದಾರೆ. ಪುನೀತ್ ಕಳೆದುಕೊಂಡ ನೋವು ಗ್ರಾಮದಲ್ಲಿ ಇನ್ನೂ ಮರೆಯಾಗಿಲ್ಲ. ಪುನೀತ್ ಅವರ ಆದರ್ಶ ಮೈಗೂಡಿಸಿಕೊಳ್ಳುವ ಮೂಲಕ 60ಕ್ಕೂ ಅಧಿಕ ಮಂದಿ ಕಣ್ಣು ದಾನ ಮಾಡಲು ಚಟ್ಟೋಬಹಳ್ಳಿ ಗ್ರಾಮಸ್ಥರು ಮುಂದಾಗಿದ್ದಾರೆ.

ಅಪ್ಪು ಅನೇಕ ಜನರಿಗೆ ಸಹಾಯ ಮಾಡಿದ್ದಲ್ಲದೆ ಕಣ್ಣು ದಾನ ಮಾಡಿದ್ದರು. ಅವರು ಕಣ್ಣು ದಾನ ಮಾಡಿದ್ದಕ್ಕೆ ಪುನೀತ್ ಅವರ ದಾರಿಯಲ್ಲೇ ಅಭಿಮಾನಿಗಳು ಹೋಗಲು ಶುರು ಮಾಡಿದ್ದಾರೆ‌. ಕೇವಲ 110 ಮನೆಗಳಿರೋ ಚಿಕ್ಕ ಊರಲ್ಲಿ 60ಕ್ಕೂ ಅಧಿಕ ಜನರು ಕಣ್ಣು ದಾನ ಮಾಡಲು ಮುಂದಾಗುವ ಮೂಲಕ ರಾಜ್ಯಕ್ಕೆ ಚಟ್ಟೋಬನಹಳ್ಳಿ ತಾಂಡ ಮಾದರಿಯಾಗಿದೆ.

Davanagere Villagers Decides To Eye Donation Inspired By Puneeth Rajkumar

ಇನ್ನೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 16ರಂದು ಚಲನಚಿತ್ರ ವಾಣಿಜ್ಯ ಮಂಡಲಿ ಪುನೀತ್ ರಾಜುಕುಮಾರ್ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಆಯೋಜಿಸಿದೆ. ಶ್ರದ್ದಾಂಜಲಿ ವೇಳೆ ಗೌರವ ಸಮರ್ಪಣೆ ರೀತಿಯಲ್ಲಿ ಹಾಡೊಂದನ್ನು ರಚನೆ ಮಾಡಲಾಗಿದೆ. ಹಾಡಿನ ಎರಡು ಸಾಲನ್ನು ಬರಹಗಾರ ನಾಗೇಂದ್ರ ಪ್ರಸಾದ್ ರಿವೀಲ್ ಮಾಡಿದ್ದಾರೆ. 'ಮುತ್ತು ರಾಜ ಹೆತ್ತ ಮುತ್ತು ಎತ್ತ ಹೋದಿಯೋ' ಎಂದು ಆರಂಭವಾಗುವ ಈ ಹಾಡು ಪುನೀತ್ ನಮನಕ್ಕೆ ರಚನೆಯಾಗಿದೆ. ಅಪ್ಪು ಒಡನಾಟದ ಪ್ರತೀ ಕ್ಷಣವನ್ನು ನೆನಪಿಸೋ ಈ ಹಾಡನ್ನು ವಿನಯ್ ಪ್ರಕಾಶ್ ಹಾಡಿದ್ದಾರೆ.

ಜೊತೆಗೆ ಇಂದಿನಿಂದ ಮೈಸೂರು ಡಿಆರ್‌ಸಿ ಮಲ್ಟಿಪ್ಲಸ್ ಮಾಲೀಕರಿಂದ ಅಪ್ಪು ಶ್ರದ್ಧಾಂಜಲಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಪ್ಪು ಸ್ಮರಣಾರ್ಥವಾಗಿ ಒಂದು ವಾರ ಅಪ್ಪು ಸಿನಿಮಾ ಪ್ರಸಾರ ಮಾಡಲು ನಿರ್ಧರಿಸಲಾಗಿದೆ ಎಂದು ಓನರ್ ವೈಶಾಲಿ ಹೇಳಿದ್ದಾರೆ. ಇಂದು ಗೀತನಮನ, ದೀಪನಮನ,ಪುಪ್ಪನಮನ ನಡೆದಿದೆ.

English summary
After the death of Kannada actor Puneet Rajukumar he donned eyes. Around 60 villagers of Davanagere district have decided to donate eyes like Puneet rajkumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X