ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ, ಚನ್ನಗಿರಿ, ಹರಿಹರ ತಾಲೂಕುವಾರು ಮಳೆ ವಿವರ

|
Google Oneindia Kannada News

ದಾವಣಗೆರೆ, ಅಕ್ಟೋಬರ್ 07: ದಾವಣಗೆರೆ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 13.80 ಮಿ.ಮೀ ಸರಾಸರಿ ಉತ್ತಮ ಮಳೆಯಾಗಿದ್ದು, ಒಟ್ಟು ರೂ. 29.05 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ.

ಚನ್ನಗಿರಿ ತಾಲ್ಲೂಕಿನಲ್ಲಿ 14.73 ಮಿ.ಮೀ, ದಾವಣಗೆರೆ 8.58 ಮಿ.ಮೀ, ಹರಿಹರ 14.05 ಮಿ.ಮೀ, ಹೊನ್ನಾಳಿ 19.60 ಮಿ.ಮೀ., ಜಗಳೂರು 12.08 ಮಿ.ಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 13.80 ಮಿ.ಮೀ ವಾಸ್ತವ ಮಳೆಯಾಗಿದೆ.

ದಾವಣಗೆರೆಯಲ್ಲಿ ಮಳೆ ರಗಳೆ: ಕೊಚ್ಚಿ ಹೋಯ್ತು ರೈತರ ಬೆಳೆ!ದಾವಣಗೆರೆಯಲ್ಲಿ ಮಳೆ ರಗಳೆ: ಕೊಚ್ಚಿ ಹೋಯ್ತು ರೈತರ ಬೆಳೆ!

ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು ರೂ.2 ಲಕ್ಷ ಮತ್ತು 3 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು ರೂ.2 ಲಕ್ಷ ಹಾಗೂ 1 ಕಚ್ಚಾ ಮನೆ ತೀವ್ರ ಹಾನಿಯಾಗಿದ್ದು ರೂ.2 ಲಕ್ಷ, 1 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು ರೂ.0.40 ಲಕ್ಷ ಸೇರಿದಂತೆ ಒಟ್ಟು ರೂ.6.40 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.

Davanagere Taluk Hobli level Rain record as on October 07, 2021

ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 1 ಕಚ್ಚಾ ಮನೆ ತೀವ್ರ ಹಾನಿಯಾಗಿದ್ದು ರೂ.1.50 ಲಕ್ಷ ಮತ್ತು 10 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು ರೂ.3 ಲಕ್ಷ ಹಾಗೂ 3 ಎಕರೆ ಜೋಳದ ಬೆಳೆ ಹಾನಿಯಾಗಿದ್ದು ರೂ.0.75 ಲಕ್ಷ ಸೇರಿದಂತೆ ಒಟ್ಟು ರೂ. 5.25 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.

ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು ರೂ.0.80 ಲಕ್ಷ ಮತ್ತು 1 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು ರೂ.0.40 ಲಕ್ಷ ಹಾಗೂ 1 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು ರೂ. 0.30 ಲಕ್ಷ ಸೇರಿದಂತೆ ಒಟ್ಟು ರೂ.1.50 ಅಂದಾಜು ನಷ್ಟ ಸಂಭವಿಸಿರುತ್ತದೆ.

ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 15 ಎಕರೆ ಮೆಕ್ಕೆ ಜೋಳದ ಬೆಳೆ ಹಾನಿಯಾಗಿದ್ದು ರೂ. 15.00 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ

ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು ರೂ.0.90 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಳೆ ಮುನ್ಸೂಚನೆ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳ ಕಾಲ ಕರ್ನಾಟಕ ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿದ್ಯುತ್ ಸಂಪರ್ಕ ವ್ಯತ್ಯಯ:
ದಾವಣಗೆರೆಯ 220/66/11 ಕೆ.ವಿ ಎಸ್.ಆರ್.ಎಸ್ ಸ್ವೀಕರಣಾ ಕೇಂದ್ರದಿಂದ ಹೊರಡುವ 66.ಕೆ.ವಿ ಕುಕ್ಕವಾಡ ಪ್ರಸರಣ ಮಾರ್ಗದಲ್ಲಿ ತುರ್ತಾಗಿ ನಿರ್ವಾಹಣ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಅ.7 ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 66/ಕೆ.ವಿ. ಕುಕ್ಕವಾಡ, ಶ್ಯಾಗಲೆ, ಸಂತೇಬೆನ್ನೂರು, ಕೆರೆಬಿಳಚಿ, ಬಸವಾಪಟ್ಟಣ ಮತ್ತು ತ್ಯಾವಣಗಿ ವಿದ್ಯುತ್ ವಿತರಣ ಕೇಂದ್ರಗಳಿಂದ ಸರಬರಾಜಾಗುವ 11 ಕೆ.ವಿ ವಿದ್ಯುತ್ ಮಾರ್ಗಗಳಲ್ಲಿ ದಾವಣಗೆರೆ ಮತ್ತು ಚನ್ನಗಿರಿ ತಾಲ್ಲೂಕಿನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಕೆಲವೆಡೆ ಅಕ್ಟೋಬರ್ 8ರಂದು ಇದೇ ಅವಧಿಯಲ್ಲಿ ವಿದ್ಯುತ್ ಪ್ರಸರಣ ವ್ಯತ್ಯಯವಾಗಲಿದೆ.

ಕುಕ್ಕವಾಡ 66/11 ಕೆ.ವಿ ವ್ಯಾಪ್ತಿಯ ಕುಕ್ಕವಾಡ, ಕೊಲಕುಂಟೆ, ಗಿರಿಯಾಪುರ, ಕೈದಾಳೆ, ಹದಡಿ, ಕಲಬಂಡೆ, ಲೋಕಿಕೆರೆ, ಬಲ್ಲೂರು, ಕನಗೊಂಡನಹಳ್ಳಿ, ಮತ್ತಿ, ನಾಗರಸನಹಳ್ಳಿ, ಹೂವಿನಮಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಶ್ಯಾಗಲೆ 66/11 ಕೆ.ವಿ ವ್ಯಾಪ್ತಿಯ ಶ್ಯಾಗಲೆ, ಕಂದ್ಗಲ್ಲು, ಕೋಡಿಹಳ್ಳಿ, ಗೋಣಿವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳು. ಸಂತೇಬೆನ್ನೂರು 66/11 ಕೆ.ವಿ ವ್ಯಾಪ್ತಿಯ ದೊಡ್ಡ ಮಲ್ಲಾಪುರ, ಸಿದ್ದನಮಠ, ಕಾಕನೂರು, ಸಂತೇಬೆನ್ನೂರು, ಬೆಳ್ಳಿಗನೂಡು, ನಿಂಬಾಪುರ, ಅರಳಿಕಟ್ಟೆ, ತಣಿಗೆರೆ, ಚಿಕ್ಕಬೆನ್ನೂರು, ಹೀರೆಕೊಗನೂರು, ದೊಡ್ಡಬ್ಬಿಗೆರೆ, ಅಬ್ಬಿಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಕೆರೆಬಿಳಚಿ 66/11 ಕೆ.ವಿ ವ್ಯಾಪ್ತಿಯ ಕೆರೆಬಿಳಚಿ, ಹೊಸೂರು, ಚನ್ನಾಪುರ, ಆಲೂರು, ಸೋಮಲಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಬಸವಾಪಟ್ಟಣ 66/11 ಕೆ.ವಿ ವ್ಯಾಪ್ತಿಯ ಬಸವಾಪಟ್ಟಣ, ಹರ್ಲಿಪುರ, ಹೊಸಹಳ್ಳಿ, ಮರಬನಹಳ್ಳಿ, ಚಿರದೋನಿ, ಯಲ್ಲೋದಹಳ್ಳಿ, ಪುನ್ಯಸ್ಥಳ, ಸಂಗಾಹಳ್ಳಿ, ಸಿದ್ದೇಶ್ವರ ನಗರ, ನಿಲೋಗಲ್, ಕಂಚುಗಾರನಹಳ್ಳಿ, ದಾಗಿನಕಟ್ಟೆ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ತ್ಯಾವಣಿಗಿ 66/11 ಕೆ.ವಿ ವ್ಯಾಪ್ತಿಯ ತ್ಯಾವಣಿಗಿ, ನೆಲ್ಕುದುರೆ, ದೊಡ್ಡಗಟ್ಟೆ, ಕತ್ತಲಗೆರೆ, ಕಾರಿಗನೂರು, ಬೆಳಲಗೆರೆ, ಹರೆಹಳ್ಳಿ, ನವಿಲೆಹಾಳು, ಕಬ್ಬಳ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Recommended Video

ಚಹರ್ ತನ್ನ ಹುಡುಗಿಗೆ ಸ್ಟೇಡಿಯಂನಲ್ಲೇ ಲವ್ ಪ್ರಪೋಸ್ ಮಾಡಿದ್ದನ್ನ ನೋಡಿ ಎಲ್ರೂ ಶಾಕ್ | Oneindia Kannada

https://kannada.oneindia.com/news/davanagere/heavy-rain-lashes-in-davanagere-district-crops-destroyed-236269.html

English summary
Heavy to moderate rainfall recorded in Davanagere, Here is Taluk/Hobli level rainfall data recorded as on October 07
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X