ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೋಮ‌ ಮಾಡಿದ ರೇಣುಕಾಚಾರ್ಯ ಮೇಲೆ‌ ಕೇಸ್ ದಾಖಲಿಸಲು ಮುಂದಾದ ತಹಶೀಲ್ದಾರ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 12: ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಶುಕ್ರವಾರ ಶಾಸಕ ಎಂ.ಪಿ ರೇಣುಕಾಚಾರ್ಯ ದಂಪತಿ ಹೋಮ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲು ಮುಂದಾದ ತಾಲ್ಲೂಕು ಆಡಳಿತದ ವಿರುದ್ಧ ಕೋವಿಡ್ ಸೋಂಕಿತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Recommended Video

Renukacharya ಅವರು ಹೋಮ ಮಾಡಿ ಸಂಕಷ್ಟಕ್ಕೀಡಾದರು | Oneindia Kannada

ತಹಶೀಲ್ದಾರ ವಿರುದ್ಧ ಘೋಷಣೆ ಕೂಗಿದ ಸೋಂಕಿತರು, ತಹಶೀಲ್ದಾರ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಅವರು ಬರುವವರೆಗೆ ಉಪಹಾರ ಸೇವಿಸುವುದಿಲ್ಲ ಎಂದು ಧರಣಿ ಕುಳಿತರು. ಕೋವಿಡ್ ಕೇರ್ ಸೆಂಟರ್‌ನಲ್ಲಿ ನಮಗೆಲ್ಲ ಒಳ್ಳೆಯ ತಿಂಡಿ, ಊಟ, ಉತ್ತಮ ವಾತಾವರಣ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಶಾಸಕ ರೇಣುಕಾಚಾರ್ಯ ಸಹ ಇಲ್ಲೇ ತಂಗಿದ್ದಾರೆ. ಉಸ್ತುವಾರಿಯನ್ನು ಉತ್ತಮವಾಗಿಯೇ ನಿಭಾಯಿಸುತ್ತಿದ್ದಾರೆ. ಇಂಥ ವೇಳೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದರೆ ಸುಮ್ಮನಿರಲ್ಲ ಎಂಬ ಎಚ್ಚರಿಕೆ ನೀಡಿದರು.

ಮಾಜಿ ಶಾಸಕರ ಕುಮ್ಮಕ್ಕಿನಿಂದ ಪ್ರಕರಣ ದಾಖಲಿಸಲು ತಹಶೀಲ್ದಾರ ಮುಂದಾಗಿರುವುದು ಖಂಡನೀಯ. ಎಷ್ಟೋ ಕೋವಿಡ್ ಕೇರ್ ಸೆಂಟರ್‌ನಲ್ಲಿ ಉತ್ತಮ ಸೌಲಭ್ಯ ಇಲ್ಲ. ಅಲ್ಲಿ ಹೋಗಿ ಸರಿಪಡಿಸುವುದನ್ನು ಬಿಟ್ಟು ಉತ್ತಮ ಕಾರ್ಯ ಮಾಡುತ್ತಿರುವ ಜಾಗಕ್ಕೆ ಬಂದು ಯಾಕೆ ತೊಂದರೆ ಕೊಡುತ್ತೀರಾ ಎಂದು ಸೋಂಕಿತರು ಪ್ರಶ್ನೆ ಮಾಡಿದ್ದಾರೆ.

Davanagere: Tahasildar To File Case Against MP Renukacharya For Performing Dhanvantari Homa At Covid Care Centre

ಪ್ರಕರಣ ದಾಖಲಿಸುವಂತೆ ಶಾಸಕ ಪಟ್ಟು
ಇನ್ನು ಹೋಮ ಮಾಡಿಸಿದ್ದಕ್ಕೆ ನನ್ನ ಮೇಲೆ ಪ್ರಕರಣ ದಾಖಲಿಸುವಂತೆ ಶಾಸಕ ಎಂ.ಪಿ ರೇಣುಕಾಚಾರ್ಯ ಪಟ್ಟುಹಿಡಿದ ಪ್ರಸಂಗವೂ ನಡೆಯಿತು‌. "ತಾಲೂಕು ಆಡಳಿತ, ಸಿಪಿಐ ನನ್ನ ಮೇಲೆ ಕೇಸ್ ಹಾಕಲಿ. ಇಂತ ನೂರಾರು ಪ್ರಕರಣ ಎದುರಿಸಿದ್ದೇನೆ. ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಬರಲಿ ನೋಡೋಣ, ಬಂಧಿಸಲಿ. ಎಲ್ಲಿಗೆ ಹೋಗುತ್ತೆ ನೋಡೋಣ. ಎಸ್ಪಿ ಅವರು ಬೇಕಾದರೆ ಕೇಸ್ ಹಾಕಲಿ. ಇಲ್ಲಿಗೆ ಬಂದು ಸೋಂಕಿತರ ಯೋಗಕ್ಷೇಮ ವಿಚಾರಿಸಿದ್ದೀರಾ. ನನ್ನ ಕೊನೆಯ ಉಸಿರು ಇರುವವರೆಗೆ ಯಾವ ಅಧಿಕಾರಿಗಳು ಏನೂ ಮಾಡಕ್ಕಾಗಲ್ಲ. ನನ್ನ ಮೇಲೆ ಕೇಸ್ ಹಾಕ್ತೀರಾ. ತಾಕತ್ತಿದ್ದರೆ ಎಸ್ಪಿನೇ ಬಂದು ಕೇಸ್ ಹಾಕಲಿ ನೋಡಿಕೊಳ್ಳುತ್ತೇನೆ. ನನ್ನನ್ನು ಹೆದರಿಸ್ತೀರಾ. ಇದಕ್ಕೆ ಜಗ್ಗುವುದಿಲ್ಲ'' ಎಂದು ರೇಣುಕಾಚಾರ್ಯರಿಗೆ ಹೇಳಿದರು.

"ನಾನು ಯಾವ ಪಕ್ಷ ಅಂತಾ ನಾನು ಇಲ್ಲಿಗೆ ಬಂದಿಲ್ಲ. ಹೊನ್ನಾಳಿ- ನ್ಯಾಮತಿ ತಾಲ್ಲೂಕಿನ ಜನರ ರಕ್ಷಣೆಗೆ ಬಂದಿದ್ದೇನೆ.‌ ಮಾಜಿ ಶಾಸಕರು ಕೇಸ್ ಹಾಕಲಿ ಎಂದು ಹೇಳಿದ್ದಾರಂತೆ. ಬಡವರ ಪರವಾಗಿ ಸದಾ ನಾನು ಇರುತ್ತೇನೆ. ನಾನು ಎಲ್ಲಿಯೂ ಹೋಗುವುದಿಲ್ಲ. ಕೋವಿಡ್ ಕೇರ್ ಸೆಂಟರ್‌ನಲ್ಲೇ ಇರುತ್ತೇನೆ. ಕೆಲವರಿಗೆ ಇಲ್ಲಿ ಮಾಡಿರುವ ಉತ್ತಮ ವ್ಯವಸ್ಥೆ ಮಾಡಿದ್ದನ್ನು ನೋಡಿ ಕೆಲವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ನಾನು ಸತ್ತರೂ ಇಲ್ಲಿಂದ ಹೋಗುವುದಿಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

Davanagere: Tahasildar To File Case Against MP Renukacharya For Performing Dhanvantari Homa At Covid Care Centre
English summary
Honnali Tahasildar To File Case Against MLA MP Renukacharya For Performing Dhanvantari Homa At Arabagatte Covid Care Centre. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X