• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆ; ಪ್ಲಾಸ್ಮಾ ಫೆರೋಸಿಸ್ ಚಿಕಿತ್ಸೆ, ಮಹಿಳೆಗೆ ಜೀವದಾನ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಫೆಬ್ರವರಿ 28: ಗರ್ಭಾವಸ್ಥೆಯಲ್ಲಿ ರಕ್ತನಾಳಗಳ ತೊಂದರೆಯಿಂದಾಗಿ ಪ್ರಾಣಾಪಾಯಕ್ಕೆ ಸಿಲುಕಿದ್ದ ಗರ್ಭಿಣಿಯನ್ನು ಪ್ಲಾಸ್ಮಾ ಫೆರೋಸಿಸ್‌ ಎಂಬ ಅಪರೂಪದ ಚಿಕಿತ್ಸೆಯ ಮೂಲಕ ದಾವಣಗೆರೆ ಬಾಪೂಜಿ ಆಸ್ಪತ್ರೆಯ ವೈದ್ಯರ ತಂಡ ಬದುಕಿಸಿದೆ.

ಚಿತ್ರದುರ್ಗದ ಮಹಿಳೆ ಬಾಪೂಜಿ ಆಸ್ಪತ್ರೆಗೆ ದಾಖಲಾಗಿದ್ದರು. ವಿಪರೀತ ರಕ್ತದೊತ್ತಡ ಸಹಿತ ಹಲವು ಬದಲಾವಣೆಗಳು ಹೆರಿಗೆ ಸಂದರ್ಭದಲ್ಲಿ ಉಂಟಾಗಿತ್ತು. ಇದನ್ನು ಪೋಸ್ಟ್‌ ಪಾರ್ಟಮ್‌ ಟಿಎಂಎ ಎಂದು ಕರೆಯಲಾಗುತ್ತದೆ.

ಆಯುರ್ವೇದ ಸ್ನಾತಕೋತ್ತರ ಪದವೀಧರರಿಗೆ ಶಸ್ತ್ರ ಚಿಕಿತ್ಸೆ ತರಬೇತಿ ನೀಡಲಾಗುತ್ತೆ

ಇದರಿಂದ ಮೂತ್ರಪಿಂಡದ ವೈಫಲ್ಯ, ಪಾರ್ಶ್ವವಾಯು, ಅಪಸ್ಮಾರ, ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗಿದ್ದರಿಂದ ಮಹಿಳೆ ಪ್ರಾಣಾಪಾಯಕ್ಕೆ ಸಿಲುಕಿದ್ದರು. ರಕ್ತದಲ್ಲಿರುವ ಪ್ಲಾಸ್ಮಾವನ್ನೇ ತೆಗೆದು ಬೇರೆ ಪ್ಲಾಸ್ಮಾ ನೀಡುವ ಪ್ಲಾಸ್ಮಾ ಫೆರೋಸಿಸ್‌ ಚಿಕಿತ್ಸೆಯನ್ನು ಆಕೆಗೆ ನೀಡಲಾಯಿತು.

ಮೊದಲ ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವುಹಾನ್ ಆಸ್ಪತ್ರೆಯಲ್ಲಿ WHO ತಜ್ಞರು

"ಈ ಚಿಕಿತ್ಸೆಯನ್ನು ಈ ಮಹಿಳೆಗೆ ಐದು ಬಾರಿ ಮಾಡಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿ ಗುಣಮುಖರಾಗಿದ್ದಾರೆ" ಎಂದು ಮೂತ್ರಪಿಂಡ ತಜ್ಞ ಡಾ. ಮೋಹನ್‌ ಆರ್‌. ಹೇಳಿದ್ದಾರೆ.

ತುರ್ತು ಚಿಕಿತ್ಸೆ ನೆಪದಲ್ಲಿ ದುರ್ಬಳಕೆಯಾಯಿತಾ ಝೀರೊ ಟ್ರಾಫಿಕ್?

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಮಾತ್ರ ಇರುವ ಈ ಚಿಕಿತ್ಸೆ ಬಾಪೂಜಿ ಆಸ್ಪತ್ರೆಯಲ್ಲಿ ಬಡ, ಸಾಮಾನ್ಯ ಜನರಿಗೂ ನೀಡಲು ಆಸ್ಪತ್ರೆ ಆಡಳಿತ ಮಂಡಳಿಯ ಶಾಮನೂರು ಶಿವಶಂಕರಪ್ಪ, ಎಸ್‌. ಎಸ್‌. ಮಲ್ಲಿಕಾರ್ಜುನ್‌ ನಿರ್ಧರಿಸಿದ್ದರು.

ಒಂದು ಬಾರಿಗೆ 35 ಸಾವಿರದಿಂದ 40 ಸಾವಿರ ವೆಚ್ಚವಾಗುತ್ತದೆ. ಆದರೆ ಬಾಪೂಜಿಯಲ್ಲಿ ಐದು ಬಾರಿ ಪ್ಲಾಸ್ಮಾ ಫೆರೋಸಿಸ್‌ ಚಿಕಿತ್ಸೆಯನ್ನು 50 ಸಾವಿರದ ಒಳಗೆ ನೀಡಲಾಗಿದೆ.

ಡಾ. ಅಗರವಾಲ್, ಡಾ. ಜಗದೀಶ್ವರಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ವಿಜಯಲಕ್ಷ್ಮಿ ಮಲ್ಯ, ಡಾ. ಸಹನಾ ಜಿ.ವಿ. ಮತ್ತು ತಂಡದ ಸಹಕಾರದಿಂದ ಯಶಸ್ವಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಯಿತು ಎಂದು ಡಾ. ಮೋಹನ್‌ ಆರ್‌. ತಿಳಿಸಿದರು.

English summary
Chitradurga based pregnant woman got new life after plasmapheresis treatment at Bapuji hospital Davangere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X