ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಂಡತಿ ಜೊತೆ ಜಗಳ; ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಫೆಬ್ರವರಿ 07: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಟಿಕ್ ಟಾಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿ ನೇಣಿಗೆ ಶರಣಾದ ಘಟನೆ ದಾವಣಗೆರೆಯ ಮಾಗನಹಳ್ಳಿ ಗ್ರಾಮದಲ್ಲಿ‌ ನಡೆದಿದೆ. ನಾಗರಾಜು ಅಲಿಯಾಸ್ ರಾಜು (34) ನೇಣು ಹಾಕಿಕೊಂಡು ಸಾವನ್ನಪ್ಪಿದ ವ್ಯಕ್ತಿ.

ಹೆಂಡತಿಯ ಜೊತೆ ಜಗಳ ಮಾಡಿಕೊಂಡು ಈತ ಹೆಂಡತಿಯಿಂದ ದೂರವಾಗಿದ್ದ ಎನ್ನಲಾಗಿದೆ. ಇದರಿಂದ ಮನನೊಂದು ಮದ್ಯಪಾನ ದಾಸನಾಗಿದ್ದರು. ನಾಗರಾಜ್ ಟಿಕ್ ಟಾಕ್ ನಲ್ಲಿಯೇ ಕಾಲ ಕಳೆಯುತ್ತಿದ್ದು, ಮೂರು ದಿನಗಳ ಹಿಂದೆ ನೇಣು ಬಿಗಿದುಕೊಂಡಂತೆ ವಿಡಿಯೋ ಮಾಡಿ ಇದನ್ನು ಟಿಕ್‌ಟಾಕ್ ‌ನಲ್ಲಿ ಅಪ್ಲೋಡ್ ಮಾಡಿ ನಂತರ ನೇಣು ಹಾಕಿಕೊಂಡಿದ್ದಾರೆ. ನೇಣು ಬಿಗಿದುಕೊಂಡ ವಿಡಿಯೋ ಟಿಕ್ ಟಾಕ್ ನಲ್ಲಿ ಈಗ ಸಾಕಷ್ಟು ವೈರಲ್ ಆಗಿದೆ.

ಟಿಕ್‌ ಟಾಕ್ ಮಾಡಿ ಅಣಕಿಸಿದ್ದಕ್ಕೆ ಹೆಂಡತಿಗೆ ಚಾಕು ಹಾಕಿದ ಗಂಡ

ನೇಣು ಹಾಕಿಕೊಂಡ ನಾಗರಾಜ್ ಎರಡು ಮದುವೆ ಮಾಡಿಕೊಂಡಿದ್ದು, ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಮೊದಲನೇ ಹೆಂಡತಿ‌ ಬಿಟ್ಟು ಹೋಗಿದ್ದು, ಮತ್ತೊಂದು ಮದುವೆ ಮಾಡಿಕೊಂಡಿದ್ದ. ಆದರೆ ಕೆಲ ದಿನಗಳ ಹಿಂದೆ ಎರಡನೇ ಹೆಂಡತಿಯ ಜೊತೆ ಕೂಡ ಜಗಳವಾಡಿದ್ದ. ಇದಕ್ಕೆ ಮನನೊಂದ ನಾಗರಾಜ್ ನೇಣುಗೆ ಶರಣಾಗಿದ್ದಾನೆ. ಈತನನ್ನೇ ನಂಬಿಕೊಂಡ ಕುಟುಂಬ ಈಗ ಅನಾಥವಾಗಿದೆ.. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
A man committed suicide by making video in tiktok in Maganahalli village in Davanagere for family dispute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X