ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಕ್ರಾಸ್ ಬ್ರೀಡ್ ಹೇಳಿಕೆಗೆ ಸಚಿವ ಈಶ್ವರಪ್ಪ ತಿರುಗೇಟು

By ದಾವಣಗೆರೆ
|
Google Oneindia Kannada News

ದಾವಣಗೆರೆ, ಡಿಸೆಂಬರ್ 4: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕ್ರಾಸ್ ಬೀಡ್ ಅಂತ ಏನೋ ಇತ್ತೀಚಿಗೆ ಹೇಳುತ್ತಿದ್ದಾರೆ, ಕ್ರಾಸ್ ಬೀಡ್ ಅಂತ ಯಾವುದಕ್ಕೆ‌ ಕರೀತಾರೆ ಎಂದು ಕಾರ್ಯಕರ್ತರಿಗೆ ಕೆ.ಎಸ್ ಈಶ್ವರಪ್ಪ ಕೇಳಿದರು. ನಂತರ ನಾಯಿಗಳಿಗೆ ಕ್ರಾಸ್ ಬೀಡ್ ಅಂತಾ ಕರೀತಿವಿ ಎಂದು ಕಾರ್ಯಕರ್ತರು ಕೂಗಿ ಹೇಳಿದರು.

ದಾವಣಗೆರೆಯ ಜಿಎಂಐಟಿ ಕಾಲೇಜಿನ ಆವರಣದಲ್ಲಿ ನಡೆದ ಗ್ರಾಮ ಸ್ವರಾಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಫಿರೋಜ್ ಖಾನ್ ಮದುವೆಯಾದರು. ಅದನ್ನು ಏನ್ ಅಂತ ಕರೀತಾರೆ, ಸೋನಿಯಾ ಗಾಂಧಿ, ರಾಜೀವ್ ಗಾಂಧಿಯನ್ನು ಮದುವೆಯಾದರು, ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಮದುವೆಯಾದರು. ಇದಕ್ಕೆ ಸಿದ್ದರಾಮಯ್ಯ ಏನ್ ಹೇಳ್ತಾರೆ ಎಂದು ಪ್ರಶ್ನಿಸಿದರು.

ಬಡ ಹಿಂದೂ ಹೆಣ್ಣು ಮಕ್ಕಳ ನೋವು ನಿಮಗೆ ಏನ್ ಗೊತ್ತು ಸಿದ್ದರಾಮಯ್ಯನವರೇ, ನನ್ನ ಬಳಿ ಬನ್ನಿ ಸಾವಿರಾರು ಉದಾಹರಣೆಗೆ ಕೊಡ್ತಿನಿ. ಯಾರೋ ಮುಸ್ಲಿಂ ಹುಡುಗ ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋದರೆ ಏನ್ ಮಾಡುತ್ತೀರಾ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.

Davanagere: Minister KS Eshwarappa Reacted About Siddaramaiahs Cross-Beed Statement

ಏನೇ ಆಗಲಿ ರಾಜ್ಯದಲ್ಲಿ ನಾವು ಲವ್ ಜಿಹಾದ್ ನಿಷೇಧ ಕಾಯ್ದೆ ತರುತ್ತೇವೆ ಎಂದ ಸಚಿವ ಈಶ್ವರಪ್ಪ, ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆಯೂ ಪ್ರತಿಕ್ರಿಯಿಸಿದರು.

ಮುದಿ ಹಸುಗಳನ್ನು ಬಿಜೆಪಿ ಆರ್.ಎಸ್.ಎಸ್ ನವರ ಮನೆ ಮುಂದೆ ಕಟ್ಟಿ ಹಾಕಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಹಸುಗಳನ್ನು ನಾವು ತಾಯಿ ಎಂದು ನಂಬಿ ಪೂಜಿಸುತ್ತೇವೆ, ಸಿದ್ದರಾಮಯ್ಯನವರೇ, ನಿಮ್ಮ ತಾಯಿಯನ್ನು ಕಟುಕರ ಮನೆ ಮುಂದೆ ಬಿಡುತ್ತೀರಾ ಎಂದು ಕಿಡಿಕಾರಿದರು.

ಗ್ರಾಮ ಪಂಚಾಯತಿ ಚುನಾವಣೆಯ ಪ್ರಣಾಳಿಕೆಯಲ್ಲಿ ತಾಕತ್ ಇದ್ದರೆ, ಲವ್ ಜಿಹಾದ್ ಗೆ ಬೆಂಬಲ ಕೊಡುತ್ತೇವೆ, ಗೋವುಗಳನ್ನು ಎಲ್ಲಿ ಬೇಕಾದರೂ ಕಡಿಬಹುದು ಎಂದು ಹೇಳಿ. ಗೋಹತ್ಯೆ ನಿಷೇಧ ಕಾಯ್ದೆ, ಲವ್ ಜಿಹಾದ್ ನಿಷೇಧ ಕಾಯ್ದೆ ತರುತ್ತೇವೆ ಅಂತಾ ನಾವು ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಬಹಿರಂಗವಾಗಿ ಸವಾಲು ಹಾಕಿದರು.

English summary
Minister KS Eshwarappa responded to the statements of former CM Siddaramaiah at the Gram Swaraj programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X