ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರ್ವಜನಿಕರಿಗೆ ದಾವಣಗೆರೆಯ ಗ್ಲಾಸ್ ಹೌಸ್ ಬಂದ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮಾರ್ಚ್ 14: ವಿಶ್ವವನ್ನೇ ನಡುಗಿಸುತ್ತಿರುವ ಕೊರೊನಾ ವೈರಸ್ ಈಗ ಮಧ್ಯ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಮೇಲೂ ಪರಿಣಾಮ ಬೀರಿದೆ. ರಾಜ್ಯ ಸರ್ಕಾರ ಹೊರಡಿಸಿದ ಕೊರೊನಾ ಎಮರ್ಜೆನ್ಸಿಯಿಂದ ದಾವಣಗೆರೆಯ ಗಾಜಿನ ಮನೆಗೆ ಬರುವ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗಿದೆ.

ಒಂದು ವಾರಗಳ ಕಾಲ ಸಾರ್ವಜನಿಕ ಸಭೆ ಸಮಾರಂಭ, ಮದುವೆ, ಪಬ್ ಗಳು, ಶಾಲಾ‌ ಕಾಲೇಜುಗಳು ಹಾಗೂ ಸಾರ್ವಜನಿಕರ ಅತಿ ಹೆಚ್ಚು ಸೇರುವ ಸ್ಥಳಗಳನ್ನು ಸಂಪೂರ್ಣ ಬಂದ್ ಮಾಡು ಆದೇಶ ನೀಡಿರುವುದರಿಂದ ಏಷ್ಯಾದ ಎರಡನೇ ಅತಿ ದೊಡ್ಡ ಗಾಜಿನ ಮನೆ ಬಣಗುಡುತ್ತಿದೆ. ಇಲ್ಲಿಗೆ ರಜಾ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರು.

ಕೊರೊನಾ ಬಗ್ಗೆ ಯಡಿಯೂರಪ್ಪ ತುರ್ತು ಸಭೆ; 18 ಅಂಶಗಳು ಕೊರೊನಾ ಬಗ್ಗೆ ಯಡಿಯೂರಪ್ಪ ತುರ್ತು ಸಭೆ; 18 ಅಂಶಗಳು

Davanagere Glass House Closed Due To Corona Effect

ಆದರೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶದಿಂದಾಗಿ ಇಂದಿನಿಂದ ಗಾಜಿನ‌ ಮನೆಗೆ ಸಾರ್ವಜನಿಕ ‌ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ ಮುಂದಿನ ಆದೇಶದ ವರೆಗೂ ಸಂಪೂರ್ಣ ಬಂದ್ ಆಗಿರಲಿದೆ. ಇದರಿಂದ ರಜೆ ಸಮಯದಲ್ಲಿ ದಾವಣಗೆರೆಯ ಜನತೆ ಇದ್ದಂತಹ ಒಂದೇ ಒಂದು ಪ್ರವಾಸಿ ತಾಣವೂ ಈಗ ಬಂದ್ ಆದಂತಾಗಿದೆ. ಕೊರೊನಾ ವೈರಸ್ ನ ಬಿಸಿ ದಾವಣಗೆರೆಯ ‌ಜನತೆ ಮೇಲೂ ಪರಿಣಾಮ ಬೀರಿದೆ.

English summary
The famous glass house in davanagere closed from today due to government order. Government issued an order yesterday to close all the public gathering on precautionary measure to coronavirus,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X