ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯ 3ನೇ ಕೊರೊನಾ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ

|
Google Oneindia Kannada News

ದಾವಣೆಗೆರೆ, ಮಾರ್ಚ್ 30: ಜಿಲ್ಲೆಯ 3ನೇ ಕೊರೊನಾ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.

Recommended Video

ದಾವಣಗೆರೆಯಲ್ಲಿ ಬೀದಿಗಿಳಿದು ಅಂಗಡಿ ಬಂದ್ ಮಾಡಿಸಿದ ಜಿಲ್ಲಾಧಿಕಾರಿಗಳು | Quarantine | Davanagere | Police

ಕೊರೊನಾ ಸೋಂಕಿತ ವ್ಯಕ್ತಿಯು ಅಮೆರಿಕದ ಚಿಕಾಗೋ ಸಮೀಪದ ಪ್ರಡ್ಯೂ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.

ಕೊರೊನಾ 3ನೇ ಸ್ಟೇಜಿನಲ್ಲಿದೆಯೆ?: ಭಯಬೇಡ ಎಂದ ಕೇಂದ್ರ ಸರ್ಕಾರಕೊರೊನಾ 3ನೇ ಸ್ಟೇಜಿನಲ್ಲಿದೆಯೆ?: ಭಯಬೇಡ ಎಂದ ಕೇಂದ್ರ ಸರ್ಕಾರ

-ಮಾರ್ಚ್ 15ರಂದು ಅಮೆರಿಕದಲ್ಲಿರುವ ತನ್ನ ವಿಶ್ವವಿದ್ಯಾಲಯದ ಹಾಸ್ಟೆಲ್ ನಿಂದ ಊಬರ್ ಕ್ಯಾಬ್‍ನಲ್ಲಿ ಚಿಕಾಗೊಗೆ ಟ್ರಾವೆಲ್ ಮಾಡಿದ್ದ, ಅಲ್ಲಿಂದ ಏರ್ ಇಂಡಿಯಾ ಎಐ 126 ವಿಮಾನದಲ್ಲಿ ಸೀಟ್ ನಂಬರ್ 12ರಲ್ಲಿ ಭಾರತಕ್ಕೆ ಪ್ರಯಾಣಿಸಿದ್ದ.

Davanagere Corona Infected Person Travel History

-ಮಾರ್ಚ್ 17ರಂದು ಬೆಳಗ್ಗೆ 12.30ಕ್ಕೆ ದೆಹಲಿ ಬಂದಿದ್ದ. ಅಲ್ಲಿಂದ ಎಐ 504 ಏರ್ ಇಂಡಿಯಾ ವಿಮಾನದ ಸೀಟ್ ನಂಬರ್ ಡಿ 17ರಲ್ಲಿ ಪ್ರಯಾಣಿಸಿ ಬೆಂಗಳೂರಿಗೆ 3 ಗಂಟೆ ತಲುಪಿದ್ದ. ವಿಮಾನ ನಿಲ್ದಾಣದಿಂದ 4 ಗಂಟೆಗೆ ಸ್ವಂತ ಕಾರಿನಲ್ಲಿ ಹೊರಟು ಹತ್ತು ಗಂಟೆಗೆ ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ತಲುಪಿದ್ದ .

-ನಂತರದ ದಿನಗಳಲ್ಲಿ ಅಲ್ಲಿಂದ ಸರ್ವೇಕ್ಷಣಾ ತಂಡದ ಅವಲೋಕನದಲ್ಲಿದ್ದರು.

- ಮಾರ್ಚ್ 24ರಂದು ಭೀಮಸಮುದ್ರದಿಂದ ದಾವಣಗೆರೆಯ ಜೆಎಂಐಟಿ ಗೆಸ್ಟ್ ಹೌಸ್‍ಗೆ ಬಂದಿದ್ದ ಆತ ಗೆಸ್ಟ್ ಹೌಸ್ ನಲ್ಲಿ ಹೋಮ್ ಕ್ವಾರೆಂಟೈನ್ ನಲ್ಲಿದ್ದ.

-ಮಾರ್ಚ್ 26ರಂದು ಆತನ ಗಂಟಲು ದ್ರವದ ಸ್ಯಾಂಪಲ್‌ನ್ನು ಶಿವಮೊಗ್ಗದ ವಿ.ಆರ್.ಡಿ.ಎಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

-ಮಾರ್ಚ್ 28ರಂದು ಆತನ ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು.

ಕೊರೊನಾ ಪಾಸಿಟಿವ್ ಬಂದಿರುವ ಸೋಂಕಿತನ ಜೊತೆ ನೇರ ಸಂಪರ್ಕದಲ್ಲಿದ್ದ ಎಂಟು ಮಂದಿಯನ್ನು ಗುರುತಿಸಿದ್ದು, ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ. ಈಗಾಗಲೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ.

English summary
The District has released the travel history of the 3rd Corona infected person in Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X