• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆ: ಮಗಳು, ಮೊಮ್ಮಗಳ ರಂಗಿನಾಟಕ್ಕೆ ಅಜ್ಜನ ಕೊಲೆ: ಕಂಬಿ ಎಣಿಸುತ್ತಿರುವ ಆರೋಪಿಗಳು

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಮಾರ್ಚ್ 19: ಮಗಳು ಹಾಗೂ ಮೊಮ್ಮಗಳ ಅನೈತಿಕ ಸಂಬಂಧ ನೋಡಿದ ಅಜ್ಜನನ್ನು ಕೊಲೆ ಮಾಡಿ ತುಂಗಭದ್ರಾ ಕಾಲುವೆಗೆ ಬಿಸಾಕಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ನಡೆದಿದೆ.

ಮಂಜಪ್ಪ (65) ಕೊಲೆಯಾದ ವೃದ್ದನಾಗಿದ್ದು, ಮಗಳು ಉಷಾ ಹಾಗೂ ಮೊಮ್ಮಗಳು ಸಿಂಧು ಒಂದೇ ಮನೆಯಲ್ಲಿ ವಾಸವಾಗಿದ್ದರು. ಮನೆಯ ಯಜಮಾನನಾದ 68 ವರ್ಷದ ತಂದೆ ಮಂಜಪ್ಪ ತನ್ನ ಕೆಲಸವನ್ನು ತಾನು ಮಾಡಿಕೊಂಡು ಆರಾಮವಾಗಿದ್ದನು. ಆದರೆ ಮಗಳು ಉಷಾ ಹಾಗು ಉಷಾಳ ಮಗಳು ಸಿಂಧುಳ ಕೆಟ್ಟ ಚಟಕ್ಕೆ ವೃದ್ಧ ಮಂಜಪ್ಪ ಬಲಿಯಾಗಿದ್ದಾನೆ.

ದಾವಣಗೆರೆ ಜಿಲ್ಲೆಯಲ್ಲಿ ಮತ್ತೆ ಹಕ್ಕಿ ಜ್ವರದ ಶಂಕೆ: ಒಂದೇ ವಾರದಲ್ಲಿ 8 ಸಾವಿರ ಕೋಳಿಗಳ ಸಾವುದಾವಣಗೆರೆ ಜಿಲ್ಲೆಯಲ್ಲಿ ಮತ್ತೆ ಹಕ್ಕಿ ಜ್ವರದ ಶಂಕೆ: ಒಂದೇ ವಾರದಲ್ಲಿ 8 ಸಾವಿರ ಕೋಳಿಗಳ ಸಾವು

ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದ ಶ್ರೀ‌ನಿವಾಸ ಎಂಬ ವ್ಯಕ್ತಿಯ ಜೊತೆ ಸೇರಿಕೊಂಡು ಮಂಜಪ್ಪನನ್ನು ಅಮಾನುಷವಾಗಿ ಕೊಲೆ‌ ಮಾಡಿ ಅಡಿಕೆ‌ ತೋಟದ ಬಳಿ ಇರುವ ತುಂಗಭದ್ರಾ ನಾಲೆಯಲ್ಲಿ ಬಿಸಾಕಿದ್ದಾರೆ.

ಅಲ್ಲದೆ, ಉಷಾ ಹಾಗೂ ಸಿಂಧು ಅನೈತಿಕ ಸಂಬಂಧಕ್ಕೆ ಕಟ್ಟು ಬಿದ್ದಿದ್ದರು. ಮದುವೆಯಾಗಿ ಒಂದು ಮಗುವಿರುವ ಶ್ರೀನಿವಾಸನ ಜೊತೆ ಉಷಾ ಹಾಗು ಸಿಂಧು ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಅನೈತಿಕ ಸಂಬಂಧದ ರುಚಿ‌ ಹತ್ತಿದ್ದ ತಾಯಿ, ಮಗಳು ಶ್ರೀನಿವಾಸ್ ಜೊತೆ ಕಣ್ಣಮುಚ್ಚಾಲೆ ಆಟವಾಡುತ್ತಿದ್ದರು.

ಇದೆಲ್ಲವನ್ನು ಕಣ್ಣಾರೆ ನೋಡಿದ ವೃದ್ಧ ಮಂಜಪ್ಪ, ತಾಯಿ-ಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವೃದ್ಧ ಮಂಜಪ್ಪನ ಇಲ್ಲಸಲ್ಲದ ಮಾತುಗಳಿಂದ ಕ್ರೋಧಗೊಂಡಿದ್ದರು.‌ ಈ ಅಜ್ಜನ‌ ಕಾಟ ಸಹಿಸಿಕೊಳ್ಳುವುದಕ್ಕಿಂತ ಈತನ ಯಮಪುರಿಗೆ ಅಟ್ಟುವುದೇ ಲೇಸೆಂದು ತೋಟಕ್ಕೆ ಕರೆದುಕೊಂಡು ಹೋಗಿ ಮದ್ಯ ಕುಡಿಸಿದ್ದಾರೆ. ಶ್ರೀನಿವಾಸನು ಅಜ್ಜನ ತಲೆಗೆ ಹೊಡೆದು ಕಾಲುವೆ ನೀರಿಗೆ ಹಾಕಿ ಬಂದಿದ್ದ ಎನ್ನಲಾಗಿದೆ.

   ವಿದ್ಯಾರ್ಥಿನಿಗೆ ಕೊರೊನಾ ಹಿನ್ನೆಲೆ, ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದ ಆಕೆಯ ಸ್ನೇಹಿತರು | Oneindia Kannada

   ಅನೈತಿಕ ಸಂಬಂಧಕ್ಕೆ ಕಟ್ಟುಬಿದ್ದಿದ್ದ ಉಷಾ ಹಾಗು ಸಿಂಧು ಇಬ್ಬರೂ ಮಾಸ್ಟರ್ ಪ್ಲಾನ್ ಮಾಡಿ ಶ್ರೀನಿವಾಸನಿಗೆ ಸುಪಾರಿ ಕೊಟ್ಟಿದ್ದರು. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಹೊನ್ನಾಳಿ ಸರ್ಕಲ್ ಇನ್ಸ್‌ಪೆಕ್ಟರ್ ದೇವರಾಜ್ ಬೇಧಿಸಿದ್ದಾರೆ. ಮೂವರನ್ನು ವಶಕ್ಕೆ ಪಡೆದ ಪೊಲೀಸರು ಸ್ಥಳ‌ ಮಹಜರು ನಡೆಸಿದ್ದು, ಗ್ರಾಮದಲ್ಲಿ ಇವರ ಕೃತ್ಯ ನೋಡಿ ಇವರಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ಹಿಡಿಶಾಪ ಹಾಕಿದ್ದಾರೆ‌.

   English summary
   In the village of Kulagatte in the Honnali taluk of Davanagere district in which a 65 year old grandfather was found murdered and thrown into the Tungabhadra canal.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X